Saturday, 26th October 2024

Shankaranarayan Bhat Column: ಮುಂದೇನಿದೆಯೋ ಅದುವೇ ಬದುಕು

ಇದೇ ಜೀವನ

ಶಂಕರನಾರಾಯಣ ಭಟ್

ಎಷ್ಟೊಂದು ಸರಳ ಅಂತ ಅನಿಸುತ್ತಿಲ್ಲವೆ? ಹೌದು. ಹೆಚ್ಚಿನ ಸಮಯ ನಾವೆಲ್ಲ‌ ಕಾಣದಿದ್ದದ್ದನ್ನು ಊಹಿಸಿ ವಿಚಲಿತ ರಾಗಿಬಿಡುತ್ತೇವೆ. ನಮಗೇನು ಬೇಕು, ಎಷ್ಟು ಬೇಕು, ನಾನೇನಾಗಬೇಕು, ಯಶಸ್ವೀ ಬದುಕು ಅಂದರೇನು ಎಂಬೆಲ್ಲ ಗೊಂದಲದ ಸಿಲುಕಿ ಒದ್ದಾಡುತ್ತಿರುತ್ತೇವೆ. ಇಂದಿನ ದಿನವೇ ಸುಕೃತ ಎಂದು ಭಾವಿಸಿ, ಇಂದಿನ ದಿನವೇ
ನಿನ್ನಯ ಗತಿಯು ಎಂದು ತಿಳಿದರೆ ಎಲ್ಲವೂ ಸುಗಮ.

ಬದುಕು, ನಾವಂದುಕೊಂಡಷ್ಟು ಜಟಿಲವೂ ಅಲ್ಲ, ಸುಗಮವೂ ಅಲ್ಲ. ಆದರೆ ಅವಶ್ಯವಿರುವುದು ಇರುವ ಬದುಕಿನ ಸಂತೃಪ್ತಿ ಹೊಂದಿಸಂತೀಷ ಪಡುವುದು. ಇಂದು ಹೆಚ್ಚಿನವರು ತಮ್ಮ ಬದುಕನ್ನೇ ಹಾಳುಗೆಡಹುತ್ತಿರುವುದು ತಮ್ಮದ ಲ್ಲದ್ದಕ್ಕೂ ಆಸೆ ಪಡುವುದರಿಂದ. ಒಬ್ಬನಿಗೆ ಉದ್ಯೋಗದಲ್ಲಿ ಮುಂಬಡ್ತಿ ಸಿಕ್ಕಿತೆಂದರೆ, ರೈತನಿಗೆ ಉತ್ತಮ ಫಸಲು ದೊರಕಿತೆಂದರೆ, ದಿನಗೂಲಿಯವನಿಗೆ ಆ ದಿನದಕೆಲಸ ಸಿಕ್ಕಿತೆಂದರೆ, ಒಬ್ಬ ನಿರೀಗಿಯಾಗಿ ತನ್ನ ಕೆಲಸ ತಾನು ಮಾಡಿಕೊಂಡು ಇತರರಿಗೆ ಹೊರೆಯಾಗದೇ ಇದ್ದರೆ ಅದೇ ಬದುಕಿನ ರಹಸ್ಯ.

ಹಣ, ಯಶಸ್ಸು, ಕೀರ್ತಿ, ಉನ್ನತ ಸ್ಥಾನ ಇವೆಲ್ಲ ಶಾಶ್ವತವಲ್ಲ. ಇಂದು ದೊರಕಿದ್ದು ನಾಳೆಯೂ ಹಾಗೇ ಇರುತ್ತದೆನ್ನ ಲಾಗದು. ಹೀಗಾಗಿ ನಿನ್ನೆ ಸಂತೀಷದಲ್ಲಿದ್ದವ ಇಂದು ದುಃಖಿಯಾಗಿಬಿಡುತ್ತಾನೆ. ಇನ್ನು, ಕೆಲವರಂತೂ ನಾಳಿನ ಚಿಂತೆಯ ಇಂದಿನ ಬಹು ಸುಂದರ ಕ್ಷಣವನ್ನೂ ಹಾಳುಗೆಡವಿಕೊಳ್ಳುತ್ತಾರೆ. ಸಮಸ್ಯೆ ಎದುರಿಸುವುದು ಹೇಗೆ? ಶ್ರೀಮಂತನಾಗುವುದು ಹೇಗೆ? ಬಂದ ಹಣವನ್ನು ಇನ್ನಾವ ರೀತಿ ತೊಡಗಿಸಿಕೊಂಡು ಇನ್ನೂ ಹೆಚ್ಚು ಶ್ರೀಮಂತನಾಗ ಬಹುದು ಎಂಬುದನ್ನು ತಿಳಿಸಲುಸಾಕಷ್ಟು ಪುಸ್ತಕಗಳು, ಭಾಷಣಕಾರರು ಸಿಗಬಹುದು.

