Saturday, 26th October 2024

Abhishek-Aishwarya: ಐಶ್ವರ್ಯ ಜತೆ ಡಿವೋರ್ಸ್‌ ವದಂತಿ ಬೆನ್ನಲ್ಲೇ ಮೌನ ಮುರಿದ ಅಭಿಷೇಕ್ ಬಚ್ಚನ್‌;‌ ವಿಡಿಯೋ ಫುಲ್‌ ವೈರಲ್‌

Abhishek-Aishwarya

ಮುಂಬೈ: ಸೆಲಿಬ್ರಿಟಿಗಳ ಡಿವೋರ್ಸ್‌ ಇತ್ತೀಚೆಗೆ ಸರ್ವೇ ಸಾಮಾನ್ಯ ಎಂಬಂತಿದೆ. ಅದರಲ್ಲೂ ಬಾಲಿವುಡ್‌ನಲ್ಲಂತೂ ಇದೊಂದು ಟ್ರೆಂಡ್‌ ಎಂಬಂತೆ ಚಾಲ್ತಿಯಲ್ಲಿದೆ. ಇತ್ತಿಚಿಗೆ ಹಲವು ದಿನಗಳಿಂದ ಭಾರೀ ಸದ್ದು ಮಾಡುತ್ತಿರುವ ವಿಚಾರವೆಂದರೆ ಅಭಿಷೇಕ್ ಬಚ್ಚನ್(Abhishek Bachchan) ಹಾಗೂ ಐಶ್ವರ್ಯಾ ರೈ(Aishwarya Rai) ಡಿವೋರ್ಸ್ ರೂಮರ್ಸ್(Abhishek-Aishwarya). ಇದರ ನಡುವೆ ಅಭಿಷೇಕ್, ನಿಮ್ರತ್ ಕೌರ್ ಜೊತೆ ಡೇಟಿಂಗ್ ಮಾಡ್ತಿದ್ದಾರೆ ಎನ್ನುವ ಸುದ್ದಿ ಕೂಡ ವೈರಲ್ ಆಗಿದೆ. ಈ ಎಲ್ಲದರ ನಡುವೆ ಈ ವದಂತಿ ಬಗ್ಗೆ ಈ ಹಿಂದೊಮ್ಮೆ ಅಭಿಷೇಕ್‌ ನೀಡಿದ್ದ ಸ್ಪಷ್ಟನೆ ವಿಡಿಯೋವೊಂದು ಭಾರೀ ಸದ್ದು ಮಾಡುತ್ತಿದೆ.

ಅಭಿಷೇಕ್‌ ಮತ್ತು ಐಶ್ವರ್ಯ ಅನಂತ್ ಅಂಬಾನಿ ಮದುವೆಯಲ್ಲಿ ಪ್ರತ್ಯೇಕವಾಗಿ ಕಾಣಿಸಿಕೊಂಡಿದ್ದರು. ಅದೂ ಐಶ್ವರ್ಯ ರೈ ಮತ್ತು ಅವರ ಪುತ್ರಿ ಆರಾಧ್ಯ ಬಚ್ಚನ್‌ ಕುಟುಂಬದಿಂದ ಆಗಾಗ ಪ್ರತ್ಯೇಕವಾಗಿ ಕಾಣ ಸಿಗುತ್ತಿರುತ್ತಾರೆ. ಇದೆಲ್ಲದರ ನಡುವೆ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ವಿಚ್ಛೇದನದ ವದಂತಿಗಳು ಮತ್ತೆ ಹುಟ್ಟಿಕೊಂಡಿವೆ. ಇದೀಗ, ವಿಚ್ಛೇದನದ ವದಂತಿಗಳ ನಡುವೆ ಅಭಿಷೇಕ್‌ ಅವರ ಹಳೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

