ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಭರ್ಜರಿ ಸದ್ದು ಮಾಡುತ್ತಿದೆ. ಲಾಯರ್ ಜಗದೀಶ್ ಹಾಗೂ ರಂಜಿತ್ ನಿರ್ಗಮನದ ಬಳಿಕ ಶೋ ಕಳೆ ಕಳೆದುಕೊಳ್ಳುತ್ತೆ ಎಂಬ ಮಾತಿತ್ತು. ಆದರೆ, ಇದರ ಮಧ್ಯೆ ಹನುಮಂತ ಅವರನ್ನು ವೈಲ್ಡ್ ಕಾರ್ಡ್ ಮೂಲಕ ಮನೆಯೊಳಗೆ ಕಳಿಹಿಸಿ ಹಾಡು, ನಗುವಿನ ಬಾಡೂಟ ಬಿಗ್ ಬಾಸ್ ನೀಡುತ್ತಿದೆ. ಇದರ ನಡುಗೆ ರಾಧಾ ಹಿರೇಗೌಡರ್ ಮತ್ತು ಜನ ಸಾಮಾನ್ಯರು ಕೂಡ ಮನೆಯೊಳಗೆ ಬಂದು ಹೋಗಿದ್ದಾರೆ. ಇದೀಗ ವೀಕೆಂಡ್ ಬಂದಿದ್ದು, ಸ್ಪರ್ಧಿಗಳ ಮಧ್ಯೆ ನಾಮಿನೇಷನ್ ಟೆನ್ಶನ್ ಶುರುವಾಗಿದೆ.
ನಾಲ್ಕನೇ ವಾರ ದೊಡ್ಮನೆಯಿಂದ ಹೊರಹೋಗಲು ಒಟ್ಟು ಒಂಬತ್ತು ಮಂದಿ ನಾಮಿನೇಟ್ ಆಗಿದ್ದಾರೆ. ಇದರಲ್ಲಿ ಉಗ್ರಂ ಮಂಜು ಹಾಗೂ ಮಾನಸ ನೇರ ನಾಮಿನೇಟ್ ಆಗಿದ್ದಾರೆ. ಮನೆಯ ಕ್ಯಾಪ್ಟನ್ ಆದ ತ್ರಿವಿಕ್ರಮ್ ಹಾಗೂ ಐಶ್ವರ್ಯ ಇವರನ್ನು ಡೈರೆಕ್ಟ್ ನಾಮಿನೇಟ್ ಮಾಡಿದ್ದರು. ಇವರ ಜೊತೆಗೆ ಗೋಲ್ಡ್ ಸುರೇಶ್, ಶಿಶಿರ್ ಶಾಸ್ತ್ರೀ, ಗೌತಮಿ, ಹಂಸ, ಮೋಕ್ಷಿತಾ, ಚೈತ್ರಾ ಕುಂದಾಪುರ ಹಾಗೂ ಭವ್ಯಾ ನಾಮಿನೇಟ್ ಆಗಿದ್ದಾರೆ.
ಇವರ ಪೈಕಿ ಯಾರು ಮನೆಯಿಂದ ಹೊರಹೋಗುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ಒಂದು ಮೂಲಗಳಿಂದ ಈ ವಾರ ಡಬಲ್ ಎಲಿಮಿನೇಷನ್ ಇದೆ ಎಂದು ಹೇಳಲಾಗಿದೆ. ಮತ್ತೊಂದು ಮೂಲಗಳ ಪ್ರಕಾರ ಕಿಚ್ಚ ಸುದೀಪ್ ಈ ವಾರ ಬರದಿರುವ ಕಾರಣ ಮುಂದಿನ ವೀಕೆಂಡ್ ಡಬಲ್ ಎಲಿಮಿನೇಷನ್ ನಡೆಯಲಿದೆ ಎಂದು ಕೂಡ ಹೇಳಲಾಗಿದೆ.
ಕಿಚ್ಚ ಸುದೀಪ್ ಗೈರು:
ಈ ವೀಕೆಂಡ್ ಪಂಚಾಯಿತಿ ಕಟ್ಟೆಯಲ್ಲಿ ಮಾತನಾಡಲು ಸುದೀಪ್ ಬರುವುದಿಲ್ಲ. ವಾರದ ಕತೆ ಕಿಚ್ಚನ ಜೊತೆ ಮತ್ತು ಸೂಪರ್ ಸಂಡೇ ವಿಥ್ ಸುದೀಪ್ ಕಾರ್ಯಕ್ರಮ ಈ ವಾರ ಇರುವುದಿಲ್ಲ. ಕಳೆದ ವಾರ ಕಿಚ್ಚ ಸುದೀಪ್ ತಾಯಿ ಸರೋಜಾ ಅವರು ವಯೋಸಹಜ ಕಾಯಿಲೆಯಿಂದ ನಿಧನರಾದರು. ಹೀಗಾಗಿ ಅವರು ಈ ವೀಕೆಂಡ್‌ನಲ್ಲಿ ನಿರೂಪಣೆ ಮಾಡುವುದಿಲ್ಲ. ಕಳೆದ ವಾರ ಸುದೀಪ್ ಅವರು ಬಿಗ್ ಬಾಸ್ ಶೋ ನಿರೂಪಣೆ ಮಾಡುವಾಗಲೇ ಅವರ ತಾಯಿ ಐಸಿಯುವಿನಲ್ಲಿದ್ದರು. ಹೀಗಿದ್ದರೂ ಕೂಡ ನಿರೂಪಣೆ ಮುಗಿಸಿಯೇ ಹೊರಟಿದ್ದರು.
BBK 11: ಇವತ್ತು ಸುದೀಪ್ ಬರಲ್ಲ: ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ ಕ್ಯಾನ್ಸಲ್