ಹೈದರಾಬಾದ್: ಆಂಧ್ರಪ್ರದೇಶದ ತಿರುಪತಿಯ ಮೂರು ಪ್ರಮುಖ ಹೋಟೆಲ್(Tirupati Hotels)ಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ(Bomb Threat) ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಸಂಗತಿಗಳು ಬೆಳಕಿಗೆ ಬಂದಿವೆ. ಈ ಬೆದರಿಕೆ ಸಂದೇಶದಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟ್ಯಾಲಿನ್ ಅವರ ಕುಟುಂಬಸ್ಥರು ಭಾಗಿಯಾಗಿದ್ದಾರೆ ಎಂದು ಉಲ್ಲೇಖಿಸಲಾಗಿತ್ತು. ಉಪ ಮುಖ್ಯಮಂತ್ರಿ ಉದಯನಿಧಿ ಸ್ಟ್ಯಾಲಿನ್ ಅವರ ಪತ್ನಿ ಮತ್ತು ರಾಜ್ಯದ ಉನ್ನತ ಪೊಲೀಸ್ ಅಧಿಕಾರಿ ಹೆಸರನ್ನು ಈ ಬೆದರಿಕೆ ಇ-ಮೇಲ್‌ನಲ್ಲಿ ಉಲ್ಲೇಖಿಸಲಾಗಿತ್ತು ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಇನ್ನು ಇದೊಂದು ಹುಸಿ ಬಾಂಬ್ ಬೆದರಿಕೆ ಎಂಬುದು ತನಿಖೆ ವೇಳೆ ಬಯಲಾಗಿದ್ದು, ತಮಿಳುನಾಡಿನ ಉನ್ನತ ಪೊಲೀಸ್ ಅಧಿಕಾರಿ ಶಂಕರ್ ಜಿವಾಲ್ ಮತ್ತು ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರ ಪತ್ನಿ ಕಿರುತಿಗಾ ಉದಯನಿಧಿ ಅವರ ಹೆಸರನ್ನೂ ಅದರಲ್ಲಿ ಉಲ್ಲೇಖಿಸಲಾಗಿದೆ. ಸಾಲದೆನ್ನುವಂತೆ ಮಾದಕವಸ್ತು ಕಳ್ಳಸಾಗಣೆ ಜಾಲದ ಕಿಂಗ್‌ಪಿನ್ ಜಾಫರ್ ಸಾದಿಕ್‌ನ ಹೆಸರನ್ನೂ ಕಿಡಿಗೇಡಿಗಳು ಇ-ಮೇಲ್‌ನಲ್ಲಿ ಉಲ್ಲೇಖಿಸಿದ್ದಾರೆ. ಈತನನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಮತ್ತು ಜಾರಿ ನಿರ್ದೇಶನಾಲಯವು ಈ ಹಿಂದೆಯೇ ಅರೆಸ್ಟ್ ಮಾಡಿದೆ.
ಸರ್ಕಲ್ ಇನ್ಸ್ ಪೆಕ್ಟರ್ ಶ್ರೀನಿವಾಸಲು ಮಾಹಿತಿ ನೀಡಿದ್ದು, ತಿರುಪತಿಯ ಮೂರು ಹೋಟೆಲ್‌ಗಳಲ್ಲಿ ಬಾಂಬ್ ಬೆದರಿಕೆ ಸಂದೇಶಗಳು ಬಂದಿವೆ. ಎಫ್‌ಐಆರ್ ದಾಖಲಿಸಲಾಗಿದೆ. ವಿವಿಧ ಆಯಾಮಗಳಲ್ಲಿ ನಮ್ಮ ತನಿಖೆಯು ನಡೆಯುತ್ತಿದೆ. ನಮ್ಮ ವಿಚಾರಣೆ ಮುಗಿದ ನಂತರ ಈ ಬೆದರಿಕೆಗೆ ಕಾರಣರಾದವರನ್ನು ತ್ವರಿತವಾಗಿ ಗುರುತಿಸಲು ನಾವು ಬದ್ಧರಾಗಿದ್ದೇವೆ ಎಂದಿದ್ದಾರೆ.
BOMB threat by unknown person stating that Pak ISI to trigger bombs in hotels in #Tirupati. Lemon tree, Radisson and one more hotel received threat mails. Police conducting searches with the help of bomb squad at the hotels. pic.twitter.com/RMfib1o0AR
— Sowmith Yakkati (@YakkatiSowmith) October 25, 2024
ತಮಿಳುನಾಡಿನ ಉನ್ನತ ಪೋಲೀಸ್ ISI ನೊಂದಿಗೆ ಸಹಕರಿಸಿದ್ದಾರೆ. ಪೋಲಿಸರ ಗಮನವನ್ನು ಬೇರೆಡೆ ಸೆಳಯುವ ಉದ್ದೇಶದಿಂದ ತಮಿಳುನಾಡಿನ ಹಿರಿಯ ಪೊಲೀಸ್ ಅಧಿಕಾರಿ ಶಂಕರ್ ಜಿವಾಲ್, ತಮಿಳುನಾಡು ಉಪ ಮುಖ್ಯಸ್ಥರ ಪತ್ನಿ ಕಿರುತಿಗ ಉದಯನಿಧಿಯವರ ಹೆಸರನ್ನು ಬೆದರಿಕೆ ಇ-ಮೇಲ್‌ನಲ್ಲಿ ಉಲ್ಲೇಖಿಸಲಾಗಿದೆ. ಇವರು ದೇಶದೆಲ್ಲೆಡೆ ಸ್ಫೋಟಗಳನ್ನು ನಡೆಸಲು ಪಾಕಿಸ್ತಾನದ ISIಜೊತೆ ಕೈಜೋಡಿಸಿದ್ದಾರೆ ಎಂದು ಇ-ಮೇಲ್‌ನಲ್ಲಿ ಕಿಡಿಗೇಡಿಗಳು ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Bomb Threat: ಮುಂದುವರಿದ ಬಾಂಬ್ ಬೆದರಿಕೆ; ಇಂದು 25 ವಿಮಾನ ಟಾರ್ಗೆಟ್