ನವದೆಹಲಿ: ದೇಶದ ಪ್ರಮುಖ ಉದ್ಯಮಿ ಮುಖೇಶ್ ಅಂಬಾನಿ ಅವರ ಕಂಪನಿ ರಿಲಯನ್ಸ್ ಜಿಯೋ (Reliance Jio) ಈ ದೀಪಾವಳಿಗೆ ಜಿಯೋ ಭಾರತ್ 4 ಜಿ ಫೋನ್‌ಗಳ ಬೆಲೆಯನ್ನು ಶೇ 30ರಷ್ಟು ಕಡಿತಗೊಳಿಸಿದೆ. ಈ ಸೀಮಿತ ಅವಧಿಯ ಕೊಡುಗೆಯ ಅಡಿಯಲ್ಲಿ, ರೂ. 999 ನ ಜಿಯೋಭಾರತ್ ಮೊಬೈಲ್ ಫೋನ್ ಈಗ ರೂ.699ರ ವಿಶೇಷ ಬೆಲೆಗೆ ಲಭ್ಯವಿದೆ.
ಜಿಯೋಭಾರತ್ ಫೋನ್ ಅನ್ನು 123 ರೂ.ಗೆ ರೀಚಾರ್ಜ್ ಮಾಡಬಹುದು. ಈ ಮಾಸಿಕ ಟ್ಯಾರಿಫ್ ಯೋಜನೆಯಲ್ಲಿ ಅನಿಯಮಿತ ಉಚಿತ ಧ್ವನಿ ಕರೆಗಳು, 14 ಜಿಬಿ ಡೇಟಾ ಸಹ ಒಳಗೊಂಡಿದೆ.
ಈ ಸುದ್ದಿಯನ್ನೂ ಓದಿ | DK Shivakumar: ಅಕ್ರಮ, ಕಳಪೆ ಗುಣಮಟ್ಟದ ಕಟ್ಟಡಗಳ ತೆರವಿಗೆ ಮುಲಾಜಿಲ್ಲದೆ ಕ್ರಮ; ಡಿ.ಕೆ. ಶಿವಕುಮಾರ್
ಜಿಯೋದ ಮಾಸಿಕ 123 ರೂ.ಗಳ ರೀಚಾರ್ಜ್ ಯೋಜನೆ ಇತರ ಆಪರೇಟರ್‌ಗಳಿಗಿಂತ 40 ಪ್ರತಿಶತ ಅಗ್ಗವಾಗಿದೆ. ಏಕೆಂದರೆ ಇತರ ನೆಟ್‌ವರ್ಕ್‌ಗಳ ಫೀಚರ್ ಫೋನ್‌ಗಳ ಮಾಸಿಕ ರೀಚಾರ್ಜ್ ಕನಿಷ್ಠ 199 ರೂ. ಇದೆ. ಇದು ಜಿಯೋಗಿಂತ 76 ರೂಪಾಯಿ ಹೆಚ್ಚು ದುಬಾರಿಯಾಗಿದೆ. ಅಂದರೆ, ಜಿಯೋ ಗ್ರಾಹಕರಿಗೆ ಪ್ರತಿ ರೀಚಾರ್ಜ್‌ನಲ್ಲಿ ತಿಂಗಳಿಗೆ 76 ರೂ. ಉಳಿಯಲಿದೆ. ತಿಂಗಳಿಗೆ 76 ರೂ. ರಂತೆ 9 ತಿಂಗಳಿಗೆ ಉಳಿತಾಯ ಆಗುವ ಮೊತ್ತವು ಫೋನ್ ಬೆಲೆಗೆ ಸಮನಾಗಲಿದೆ. ಅಂದರೆ ಜಿಯೋ ಭಾರತ್ ಫೋನ್ ಉಚಿತವಾಗಿ ಸಿಕ್ಕಂತೆ ಆಗಲಿದೆ.
ಈ ಸುದ್ದಿಯನ್ನೂ ಓದಿ | Diwali Jewel Shopping Tips: ಧನ್ ತೆರಾಸ್ ಹಬ್ಬದಂದು ಆಭರಣ ಖರೀದಿಸುವ ಮಹಿಳೆಯರಿಗೆ ಇಲ್ಲಿವೆ 5 ಸಿಂಪಲ್ ಐಡಿಯಾ
2ಜಿ ಯಿಂದ 4ಜಿ ಗೆ ಅಪ್‌ಗ್ರೇಡ್ ಆಗುವ ಸುವರ್ಣ ಅವಕಾಶವನ್ನು ಜಿಯೋ ನೀಡುತ್ತಿದೆ. 455 ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳು, ಚಲನಚಿತ್ರ ಪ್ರೀಮಿಯರ್‌ಗಳು ಮತ್ತು ಹೊಸ ಚಲನಚಿತ್ರಗಳು, ವೀಡಿಯೊ ಶೋಗಳು, ಲೈವ್ ಸ್ಪೋರ್ಟ್ಸ್ ಕಾರ್ಯಕ್ರಮಗಳು, ಜಿಯೋ ಸಿನಿಮಾ ಮುಖ್ಯಾಂಶಗಳು, ಡಿಜಿಟಲ್ ಪಾವತಿಗಳು, ಕ್ಯೂಆರ್ ಕೋಡ್ ಸ್ಕ್ಯಾನ್‌ಗಳು ಜಿಯೋಭಾರತ್ 4 ಜಿ ಫೋನ್‌ನಲ್ಲಿ ಲಭ್ಯವಿದೆ. ಜಿಯೋಪೇ ಮತ್ತು ಜಿಯೋಚಾಟ್ ನಂತಹ ಪ್ರಿಲೋಡೆಡ್ ಅಪ್ಲಿಕೇಶನ್‌ಗಳು ಸಹ ಈ ಫೋನ್‌ನಲ್ಲಿ ಲಭ್ಯವಿರುತ್ತವೆ. ಹತ್ತಿರದ ಅಂಗಡಿಗಳ ಹೊರತಾಗಿ, ಫೋನ್ ಅನ್ನು ಜಿಯೋಮಾರ್ಟ್ ಅಥವಾ ಅಮೆಜಾನ್‌ನಿಂದ ಸಹ ಖರೀದಿಸಬಹುದು.