2024 ರ ಪ್ಯಾರಿಸ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿದ್ದಾಗ ಅಭಿಷೇಕ್ ಬಚ್ಚನ್ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ವಿಚ್ಛೇದನದ ವದಂತಿಗಳನ್ನು ತಳ್ಳಿಹಾಕಿದರು. ಐಶ್ವರ್ಯಾ ರೈ ಅವರೊಂದಿಗಿನ ಸಂಬಂಧದ ಬಗ್ಗೆ ಮಾಧ್ಯಮಗಳು ಮತ್ತು ಪ್ರೇಕ್ಷಕರು ಮಾಡಿದ ಅವಲೋಕನಗಳ ಬಗ್ಗೆ ವರದಿಗಾರ ಅವರನ್ನು ಕೇಳಿದಾಗ, “ಅದರ ಬಗ್ಗೆ ನಾನು ನಿಮಗೆ ಹೇಳಲು ಏನೂ ಇಲ್ಲ. ದುಃಖಕರವೆಂದರೆ, ನೀವೆಲ್ಲರೂ ಸಂಪೂರ್ಣ ವಿಷಯವನ್ನು ತಿಳಿಯದೇ ಅದನ್ನು ಹರಡುತ್ತಿದ್ದೀರಿ. ನೀವು ಅದನ್ನು ಏಕೆ ಮಾಡುತ್ತಿದ್ದೀರಿ ಎಂದು ನನಗೆ ಅರ್ಥವಾಗಿದೆ. ನೀವು ಕೆಲವು ಕಥೆಗಳನ್ನು ಕಟ್ಟಲೇಬೇಕಿದೆ. ಪರವಾಗಿಲ್ಲ, ನಾವು ಸೆಲೆಬ್ರಿಟಿಗಳು, ನಾವು ಅದನ್ನು ಸ್ವೀಕರಿಸಲೇಬೇಕು. ಕ್ಷಮಿಸಿ, ಇನ್ನೂ ವಿವಾಹಿತ. ನಿಮಗಾಗಿ ಯಾವುದೇ ಸೆನ್ಸೇಶನಲ್‌ ಸುದ್ದಿಗಳು ನನ್ನ ಬಳಿ ಇಲ್ಲ ಎಂದಿದ್ದರು.

ಮತ್ತೊಂದೆಡೆ ಬಾಲಿವುಡ್‌ ಬಿಗ್‌ ಬಿ ಅಮಿತಾಬ್‌ ಬಚ್ಚನ್‌ ಮತ್ತು ಅಭಿಷೇಕ್‌ ಬಚ್ಚನ್‌ ಮುಂಬೈನಲ್ಲಿ ಬರೋಬ್ಬರಿ 25 ಕೋಟಿ ರೂ. ಮೌಲ್ಯದ ಆಸ್ತಿ ಖರೀದಿಸಿದ್ದಾರೆ(Bachchan Family). ಮುಂಬೈಯ ಮುಲುಂದ್‌ನಲ್ಲಿರುವ ರೆಸಿಡೆನ್ಸಿಯಲ್‌ ಪ್ರದೇಶದಲ್ಲಿ ಆಸ್ತಿ ಖರೀದಿ ಮಾಡಿದ್ದಾರೆ ಎನ್ನಲಾಗಿದೆ. ಇನ್ನು ಈ ರೆಸಿಡೆನ್ಸಿಯಲ್‌ ಪ್ರದೇಶ ಮುಂಬೈಯ ಕೇಂದ್ರ ಮತ್ತು ಪಶ್ಚಿಮ ಭಾಗವನ್ನು ಸಂಪರ್ಕಸುತ್ತದೆ ಎನ್ನವುದು ವಿಶೇಷ.

ಸುಪ್ರಸಿದ್ದ ರಿಯಲ್‌ ಎಸ್ಟೇಟ್‌ ಉದ್ಯಮ ಸಂಸ್ಥೆಯಾಗಿರುವ ಸ್ಕ್ವಾರ್‌ ಯಾರ್ಡ್ಸ್‌ ಈ ಬಗ್ಗೆ ಮಾಹಿತಿ ನೀಡಿದ್ದು, ಅಮಿತಾಬ್‌ ಬಚ್ಚನ್‌ ಮತ್ತು ಅವರ ಪುತ್ರ ಅಭಿಷೇಕ್‌ ಬಚ್ಚನ್‌ ಮುಂಬೈಯ ಮುಲುಂದ್‌ ಪ್ರದೇಶದಲ್ಲಿ 24.95 ಕೋಟಿ ಮೌಲ್ಯದ ಫ್ಲ್ಯಾಟ್‌ ಖರೀದಿ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆ ಪತ್ರಗಳ ಕಾರ್ಯಗಳು ಪೂರ್ನಗೊಂಡಿವೆ. ಇನ್ನು ಒಬೇರಾಯ್‌ ರಿಯಾಲ್ಟಿಸ್‌ ಪ್ರೀಮಿಯಂ ರೆಸಿಡೆನ್ಸಿಯಲ್‌ ಯೋಜನೆ ಇಟರ್ನಿಯಾ ಅಪಾರ್ಟ್‌ನಲ್ಲಿ ಫ್ಲ್ಯಾಟ್‌ ಖರೀದಿಸಿದ್ದಾರೆ. ಈ ಅಪಾರ್ಟ್‌ಮೆಂಟ್‌ನಲ್ಲಿ 3 BHK ಮತ್ತು 4 BHK ಫ್ಲ್ಯಾಟ್‌ಗಳು ಲಭ್ಯವಿವೆ.

ಈ ಸುದ್ದಿಯನ್ನೂ ಓದಿ: Abhishek-Aishwarya Fight: ಸಾರ್ವಜನಿಕವಾಗಿಯೇ ಕಿತ್ತಾಡಿಕೊಂಡ ಅಭಿಷೇಕ್‌ ಬಚ್ಚನ್‌-ಐಶ್ವರ್ಯಾ ರೈ