Wednesday, 20th November 2024

MLA S N Subbereddy: ಚಿತ್ರಾವತಿ ಜಲಾಶಯಕ್ಕೆ ಬಾಗೀನ ಅರ್ಪಿಸಿದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ

ಬಾಗೇಪಲ್ಲಿ: ಚಿತ್ರಾವತಿ ಜಲಾಶಯ ಹೂಳೆತ್ತುವ ಕಾಮಗಾರಿ ಸೇರಿದಂತೆ ಕಾಯಕಲ್ಪ ಮಾಡುವ ವಿಚಾರವಾಗಿ ನೆರೆ ಆಂಧ್ರಪ್ರದೇಶದ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಕೇಸು ದಾಖಲಿಸಿರುವುದರಿಂದ ಜಲಾಶಯದ ಕಾಯಕಲ್ಪ ಕಾಮಗಾರಿ ಮಾಡಲು ಸಾಧ್ಯವಾಗುತ್ತಿಲ್ಲ ಅವಕಾಶ ಸಿಕ್ಕರೆ ಜಲಾಶಯ ಅಭಿವೃದ್ದಿಗೆ ಮುಂದಾಗುತ್ತೇನೆಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.

ಬಾಗೇಪಲ್ಲಿ ತಾಲೂಕಿನ ಪರಗೋಡು ಗ್ರಾಮದ ಬಳಿಯಲ್ಲಿರುವ ಚಿತ್ರಾವತಿ ಜಲಾಶಯ ತುಂಬಿ ಕೊಡಿ ಹರಿಯು ತ್ತಿರುವ ಹಿನ್ನಲೆಯಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ವಿಶೇಷ ಪೂಜೆ ಸಲ್ಲಿಸಿ ಬಾಗಿನ ಆರ್ಪಿಸಿದರು.

ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿ, ಬಾಗೇಪಲ್ಲಿ ಪಟ್ಟಣದ 23 ವಾರ್ಡ್ ಗಳಿಗೆ ಕುಡಿಯುವ ನೀರು ಸರಬ ರಾಜು ಮಾಡುವ ಚಿತ್ರಾವತಿ ಜಲಾಶಯ ತುಂಬಿರುವುದು ಸಂತಸ ವಿಚಾರವಾಗಿದೆ. ಅದರೇ ಚಿತ್ರಾವತಿ ಜಲಾಶಯ ದಲ್ಲಿ ತುಂಬಿಕೊಂಡಿರುವ ಹೂಳುನ್ನು ತೆಗೆದು ಕಾಯಕಲ್ಪ ಮಾಡುವ ವಿಚಾರಕ್ಕೆ ಆಕ್ಷೇಪ ವ್ಯಕ್ತಪಡಿಸಿ ಆಂಧ್ರ ಪ್ರದೇಶದ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಕೇಸು ದಾಖಲಿಸಿದ್ದು, ಯಾವುದೇ ರೀತಿಯ ಅಭಿವೃದ್ದಿ ಕೆಲಸಗಳು ಮಾಡದಂತೆ ತಡೆಯಾಜ್ಞೆ ತಂದಿದೆ. ತಡೆಯಾಜ್ಞೆ ತೆರವುಗೊಂಡ ನಂತರವಷ್ಠೆ ಕಾಯಕಲ್ಪಕ್ಕೆ ಮುಂದಾಗಲು ನಮಗೆ ಅವಕಾಶ ಇದೆ. ಕೋರ್ಟ್ ತಡೆಯಾಜ್ಞೆ ಇರುವದರಿಂದ ಸರ್ಕಾರದಿಂದ ಏನು ಅಭಿವೃದ್ದಿ ಮಾಡಲು ಸಾಧ್ಯವಿಲ್ಲ, ಎನ್‌ಜಿಒ ಸಂಸ್ಥೆಗಳ ನೆರವು ಪಡೆದುಕೊಂಡು ಕೆರೆ ಕಟ್ಟೆ ಸ್ವಚ್ಚಗೊಳಿಸುವ ಕೆಲಸವಾದರೂ ಮಾಡುತ್ತೇವೆ.

ಈ ಬಾರಿಯ ವರಣನ ಕೃಪೆಯಿಂದ ಚಿತ್ರಾವತಿ ಜಲಾಶಯ ತುಂಬಿ ಕೊಡಿ ಹರಿಯುತ್ತಿರುವುದು ನೋಡಿ ಸಂತಸ ಉಂಟುಮಾಡಿದ್ದು, ಈ ವರ್ಷದಂತೆ ಪ್ರತಿ ವರ್ಷವೂ ಉತ್ತಮ ಮಳೆಯಾಗಿ ಈ ಬಾಗದ ಕೆರೆ, ಕುಂಟೆಗಳು ತುಂಬಿ ಕೊಡಿ ಹರಿದು ರೈತರಿಗೆ ಒಳ್ಳೆಯದಾಗಬೇಕು. ಗಡಿ ಭಾಗದ ಈ ತಾಲೂಕು ಸಸ್ಯಶಾಮಲವಾಗಿ ನಿತ್ಯ ಹಸಿರುನಿಂದ ಇರಬೇಕೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

ಈ ಸಂದರ್ಭದಲ್ಲಿ ತಹಶೀಲ್ದಾರ್ ಎನ್.ಮನೀಷಾ, ಪುರಸಭೆ ಅಧ್ಯಕ್ಷ ಎ.ಶ್ರೀನಿವಾಸ್, ಉಪಾಧ್ಯಕ್ಷೆ ಸುಜಾತ ನರಸಿಂಹ ನಾಯ್ಡು, ಸದಸ್ಯರಾದ ಶ್ರೀನಿವಾಸರೆಡ್ಡಿ, ಅಶೋಕರೆಡ್ಡಿ, ಗಡ್ಡಂ ರಮೇಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಪ್ರಭಾಕರ ರೆಡ್ಡಿ, ಗ್ರಾ.ಪಂ.ಅಧ್ಯಕ್ಷೆ ನಾಗಮಣಿ ಸದಾಶಿವರೆಡ್ಡಿ, ಮುಖಂಡರಾದ ಪಿ.ಮಂಜುನಾಥರೆಡ್ಡಿ, ಸಿ.ಆರ್.ರಮೇಶ್, ಬಿ.ವಿ.ವೆಂಕಟರವಣ, ಹೆಚ್.ವಿ.ನಾಗರಾಜು, ಕೆ.ಆರ್.ನರೇಂದ್ರಬಾಬು, ಶಿವಪ್ಪ ಮತ್ತಿತರರು ಇದ್ದರು.

ಇದನ್ನೂ ಓದಿ: Chikkaballapur News: ಮಳೆಯಿಂದ ಹಾನಿಯಾದ ಮನೆ ಹಾಗೂ ಬೆಳೆಗೆ ಪರಿಹಾರಕ್ಕೆ ಕ್ಷೇತ್ರ ಸುತ್ತಿದ ಶಾಸಕ ಪುಟ್ಟಸ್ವಾಮಿಗೌಡ