Saturday, 26th October 2024

Minister Darshanapura: ಅಭಿವೃದ್ಧಿಯತ್ತ ಗ್ರಾಮೀಣ ಭಾಗದ ರಸ್ತೆಗಳು; ಸಚಿವ ದರ್ಶನಾಪುರ

ಶಹಾಪುರ: ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆಗಳು ಅಭಿವೃದ್ದಿಯಾದರೆ ಅದು ಪ್ರಗತಿಯ ಸಂಕೇತವಾಗಿದ್ದು, ರಸ್ತೆಗಳ ಅಭಿವೃದ್ದಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಗ್ರಾಮಸ್ಥರ ಸಹಕಾರ ಅಗತ್ಯ ಎಂದು ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.

ತಾಲೂಕಿನ ೨೦೨೩-೨೪ ನೇ ಸಾಲಿನ ೮ ಕೋಟಿ ೬೫ ಲಕ್ಷ ರೂ.ವೆಚ್ಚದ ಕೆಕೆಆರ್‌ಡಿಬಿ ಯೋಜನೆ ಯಡಿಯಲ್ಲಿ ಹೊತಪೇಠ ಗ್ರಾಮದಿಂದ ಇಂಗಳಗಿ, ಶಿರವಾಳ ಪ್ರಗತಿಯಲ್ಲಿರುವ ರಸ್ತೆ ಕಾಮಗಾರಿಗಳನ್ನು ವೀಕ್ಷಿಸಿ ಮಾತನಾಡಿದ ಅವರು ಗುಣಮಟ್ಟದ ರಸ್ತೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು. ಈ ಭಾಗದ ರೈತರು ಸೇರಿ ಗ್ರಾಮೀಣ ಜನರ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸಂಪರ್ಕ ವ್ಯವಸ್ಥೆ ಅಭಿವೃದ್ದಿಪಡಿಸುವ ಮೂಲಕ ಉತ್ತಮ ರಸ್ತೆ, ಚರಂಡಿಗಳ ನಿರ್ಮಾಣಗೊಳ್ಳುತ್ತಿದ್ದು ಗ್ರಾಮೀಣಿಗರ ಬದುಕು ಬದಲಾಗುತ್ತಿದೆ. ಹಾಗೂ ಸಾರಿಗೆ ಸಂಪರ್ಕ ಹೆಚ್ಚಿಸುವ ಮೂಲಕ ಗ್ರಾಮೀಣ ಕೃಷಿ ಅಭಿವೃದ್ದಿಗೆ ಬಲ ನೀಡಲಾಗುತ್ತಿದೆ. ೪ ಕೋಟಿ ೮೨ ಲಕ್ಷ ರೂ.ವೆಚ್ಚದಲ್ಲಿ ಮಕ್ತಾಪುರ ದಿಂದ ಹುಲ್ಕಲ್ ಹೆದ್ದಾರಿ ವರೆಗೆ ರಸ್ತೆ ಕಾಮಗಾರಿ ಅನುದಾನ ಮಂಜೂರಿಯಾಗಿದ್ದು ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಗೊಳ್ಳಲಿದೆ. ಗ್ರಾಮೀಣ ಪ್ರದೇಶದಲ್ಲಿ ಮೂಲ ಸೌಲಭ್ಯಗಳು ಸಮರ್ಪಕವಾಗಿ ಜನರಿಗೆ ದೊರೆತಾಗ ಜನರು ಅಭಿವೃದ್ದಿ ಹೊಂದಲು ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಅಮೃತರೆಡ್ಡಿ ಮಾಲಿ ಪಾಟೀಲ್, ಹೊನ್ನಪ್ಪಗೌಡ ಪಾಟೀಲ್, ಧರ್ಮಣ್ಣ ಹೊತಪೇಠ, ಶಿವುಮಾಹಂತ ಚಂದಾಪುರ, ತಾ.