ನವದೆಹಲಿ: ಸಲೀಂ ಎಂಬ ಮುಸ್ಲಿಂ ಯುವಕ ಸಂಜು ಎಂದು ಹೆಸರು ಬದಲಾಯಿಸಿಕೊಂಡು 20 ವರ್ಷದ ಹಿಂದೂ ಯುವತಿಯನ್ನು ಪ್ರೀತಿಸಿ, ಮದುವೆಯಾಗುವುದಾಗಿ ಭರವಸೆ ನೀಡಿ ಗರ್ಭಿಣಿ (Physical Abuse) ಮಾಡಿದ್ದಾನೆ. ಆದರೆ ಆಕೆ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಕ್ಕೆ ಅವಳನ್ನು ಭೇಟಿಯಾಗಲು ಕರೆದು ತನ್ನ ಇಬ್ಬರು ಸ್ನೇಹಿತರ ಸಹಾಯದಿಂದ ಆಕೆಯನ್ನು ಕೊಲೆ ಮಾಡಿದ್ದಾನೆ. ದೆಹಲಿಯ ನಂಗ್ಲೋಯಿ ಪ್ರದೇಶದಲ್ಲಿ ಯುವತಿಯ ಶವ ಪತ್ತೆಯಾಗಿದ್ದು ಪೊಲೀಸ್ ತನಿಖೆ ನಡೆದಾಗ ಈ ವಿಚಾರ ಬೆಳಕಿಗೆ ಬಂದಿದೆ.
ಕೊಲೆಯಾದ ಯುವತಿ ದೆಹಲಿಯ ನಂಗ್ಲೋಯಿ ಪ್ರದೇಶದ ನಿವಾಸಿ ಸೋನಿಯಾ ಎಂದು ಗುರುತಿಸಲಾಗಿದೆ. ಇತ್ತೀಚೆಗೆ ಯುವತಿ ಕಾಣೆಯಾದ ನಂತರ ಆಕೆಯ ಕುಟುಂಬ ಸದಸ್ಯರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹಾಗೇ ‘ಸಂಜು’ ಎಂದು ಗುರುತಿಸಿಕೊಂಡಿದ್ದ ಹುಡುಗನ ಬಗ್ಗೆ ಕುಟುಂಬವು ಶಂಕೆ ವ್ಯಕ್ತಪಡಿಸಿತ್ತು. ನಂತರ ದೆಹಲಿಯ ರೋಹ್ಟಕ್ ಪ್ರದೇಶದಲ್ಲಿ ಯುವತಿಯ ಮೃತ ದೇಹ ಪತ್ತೆಯಾದಾಗ ಪೊಲೀಸರು ಈ ಪ್ರಕರಣದ ತನಿಖೆಯನ್ನು ದಾಖಲಿಸಿದ್ದಾರೆ.
ಕೊನೆಗೆ ಪೊಲೀಸರು ಆರೋಪಿ ಸಲೀಂನನ್ನು ಬಂಧಿಸಿದ್ದು, ವಿಚಾರಣೆಯ ಸಮಯದಲ್ಲಿ, ಆರೋಪಿ ಮತ್ತು ಯುವತಿ ಹಲವಾರು ತಿಂಗಳುಗಳಿಂದ ಪರಸ್ಪರ ಪರಿಚಿತರಾಗಿದ್ದು ಇವರ ನಡುವಿನ ಸಂಬಂಧ ಬೆಳಕಿಗೆ ಬಂದಿದೆ. ಆರೋಪಿಯು ಯುವತಿಯ ಜೊತೆ ದೈಹಿಕ ಸಂಬಂಧ ಬೆಳೆಸಿ ಗರ್ಭಿಣಿ ಮಾಡಿದ್ದನು. ಆದರೆ ಆಕೆ ಮದುವೆಯಾಗಲು ಒತ್ತಾಯಿಸಿದ್ದಕ್ಕೆ ಕರ್ವಾ ಚೌತ್ ಉಪವಾಸದಂದು ಮದುವೆಯಾಗುವುದಾಗಿ ಆಕೆಯನ್ನು ಕರೆದು ತನ್ನ ಇಬ್ಬರು ಸ್ನೇಹಿತರಾದ ರಿತಿಕ್ ಮತ್ತು ಪಂಕಜ್ ಅವರೊಂದಿಗೆ ಆಕೆಯನ್ನು ಕಾರಿನಲ್ಲಿ ಕರೆದೊಯ್ದು, ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಮೂವರು ಯುವತಿಯ ಮೃತ ದೇಹವನ್ನು 6 ಅಡಿ ಆಳದ ಸಮಾಧಿಯಲ್ಲಿ ಹೂತು ಹಾಕಿದ್ದರ ಕುರಿತು ಒಪ್ಪಿಕೊಂಡಿದ್ದಾನೆ.
ಯುವತಿಯು ಫೋನ್‍ನಲ್ಲಿ ಆರೋಪಿಯ ನಂಬರ್ ಅನ್ನು ಭೂತ್ ಎಂದು ಸೇವ್ ಮಾಡಿಕೊಂಡಿದ್ದಳಂತೆ. ಕುಟುಂಬದವರಿಗೆ ಯುವತಿಯು ಪ್ರೀತಿಸುತ್ತಿರುವ ವಿಷಯ ತಿಳಿದಿತ್ತು. ಆದರೆ ಮುಸ್ಲಿಂ ಎಂಬ ಸತ್ಯ ಗೊತ್ತಿರಲಿಲ್ಲವಂತೆ. ಇನ್ನು ಯುವತಿಗೆ ಇನ್ಸ್ಟಾಗ್ರಾಮ್ ಬಳಸುವ ಅಭ್ಯಾಸವೂ ಇದ್ದಿತ್ತು. ಅಲ್ಲಿ ಅವಳು ಆರೋಪಿಯೊಂದಿಗೆ ‘ಐ ಲವ್ ಭೂತ್’ ಎಂದು ಕೆಲವು ರೀಲ್‍ಗಳನ್ನು ಹಂಚಿಕೊಂಡಿದ್ದಳಂತೆ.
ಇದನ್ನೂ ಓದಿ:ಹಿಂದೂ ಹೆಸರು ಇಟ್ಟುಕೊಂಡು ‘ಲವ್ ಜಿಹಾದ್’ಗೆ ಯತ್ನ; ಸದ್ದಾಂ ಅನ್ಸಾರಿ ಅರೆಸ್ಟ್
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಸಲೀಂನನ್ನು ಬಂಧಿಸಿದ್ದಾರೆ. ಸಲೀಂಗೆ ಸಹಾಯ ಮಾಡಿದ ಇತರ ಇಬ್ಬರು ಯುವಕರನ್ನು ಸಹ ವಶಕ್ಕೆ ತೆಗೆದುಕೊಳ್ಳಲಾಗಿದೆ. ಕಾನೂನಿನ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪೊಲೀಸರು ಸಲೀಂ ವಿರುದ್ಧ ದೂರು ದಾಖಲಿಸಿದ್ದಾರೆ.