Saturday, 26th October 2024

Parineeti Chopra : ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ ನಿವಾಸದಲ್ಲಿ ಪಾದ ಪೂಜೆ ಸ್ವೀಕರಿಸಿದ ಶಂಕರಾಚಾರ್ಯರ ಸ್ವಾಮೀಜಿ

Parineeti Chopra

ಬೆಂಗಳೂರುಳ: ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಮಹಾರಾಜ್ ಅವರು ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ಮತ್ತು ನಟಿ ಪರಿಣಿತಿ ಚೋಪ್ರಾ (Parineeti Chopra) ಅವರ ನಿವಾಸಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಶಂಕರಾಚಾರ್ಯರು ದಂಪತಿ ಸ್ವಲ್ಪ ಸಮಯ ಕಳೆದು ಅವರಿಗೆ ಆಶೀರ್ವಾದ ನೀಡಿದರು. ಅವರ ಭೇಟಿಯ ಸಮಯದಲ್ಲಿ ರಾಘವ್ ಮತ್ತು ಪರಿಣೀತಿ ಆರತಿ ಬೆಳಗಿದರು.

ದಂಪತಿ ಸನಾತನ ಸಂಪ್ರದಾಯದಂತೆ ಪ್ರಕಾರ ‘ಪಾದುಕಾ ಪೂಜೆ’ ನಡೆಸಿದರು. ಸಮಾರಂಭದಲ್ಲಿ ದಂಪತಿಯ ಕುಟುಂಬದ ಸದಸ್ಯರು ಭಾಗವಹಿಸಿದ್ದರು. ಸಮಾರಂಭದ ನಂತರ, ರಾಘವ್ ಶಂಕರಾಚಾರ್ಯರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದರು. ಉತ್ತರಾಖಂಡದ ಜ್ಯೋತಿಶ್ ಪೀಠದ 46ನೇ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಭಕ್ತರ ಮನೆಗಳಲ್ಲಿ ಭೇಟಿ ಮಾಡುವುದು ಅಪರೂಪ.

ಕಳೆದ ತಿಂಗಳು, ರಾಘವ್ ಮತ್ತು ಪರಿಣೀತಿ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವ ಆಚರಿಸಲು ಮಾಲ್ಡೀವ್ಸ್‌ಗೆ ಪ್ರಯಾಣಿಸಿದ್ದರು. ಪರಿಣೀತಿ ಇನ್‌ಸ್ಟಾಗ್ರಾಮ್‌ನಲ್ಲಿ ಸರಣಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇಬ್ಬರೂ ಅಲ್ಲಿನ ಪರಿಸರವನ್ನು ಆನಂದಿಸುವ ಕ್ಷಣಗಳನ್ನು ಸೆರೆಹಿಡಿದಿದ್ದಾರೆ. ರಾಘವ್ ಮತ್ತು ಪರಿಣೀತಿ ಸೆಪ್ಟೆಂಬರ್ 24, 2023 ರಂದು ಉದಯಪುರದ ಲೀಲಾ ಪ್ಯಾಲೇಸ್‌ನಲ್ಲಿ ಸಾಂಪ್ರದಾಯಿಕ ಸಮಾರಂಭದಲ್ಲಿ ವಿವಾಹವಾಗಿದ್ದರು.

ಇದನ್ನೂ ಓದಿ: Shankaracharya Swami : ಶಂಕರಾಚಾರ್ಯ ಸ್ವಾಮೀಜಿಯ ಗೋಧ್ವಜ ಯಾತ್ರೆಗೆ ಮೇಘಾಲಯ ಪ್ರವೇಶಕ್ಕೆ ತಡೆ

ಮದುವೆಯಲ್ಲಿ ಸಾನಿಯಾ ಮಿರ್ಜಾ, ಹರ್ಭಜನ್ ಸಿಂಗ್, ಅರವಿಂದ್ ಕೇಜ್ರಿವಾಲ್, ಆದಿತ್ಯ ಠಾಕ್ರೆ, ಭಗವಂತ್ ಮಾನ್, ಸಂಜಯ್ ಸಿಂಗ್ ಮತ್ತು ಮನೀಶ್ ಮಲ್ಹೋತ್ರಾ ಸೇರಿದಂತೆ ಚಲನಚಿತ್ರ ಮತ್ತು ರಾಜಕೀಯ ಜಗತ್ತಿನ ಕುಟುಂಬ ಮತ್ತು ಆಪ್ತ ಸ್ನೇಹಿತರು ಭಾಗವಹಿಸಿದ್ದರು.