Friday, 22nd November 2024

Space Station : 2035ರ ವೇಳೆಗೆ ಭಾರತಕ್ಕೆ ಸ್ವಂತ ಬಾಹ್ಯಾಕಾಶ ನಿಲ್ದಾಣ: ಕೇಂದ್ರ ಸಚಿವ

space station

ನವದೆಹಲಿ: 2035 ರ ವೇಳೆಗೆ ಭಾರತವು ತನ್ನದೇ ಆದ ಅಂತರಿಕ್ಷ ನಿಲ್ದಾಣವನ್ನು (Space Station) ಹೊಂದಲಿದೆ. ಇದನ್ನು “ಭಾರತೀಯ ಅಂತರಿಕ್ಷ ನಿಲ್ದಾಣ” ಎಂದು ಕರೆಯಲಾಗುವುದು ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಡಾ.ಜಿತೇಂದ್ರ ಸಿಂಗ್ ಶನಿವಾರ ಹೇಳಿದ್ದಾರೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ (ಡಿಬಿಟಿ) ನಡುವೆ ಜೈವಿಕ ತಂತ್ರಜ್ಞಾನವನ್ನು ಬಾಹ್ಯಾಕಾಶ ತಂತ್ರಜ್ಞಾನದೊಂದಿಗೆ ಸಂಯೋಜಿಸುವ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಸಂದರ್ಭದಲ್ಲಿ ಅವರು ಈ ಘೋಷಣೆ ಮಾಡಿದರು.

ಈ ಒಪ್ಪಂದವು ‘ಭಾರತೀಯ ಅಂತರಿಕ್ಷ ಕೇಂದ್ರ’ ಸ್ಥಾಪನೆ ಮತ್ತು ‘ಬಯೋಇ3’ (ಆರ್ಥಿಕತೆ, ಪರಿಸರ ಮತ್ತು ಉದ್ಯೋಗಕ್ಕಾಗಿ ಜೈವಿಕ ತಂತ್ರಜ್ಞಾನ) ನೀತಿಯ ಅನಾವರಣ ಸೇರಿದಂತೆ ಹಲವಾರು ಪ್ರಮುಖ ಉಪಕ್ರಮಗಳನ್ನು ಹೊಂದಿದೆ. ಸರ್ಕಾರದ ಪ್ರಕಾರ, ಈ ಸಹಯೋಗವು ಮೈಕ್ರೋಗ್ರಾವಿಟಿ ಸಂಶೋಧನೆ, ಬಾಹ್ಯಾಕಾಶ ಜೈವಿಕ ತಂತ್ರಜ್ಞಾನ, ಬಾಹ್ಯಾಕಾಶ ಜೈವಿಕ ಉತ್ಪಾದನೆ, ಬಯೋಆಸ್ಟ್ರೋನಾಟಿಕ್ಸ್ ಮತ್ತು ಬಾಹ್ಯಾಕಾಶ ಜೀವಶಾಸ್ತ್ರದಂತಹ ಕ್ಷೇತ್ರಗಳ ಮೇಲೆ ಗಮನ ಹರಿಸಲಿದೆ.

ಈ ಸಹಯೋಗವನ್ನು ಸಾಧ್ಯವಾಗಿಸುವಲ್ಲಿ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ.ರಾಜೇಶ್ ಗೋಖಲೆ ಅವರ ಪ್ರಯತ್ನಗಳನ್ನು ಸಚಿವರು ಶ್ಲಾಘಿಸಿದರು.

ಖಾಸಗಿ-ಸಾರ್ವಜನಿಕ ಸಹಭಾಗಿತ್ವ

ಭಾರತದ ಬಾಹ್ಯಾಕಾಶ ಕ್ಷೇತ್ರದ ತ್ವರಿತ ಬೆಳವಣಿಗೆಗೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವವು ಪ್ರಮುಖ ಪಾತ್ರ ವಹಿಸಿದೆ ಎಂದು ಡಾ.ಸಿಂಗ್ ಹೇಳಿದರು, ಬಾಹ್ಯಾಕಾಶ ಸ್ಟಾರ್ಟ್‌ಅಪ್‌ಗಳ ಸಂಖ್ಯೆ ಗಮನಾರ್ಹವಾಗಿ ಬೆಳೆದಿದೆ, ಸುಮಾರು 300 ಸ್ಟಾರ್ಟ್ಅಪ್‌ಗಳು ಈಗ ಬಾಹ್ಯಾಕಾಶ ಆರ್ಥಿಕತೆಗೆ ಕೊಡುಗೆ ನೀಡುತ್ತಿವೆ ಎಂದರು.