ಪಂ ಇಓ ಸೋಮಶೇಖರ ಬಿರೆದಾರ, ಎಇಇ ಸೂಗೂರೆಡ್ಡಿ, ಎಇಇ ಮಂಜುನಾಥ ಸಂಗಾವಿ, ನಿಂಗಣ್ಣ, ಮಲ್ಲರೆಡ್ಡಿ ಪಾಟೀಲ್, ಹುಸೇನ್‌ಭಾಷಾ, ಶಂಕ್ರಪ್ಪ ದೊರನಹಳ್ಳಿ, ಮರೆಪ್ಪ ಇಮ್ಲಾಪುರ, ಬಾಬು ಮಕ್ತಾಪುರ, ಹುಚ್ಚಪ್ಪ, ಅರ್ಜುನ ಇಂಗಳಗಿ, ಕಿಟ್ಟು ಕಂದಕೂರ, ಮೈಲಾರಪ್ಪ, ಮುದಕಪ್ಪ, ಮಹ್ಮದ್, ರೆಡ್ಡಿ ಸಲಾದಪುರ ಸೇರಿದಂತೆ ಅನೇಕರು ಇದ್ದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಗ್ರಾಮೀಣ ಬಾಗದ ಅಭಿವೃದ್ದಿಗೆ ಸರ್ಕಾರದಿಂದ ಕಲ್ಯಾಣ ಪಥ ಯೋಜನೆ ಯಡಿಯಲ್ಲಿ ೨೬ ಕೋಟಿ ೭೫ ಲಕ್ಷ ರೂ. ಅನುದಾನ ಮಂಜೂರಿಯಾಗಿದ್ದು. ನಗರದಿಂದ ಹಾಲಭಾವಿ ವರೆಗೆ ೪ ಕೋಟಿ ೯೦ ಲಕ್ಷ ರೂ, ಸಗರ ಗ್ರಾಮದಿಂದ ಹೊಸಳ್ಳಿ ದೊಡ್ಡಿ ವರೆಗೆ ೧ ಕೋಟಿ ೯೧ ಲಕ್ಷ ರೂ, ಕರಕಳ್ಳಿ ಗ್ರಾಮದಿಂದ ಕರಕಳ್ಳಿ ತಾಂಡದ ವರೆಗೆ ೧ ಕೋಟಿ ೭೪ ಲಕ್ಷ ರೂ, ಕೆಂಭಾವಿ ದಿಂದ ಮಲ್ಲಾ ವರೆಗೆ ೩ ಕೋಟಿ ೮೬ ಲಕ್ಷ ರೂ, ಏವೂರ್ ದಿಂದ ಖಾನಾಪುರ ಎಸ್.ಕೆ ವರೆಗೆ ೨ ಕೋಟಿ ೬೬ ಲಕ್ಷ ರೂ, ಯಾಳಗಿ ಗ್ರಾಮದಿಂದ ವನದುರ್ಗ ವರೆಗೆ ೫ ಕೋಟಿ ೩೮ ಲಕ್ಷ ರೂ, ಯಾಳಗಿ ಯಿಂದ ಬೇವಿನಹಳ್ಳಿ ಎಸ್,ಕೆ ವರೆಗೆ ೬ ಕೋಟಿ ೩೦ ಲಕ್ಷ ರೂ. ಸರ್ಕಾರದಿಂದ ಅನುದಾನ ಮಂಜೂರಿಯಾಗಿದೆ ಎಂದು ತಿಳಿಸಿದರು.
*
ಗ್ರಾಮೀಣ ಭಾಗದೆಲ್ಲೆಡೆ ಉಸ್ತುವಾರಿ ಸಚಿವರ ಶ್ರಮ ಹಾಗೂ ಕಾಳಜಿಯ ಫಲವಾಗಿ ಇಂದು ಸುಗಮ ಸಂಚಾರಕ್ಕೆ ರಸ್ತೆಗಳ ಅಭಿವೃದ್ದಿ ಆಗುತ್ತಿದ್ದು. ಹೊತಪೇಠ, ಮಕ್ತಾಪುರ, ಇಂಗಳಗಿ, ಶಿರವಾಳ ಈ ಭಾಗದ ಜನರ ಹಿತಕ್ಕಾಗಿ ಸುಮಾರ ೮ ಕೋಟಿ ರೂ.ವೆಚ್ಚದಲ್ಲಿ ರಸ್ತೆಗಳಾಗಿದ್ದು. ಇದರಿಂದ ಈ ಭಾಗದ ರೈತರಿಗೆ ಅನುಕೂಲವಾಗಲಿದೆ. ಸುಲಭವಾಗಿ ಜನರಿಗೆ ಸಿಗುವ ನಾಯಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿರುವ ಸಚಿವರು. ಸಾರ್ವಜನಿಕರ ಹಿತಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ.
ಅಲ್ಲಾ ಪಟೇಲ್ ಮಕ್ತಾಪುರ
ಮುಖಂಡರು.

ಇದನ್ನೂ ಓದಿ: Sharanabasappa Darshanapura: ಕಲ್ಯಾಣ ಕರ್ನಾಟಕ ಉತ್ಸವ: ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರಿಂದ ಧ್ವಜಾರೋಹಣ