ಉಕ್ರೇನ್‌ನ ಚರ್ಚ್‌ವೊಂದರಲ್ಲಿ (Church of Ukraine) ಕ್ರೈಸ್ತ ಧರ್ಮಗಳು ಮತ್ತು ಭಕ್ತರು (Priests, worshippers) ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ (Viral Video) ಆಗಿದೆ. ಸುಮಾರು ಆರು ಗಂಟೆಗಳ ಕಾಲ ಇವರ ಜಗಳ ನಡೆದಿದೆ. ಸೇಂಟ್ ಮೈಕೆಲ್ ಕ್ಯಾಥೆಡ್ರಲ್‌ನಲ್ಲಿ ಈ ಜಗಳ ಉಂಟಾಗಿದ್ದು ಪಾದ್ರಿಗಳು ಪರಸ್ಪರ ಕುರ್ಚಿ, ಮೇಜುಗಳನ್ನು ಎಸೆಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಮಾಸ್ಕೋ ಪ್ಯಾಟ್ರಿಯಾರ್‌ಕೇಟ್‌ನ ಬೆಂಬಲಿಗರನ್ನು ಉಕ್ರೇನ್‌ನ ಆರ್ಥೊಡಾಕ್ಸ್ ಚರ್ಚ್‌ಗೆ (OCU) ವರ್ಗಾಯಿಸಿದ ಬಳಿಕ ಸೇಂಟ್ ಮೈಕೆಲ್ ಕ್ಯಾಥೆಡ್ರಲ್ ಚರ್ಚೆಗೆ ಮಾಸ್ಕೋ ಪ್ಯಾಟ್ರಿಯಾರ್‌ಕೇಟ್‌ನ ಬೆಂಬಲಿಗರು ದಾಳಿ ಮಾಡಲು ಮುಂದಾಗಿದ್ದು, ಉಕ್ರೇನಿಯನ್ ಪರ ಕ್ರಿಶ್ಚಿಯನ್ನರು ಮತ್ತು ಮಾಸ್ಕೋ ಪ್ಯಾಟ್ರಿಯಾರ್ಕೇಟ್ ಬೆಂಬಲಿಗರ ನಡುವೆ ಜಗಳ ಉಂಟಾಗಿದೆ. ಸುಮಾರು ಆರು ಗಂಟೆಗಳ ಕಾಲ ನಡೆದ ಜಗಳದಲ್ಲಿ ಕೋಲು, ಕಲ್ಲು ಮತ್ತು ಕುರ್ಚಿಗಳನ್ನು ಪರಸ್ಪರ ಎಸೆಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಘಟನೆ ಸ್ಥಳಕ್ಕೆ ಮಾಸ್ಕೋ ಬೆಂಬಲಿತ ಚರ್ಚ್‌ನ ನಾಯಕ ಮೆಟ್ರೋಪಾಲಿಟನ್ ಫಿಯೋಡೋಸಿ ಆಗಮಿಸಿದಾಗ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಂಡಿತು. ಆತ ಉಕ್ರೇನ್ ವಿರುದ್ಧ ಅಂತರ್- ಧರ್ಮೀಯ ಸಂಘರ್ಷ ಮತ್ತು ವಿಧ್ವಂಸಕ ಚಟುವಟಿಕೆಗಳನ್ನು ಪ್ರಚೋದಿಸುವ ಆರೋಪಗಳನ್ನು ಎದುರಿಸುತ್ತಿದ್ದಾನೆ. ಸೇಂಟ್ ಮೈಕೆಲ್ಸ್ ಕ್ಯಾಥೆಡ್ರಲ್‌ನಲ್ಲಿ ನಡೆದ ಜಗಳದ ವೇಳೆ ಹಲವಾರು ಮಂದಿ ಗಾಯಗೊಂಡಿದ್ದು, ತಕ್ಷಣವೇ ಅವರಿಗೆ ವೈದ್ಯಕೀಯ ನೆರವು ನೀಡಲಾಗಿದೆ.
In Cherkasy, supporters of the Moscow 🇷🇺 Patriarchate ✝️ stormed Ukraine's 🇺🇦 largest Orthodox church, St. Michael's Cathedral, after it transitioned to the Orthodox Church ✝️ of Ukraine 🇺🇦 (OCU). Clashes broke out, with gates broken and pepper spray used. pic.twitter.com/xiGVkyJ4o6
— Matteo Cocchi (@MatteoCocchi85) October 20, 2024
ವರದಿಗಳ ಪ್ರಕಾರ ಉಕ್ರೇನಿಯನ್ ಆರ್ಥೊಡಾಕ್ಸ್ ಚರ್ಚ್ (UOC) ಪ್ರತಿನಿಧಿಗಳು ಸೇಂಟ್ ಮೈಕೆಲ್ಸ್ ಕ್ಯಾಥೆಡ್ರಲ್‌ಗೆ ಬಲವಂತವಾಗಿ ನುಗ್ಗಿರುವುದು ಘಟನೆಗೆ ಕಾರಣ ಎನ್ನಲಾಗಿದೆ. ಫಾದರ್ ನಜಾರಿ ಜಸಾನ್ ಸ್ಕಿ ಘಟನೆಯನ್ನು ಖಂಡಿಸಿದ್ದು, ಇದು ಉಕ್ರೇನಿಯನ್ ನೈತಿಕತೆಯನ್ನು ದುರ್ಬಲಗೊಳಿಸುತ್ತದೆ ಎಂದು ಹೇಳಿದ್ದಾರೆ.
Viral Video: ರಾಷ್ಟ್ರಗೀತೆ ಕೇಳಿ ಕೆಲಸ ಬಿಟ್ಟು ಎದ್ದು ನಿಂತ ಪೇಂಟರ್; ಗೇಲಿ ಮಾಡಿದ ವಿದ್ಯಾರ್ಥಿಗಳು!
ಪ್ರಾದೇಶಿಕ ಗವರ್ನರ್ ಇಗೊರ್ ಟ್ಯಾಬ್ಯುರೆಟ್ಸ್ ಅವರು ಘಟನೆಯ ಬಗ್ಗೆ ಕಾನೂನು ಜಾರಿ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. ಪವಿತ್ರ ಸ್ಥಳದ ಮೇಲಿನ ಉಕ್ರೇನ್ ಹಕ್ಕುಗಳಿಗೆ ಅವರು ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ ಎಂದು ನಜಾರಿ ಹೇಳಿದ್ದಾರೆ.