ಸರ್ಕಾರದ ಪ್ರಕಾರ, ಈ ಸಹಯೋಗವು ಮೈಕ್ರೋಗ್ರಾವಿಟಿ ಸಂಶೋಧನೆ, ಬಾಹ್ಯಾಕಾಶ ಜೈವಿಕ ತಂತ್ರಜ್ಞಾನ, ಬಾಹ್ಯಾಕಾಶ ಜೈವಿಕ ಉತ್ಪಾದನೆ, ಬಯೋಆಸ್ಟ್ರೋನಾಟಿಕ್ಸ್ ಮತ್ತು ಬಾಹ್ಯಾಕಾಶ ಜೀವಶಾಸ್ತ್ರದಂತಹ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುತ್ತದೆ.

ಇದನ್ನೂ ಓದಿ: ರಾಜ್ಯಸಭಾ ಸದಸ್ಯ ರಾಘವ್ ಛಡ್ಡಾ ಅಮಾನತು ಆದೇಶ ವಾಪಸ್

ಈ ಸಹಭಾಗಿತ್ವವು ರಾಷ್ಟ್ರೀಯ ಮಾನವ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಪ್ರಯೋಜನವನ್ನು ನೀಡುತ್ತದೆ ಮತ್ತು ಪರಿಣಾಮಕಾರಿ ತ್ಯಾಜ್ಯ ನಿರ್ವಹಣೆ ಮತ್ತು ಮರುಬಳಕೆಗಾಗಿ ಮಾನವ ಆರೋಗ್ಯ ಸಂಶೋಧನೆ, ನವೀನ ಔಷಧಗಳು, ಪುನರುತ್ಪಾದಕ ಔಷಧ ಮತ್ತು ಜೈವಿಕ ಆಧಾರಿತ ತಂತ್ರಜ್ಞಾನಗಳಲ್ಲಿ ಆವಿಷ್ಕಾರಗಳನ್ನುಪ್ರೇರೇಪಿಸುತ್ತವೆ.

ಭಾರತದ ವೈಜ್ಞಾನಿಕ ಸಾಮರ್ಥ್ಯಗಳಿಗೆ ಜಾಗತಿಕ ಮನ್ನಣೆಯನ್ನು ತಂದುಕೊಟ್ಟ ಮೊದಲ ಡಿಎನ್ಎ ಲಸಿಕೆಯನ್ನು ಅಭಿವೃದ್ಧಿಪಡಿಸುವಲ್ಲಿ ಜೈವಿಕ ತಂತ್ರಜ್ಞಾನ ಇಲಾಖೆಯ ಪಾತ್ರವನ್ನು ಡಾ.ಸಿಂಗ್ ಒಪ್ಪಿಕೊಂಡರು.

ಸೆಪ್ಟೆಂಬರ್‌ನಲ್ಲಿ ಕೇಂದ್ರ ಸಚಿವ ಸಂಪುಟವು ಚಂದ್ರನ ನಾಲ್ಕನೇ ಯಾನಕ್ಕೆ ಅನುಮೋದನೆ ನೀಡಿತ್ತು. 2028 ರ ವೇಳೆಗೆ ಭಾರತೀಯ ಅಂತರಿಕ್ಷ ನಿಲ್ದಾಣದ (ಬಿಎಎಸ್) ಮೊದಲ ಘಟಕವನ್ನು ನಿರ್ಮಿಸಲು ಗ್ರೀನ್‌ ಸಿಗ್ನಲ್ ನೀಡಿತು. 2035ರ ವೇಳೆಗೆ ಭಾರತೀಯ ಬಾಹ್ಯಾಕಾಶ ನಿಲ್ದಾಣ ಮತ್ತು 2040 ರ ವೇಳೆಗೆ ಭಾರತೀಯರು ಚಂದ್ರನ ಮೇಲ್ಮೈಯಲ್ಲಿ ಇಳಿಯಲು ಸರ್ಕಾರ ಯೋಜಿಸಿದೆ.