ಆದರೆ ಬದುಕು ಕಲಿಯುವುದು ಹೇಗೆ ಎಂಬುದನ್ನು ತಿಳಿಹೇಳುವವರು ತೀರಾ ಕಡಿಮೆ. ಕಾರಣ ಇಷ್ಟೇ. ಬದುಕಿಗೆ ಯಾವುದೇ ನಿರ್ದಿಷ್ಟ -ರ್ಮುಲಾಗಳಿಲ್ಲ. ಸಮಯ, ಸಂದರ್ಭ, ಪರಿಸ್ಥಿತಿಗಳಿಗನುಸಾರ ಬದಲಾಗುತ್ತಲೇ ಇರುತ್ತದೆ. ಅವನ್ನು ಸರಿಯಾಗಿ ಅರ್ಥಮಾಡಿಕೊಂಡವ ಮಾತ್ರ ಸುಂದರ ಬದುಕು ಸಾಗಿಸಬಲ್ಲ. ನಾವು ಕೆಲವೊಮ್ಮೆ ಕಾಣು ತ್ತೇವೆ. ಅವರಲ್ಲಿ ಹೇಳಿಕೊಳ್ಳುವ ಯಾವುದೇ ಅಗಾಧ ಪ್ರಾವೀಣ್ತತೆ ಅಥವಾ ಗುಣಗಳಿಲ್ಲದಿದ್ದರೂ, ಸದಾ
ನಗು ನಗುತ್ತ, ಇತರರನ್ನೂ ನಗಿಸುತ್ತ, ಬಂದ ಕೆಲಸಗಳನ್ನು ನಿಭಾಯಿಸುತ್ತ, ಹೆಚ್ಚೇನೂ ನಿರೀಕ್ಷೆಯೂ ಇಲ್ಲದೇ, ಇತರರ ಗೋಜಿಗೆ ಹೋಗದೆ ಅಥವಾ ಇತರರೊಂದಿಗೆ ಹೋಲಿಸಿಕೊಳ್ಳದೆ ತಮ್ಮಷ್ಟಕ್ಕೆ ತಾವು ಇದ್ದು ಬಿಡುತ್ತಾರೆ.

