ಸಾವು ಯಾರಿಗೆ ಯಾವಾಗ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಈಗ ನೋಡಿದ ವ್ಯಕ್ತಿ ಕ್ಷಣಾರ್ಧದಲ್ಲೇ ನಮ್ಮ ಕಣ್ಣಮುಂದೆ ಕುಸಿದು ಬಿದ್ದು ಸಾವನಪ್ಪಿದ ಎಷ್ಟೋ ಘಟನೆಗಳು ನಡೆದಿವೆ. ಅದೇರೀತಿ ಇದೀಗ ಸ್ನೇಹಿತರೊಂದಿಗೆ ಮಾತನಾಡುವಾಗ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ಕೆಳಗೆ ಬಿದ್ದು ಸ್ಥಳದಲ್ಲೇ ಕೊನೆಯುಸಿರೆಳೆದ (Heart Attack) ಘಟನೆ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಘಟನೆ ಮಧ್ಯಪ್ರದೇಶದ ರೇವಾದಲ್ಲಿ ನಡೆದಿದೆ.
ಮೃತನನ್ನು ರೇವಾದ ಭಜರಂಗ್ ನಗರ ನಿವಾಸಿ ಪ್ರಕಾಶ್ ಸಿಂಗ್ ಬಘೇಲ್ (31) ಎಂದು ಗುರುತಿಸಲಾಗಿದೆ. ಅವರಿಗೆ ಹೃದಯ ಸ್ತಂಭನವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಪ್ರಕಾಶ್ ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವಂತಹ ವ್ಯಕ್ತಿ ಮತ್ತು ಪ್ರತಿದಿನ ವ್ಯಾಯಾಮ ಮಾಡುತ್ತಿದ್ದರು ಎಂದು ಅವರ ಸ್ನೇಹಿತರು ಹೇಳಿದ್ದಾರೆ.
ವೈರಲ್ ಆಗಿರುವ ಈ ವಿಡಿಯೊದಲ್ಲಿ ಪ್ರಕಾಶ್ ತನ್ನ ನಾಲ್ವರು ಸ್ನೇಹಿತರೊಂದಿಗೆ ಸಿರ್ಮೌರ್ ಜಂಕ್ಷನ್ನಲ್ಲಿರುವ ಅಂಗಡಿಯಲ್ಲಿ ಕುರ್ಚಿಯ ಮೇಲೆ ಕುಳಿತು ಮಾತನಾಡುತ್ತಿರುವಾಗ ಕುರ್ಚಿಯಿಂದ ಕೆಳಗೆ ಬಿದ್ದಿದ್ದಾರೆ. ಭಯಭೀತರಾದ ಅವರ ಸ್ನೇಹಿತರು ಅವರನ್ನು ಎತ್ತಿಕೊಂಡು ಮುಖದ ಮೇಲೆ ನೀರು ಚುಮುಕಿಸಿದ್ದಾರೆ. ಆದರೆ ಅವರು ಯಾವುದಕ್ಕೂ ಪ್ರತಿಕ್ರಿಯೆ ನೀಡಲಿಲ್ಲ. ನಂತರ ಅವರ ಸ್ನೇಹಿತರು ಅವರ ಎದೆಯನ್ನು ಹಲವಾರು ಬಾರಿ ಒತ್ತಿದ್ದಾರೆ ಆದರೆ ಅದರಿಂದ ಏನು ಪ್ರಯೋಜನವಾಗಲಿಲ್ಲ. ಅಂಗಡಿಯಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮರಾದಲ್ಲಿ ಈ ಎಲ್ಲಾ ದೃಶ್ಯ ಸೆರೆಯಾಗಿದೆ. ನಂತರ ಅವರ ಸ್ನೇಹಿತರು ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅಲ್ಲಿ ವೈದ್ಯರು ಅವರು ಸತ್ತಿದ್ದಾರೆ ಎಂದು ತಿಳಿಸಿದ್ದಾರೆ ಮತ್ತು ಹೃದಯಾಘಾತವೇ ಅವರ ಸಾವಿಗೆ ಕಾರಣ ಎಂದು ವೈದ್ಯರು ಹೇಳಿದ್ದಾರೆ.
#Watch: मध्य प्रदेश के रीवा जिले से एक हैरान करने वाला वीडियो सामने आया है। दोस्तों के साथ हंसते-बोलते हुए एक युवक अचानक नीचे गिर जाता है और उसकी मौके पर ही मौत हो जाती है। इस घटना का वीडियो तेजी से वायरल हो रहा है। डॉक्टर ने मौत का कारण हार्ट अटैक बताया है।#MadhyaPradesh #Rewa pic.twitter.com/MFhYvnMW1d
— Hindustan (@Live_Hindustan) October 24, 2024
ವಿಶೇಷವೆಂದರೆ, ಪ್ರಕಾಶ್ ಅವರ ಸಹೋದರ ವೈದ್ಯರ ಬಳಿ ಪ್ರಕಾಶ್ ಅವರಿಗೆ ಯಾವುದೇ ತೀವ್ರ ಕಾಯಿಲೆಯ ಇತಿಹಾಸವಿಲ್ಲ. ಅವರು ನಿತ್ಯ ವ್ಯಾಯಾಮ ಮಾಡುತ್ತಿದ್ದರು ಮತ್ತು ಆರೋಗ್ಯಕರ ಆಹಾರವನ್ನು ಸೇವಿಸುತ್ತಿದ್ದರು ಎಂದು ಹೇಳಿದ್ದಾರೆ.
ಇದನ್ನೂ ಓದಿ:ಅತ್ಯಾಚಾರಿಗಳಿಗಲ್ಲ, ಅತ್ಯಾಚಾರಕ್ಕೆ ಒಳಗಾದವರಿಗೆ ಈ ದೇಶದಲ್ಲಿ ಗಲ್ಲು ಶಿಕ್ಷೆ!
ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಾಗಿವೆ. ಈ ನಡುವೆ ಕಳೆದ 10 ತಿಂಗಳಲ್ಲಿ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಹೆಚ್ಚು ಹೃದಯ ಸ್ತಂಭನದಿಂದ ಸಾವನ್ನಪ್ಪಿರುವುದು ದಾಖಲಾಗಿದೆ. ಇತ್ತೀಚೆಗೆ ಮಧ್ಯಪ್ರದೇಶದ ಭೋಪಾಲ್ನಲ್ಲಿ ಎಂಜಿಎಂ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ಯುವ ವೈದ್ಯರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದು, ಇದು ಎಲ್ಲರಲ್ಲೂ ಆಘಾತವನ್ನುಂಟುಮಾಡಿತ್ತು.