ಅಂಥವರು ಇವತ್ತು ತಮ್ಮ ಮುಂದೇನಿದೆ ಎಂಬುದನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದಾರೆ ಅಂತಲೇ ಅರ್ಥ. ನಮ್ಮಲ್ಲಿ ಉಪ ದೇಶ ಮಾಡುವವರಿಗೂ, ಟೀಕಿಸುವವರಿಗೂ ಕಮ್ಮಿ ಇಲ್ಲ. ಆದರೆ ಅವನ್ನೆಲ್ಲ ತನಗನುಕೂಲವಾದ ರೀತಿ ಬಳಸಿಕೊಂಬವನೇ ನಿಜವಾದ ಜಾಣ. ಸುಂದರ ಬದುಕು ಅಂದರೆ ಯಶಸ್ವೀ ಬದುಕೆ? ಹಾಗಿದ್ದರೆ ಯಾವುದ ರಿಂದ ಯಶಸ್ಸು? ಯಶಸ್ಸನ್ನು ಅಳೆಯುವ ಮಾನದಂಡ ಯಾವುದು. ಒಬ್ಬ ನಿರ್ಗತಿಕ, ಏಕಾಏಕಿ ಲಾಟರಿ ಹೊಡೆದು ಶ್ರೀಮಂತನಾಗಿ ಬಿಟ್ಟರೆ ಆತ ಯಶಸ್ವೀ ಅನ್ನಬಹುದೇ? ಅನಾಯಾಸ ಬಂದ ಹಣವನ್ನು ಯಾವ ರೀತಿ ನಿರ್ವಹಿಸ ಬೇಕು ಎಂಬುದು ತಿಳಿಯದೇ ಹುಚ್ಚನಾದ ಪ್ರಸಂಗಗಳೂ ನಮ್ಮ ಕಣ್ಣ ಮುಂದೆ ಇರುವಾಗ, ಯಶಸ್ಸು ಎಂಬುದೂ ಕ್ಷಣಿಕ ಅನ್ನಬಹುದೆ? ಅಥವಾ ಇಂದು ಯಶಸ್ಸು ಅಂದುಕೊಂಡಿದ್ದು ನಾಳೆ ಪರಾಭವವಾಗಲೂ ಬಹುದೆ? ಕೈಗೆ ಸಿಕ್ಕ ಹಣವೇ ಮುಳುವಾದರೆ ಅದು ಬದುಕನ್ನೇ ಬರಡುಮಾಡಿ ಬಿಡುತ್ತದಲ್ಲವೆ? ಇನ್ನೂ ಒಂದು ವಿಷಯ.

ಅಂದುಕೊಂಡಿದ್ದೆಲ್ಲ ದಕ್ಕಿತು ಅಂದರೂ ಖಾಲಿತನ ಏಕೆ? ಬದುಕನ್ನು ಸರಿಯಾಗಿ ಅರ್ಥಮಾಡಿಕೊಳ್ಳದ್ದು ಅಂದರೆ ತಪ್ಪೇ? ಹೀಗಾಗಿಯೇ ಅನ್ನುವುದು ‘ಕಾಣದಿಹ ದಾರಿಯಲಿ ಮುಂಬರುವ ಕಷ್ಟಗಳ ಇಂದು ನೆನೆಯುತ ನೀನು ಮರುಗಲೇಕೆ? ಇಂದು ನಿನ್ನಯ ಗತಿಯು ಜೀವನದ ಸಂಸ್ಕೃತಿಯು, ಬೆಂದೊಡಲ ಬೆಂಕಿಯಲಿ ದಹಿಸಲೇಕೆ?’
ಎಂದು. ಇಂದು ಎನ್ನುವುದು ಮಾತ್ರ ಸತ್ಯ. ನಿನ್ನೆ ಸತ್ತು ಹೋಗಿದೆ; ನಾಳೆ ಇನ್ನೂ ಹುಟ್ಟಿಲ್ಲ. ಹೀಗಾಗಿ ಇವತ್ತಿನದೇ ಮುಖ್ಯ. ಇಂದು ಸರಿಯಾಗಿದ್ದರೆ ನಾಳೆ ತನ್ನಿಂದ ತಾನೆ ಸರಿ ಹೋಗುವುದು. ಇಂದು ಸರಿ ಇಲ್ಲದೆ, ನಾಳೆಯ ಒಳಿತನ್ನು ಬಯಸಿದರೆ ನಿರಾಸೆ, ಜಿಗುಪ್ಸೆ, ಬದುಕೇ ಅಸಹ್ಯ ಅನಿಸುತ್ತದೆ. ಅದಕ್ಕಾಗಿಯೇ ಅನ್ನುವುದು. ಆಶಾವಾದಿಯೂ
ಆಗಬೇಡ, ನಿರಾಶಾವಾದಿಯೂ ಆಗಬೇಡ. ವಾಸ್ತವವಾದಿ ಆಗು ಎಂದು. ಇಂದಿನ ದಿನವೇ ಸುಂದರ ದಿನವು!

ಇದನ್ನೂ ಓದಿ: Life Insurance Policy: ಎಲ್‌ಐಸಿ ಪಾಲಿಸಿದಾರರಿಗೆ ಗುಡ್‌ನ್ಯೂಸ್; ಸರೆಂಡರ್ ಮೌಲ್ಯ ಹೆಚ್ಚಳ