Sunday, 27th October 2024

Tumkur News: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು ಚಿತ್ರದುರ್ಗ ಸಂಸದ ಗೋವಿಂದ ಎಂ.ಕಾರಜೋಳ

ಪಾವಗಡ: ಪಟ್ಟಣದ ಅತಿಥಿಗೃಹದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿ, ಉದ್ದೇಶಿಸಿ ಮಾತನಾಡಿದ ಸಂಸದರು ಗಡಿ ಭಾಗದ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯ ವಂಚಿತ ಗೊಂಡಿದೆ ಇದರ ಬಗ್ಗೆ ಸಂಬಂಧಪಟ್ಟ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ.

ರಾಜ್ಯದಲ್ಲಿ ಮಳೆಯಿಂದಾಗಿ ಬೆಳೆ ಹಾನಿಯಾಗಿದ್ದು ಕಂದಾಯ ಸಚಿವರು ರಾಜ್ಯದ್ಯಂತ ಸ್ಥಳಕ್ಕೆ ಭೇಟಿ ನೀಡಿ ಬೆಳೆ ಹಾನಿಗಳ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು ಪ್ರತಿದಿನ ಒಂದೊಂದು ತಾಲೂಕಿಗೆ ಹೋಗಿದ್ರು ಸಹ ಸಂಪೂರ್ಣ ಮಾಹಿತಿ ಪಡೆದು ಆದರೆ ವೈಜ್ಞಾನಿಕ ರೀತಿಯಲ್ಲಿ ಮಾಹಿತಿ ಪಡಬೇಕು ಹೊರತು ಅವೈಜ್ಞಾನಿಕ ರೀತಿಯಲ್ಲಿ ಅಲ್ಲ ಎಂದರು. ಐಬಿ ಗಳಲ್ಲಿ ಕುಳಿತು ಟೀ ಕುಡಿದು ಅಧಿಕಾರಿಗಳ ಬಳಿ ಮಹಿತಿ ಪಡೆಯುತ್ತಿದ್ದಾರೆ. ಆದರೆ ವಿವಿಧ ರೀತಿಯ ಬೆಳೆಗಳ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ಪಡೆದು ಬೆಳೆ ನಷ್ಟ ವರದಿಗಳ ಬಗ್ಗೆ ಸೂಕ್ತ ತನಿಖೆ ಮಾಡಿ ಮಾಹಿತಿ ಪಡೆದುಕೊಳ್ಳಬೇಕು. ಎಂದರು. ಚಿತ್ರದುರ್ಗ ಜಿಲ್ಲೆ, ದಾವಣಗೆರೆ ಈ ಭಾಗದಲ್ಲಿ ಈರುಳ್ಳಿ ಬೆಳೆದಂತಹ ರೈತರು ಮಳೆಯಿಂದಾಗಿ ಬಾರಿ ನಷ್ಟ ಉಂಟಾಗಿದೆ ತೊರೆ ಅಂತವರಿಗೆ ಬೆಳೆ ನಷ್ಟ ಪರಿಹಾರ ಸೂಕ್ತವಾಗಿ ನೀಡಬೇಕು.

ಒಳ ಮೀಸಲಾತಿ ಬಗ್ಗೆ ಈ ಹಿಂದಿನ ಬಸವರಾಜ್ ಬೊಮ್ಮಾಯಿ ಅಧಿಕಾರದಲ್ಲಿ 101 ಜಾತಿಗಳಿಗೂ ಸೇರಿಸಿ ತರಬೇಕು ಎಂಬ ಒಂದು ಆದೇಶವನ್ನು ಮೀಸಲಾತಿ ವರ್ಗಿಕರಣ ಗೊಳಿಸಿದ್ದೇವೆ . ಆದರೆ ಈಗಿನ ಸರ್ಕಾರ ಅನುಷ್ಠಾನಗೊಳಿ ಸಲು ತಡ ಮಾಡುತ್ತಿದೆ ಎಂದರು.

ಕಾಂಗ್ರೆಸ್ ಪಕ್ಷದವರು ದಲಿತರಿಗೆ ಅನ್ಯಾಯ ಮಾಡಿಕೊಂಡು ಬರುತ್ತಿದೆ. ಸದಾಶಿವ ಆಯೋಗ ಜಾರಿಗೆ ತರುತ್ತೇವೆ ಮೊದಲನೇ ಕ್ಯಾಬಿನೆಟ್ ಸಭೆಯಲ್ಲಿ ಜಾರಿಗೊಳಿಸುತ್ತೇವೆ ಅಂದಿದ್ದರು. ಮತದಾರರ ಬಳಿ ನಮಗೆ ಅಧಿಕಾರ ಕೊಡಿ ಎಂಬುದಾಗಿ ಜನರಲ್ಲಿ ಹೇಳಿಕೊಂಡು ಮತ ಪಡಿದಿದ್ದರು. ಆದರೆ ಇಲ್ಲಿವರೆಗೆ ಚಕಾರ ಎತ್ತಿಲ್ಲ.

ಭದ್ರಾ ಮೇಲ್ದಂಡೆ ಯೋಜನೆ ಆಮೇಗತಿಯಲಿ ನಡೆಯುತ್ತಿದೆ ಎಂಬುದಾಗಿ ಮಾಧ್ಯಮದ ಪ್ರಶ್ನೆಗೆ ರಾಜ್ಯದಲ್ಲಿ ಅತಿ ದೊಡ್ಡದಾದ ಮೂರು ಯೋಜನೆಗಳು ನಡೆಯುತ್ತಿವೆ ಕೃಷ್ಣ ಮೇಲ್ದಂಡೆ ಯೋಜನೆ ಅಪ್ಪರ್ ಬದ್ಧ ಯೋಜನೆ. ಎತ್ತಿನಹೊಳೆ ಯೋಜನೆ ಮೂರು ಯೋಜನೆ ಅತಿ ದೊಡ್ಡದಾದ ಯೋಜನೆಗಳು.ಇವುಗಳಿಗೆ 150 ಲಕ್ಷ ಕೋಟಿ ಅನು ದಾನ ಮೀಸಲಿಟ್ಟಂತಹ ಯೋಜನೆ ಇದಾಗಿದೆ ಎಂದರು. ಸರ್ಕಾರ ಹಣ ಕೊಡದೆ ನಿಂತು ಹೋಗಿವೆ. ಅದರಲ್ಲೂ ಅಪ್ಪರ್ಬದ ಸಂಪೂರ್ಣ ಸ್ಥಗಿತಗೊಂಡಿದೆ ಎಂದರು.

ಈಗಾಗಲೇ ನಮ್ಮ ವ್ಯಾಪ್ತಿಯಲ್ಲಿ ಬೇಕಾದಂತಹ ಸಮಸ್ಯೆಗಳ ಬಗ್ಗೆ ಪತ್ರ ಮೂಲಕ ಕೇಂದ್ರಕ್ಕೆ ಗಮನಕ್ಕೆ ತಂದಿದ್ದೇನೆ ಅನುದಾನ ಬಿಡುಗಡೆ ಆದ ನಂತರ ತಮ್ಮ ಗಮನಕ್ಕೆ ತರುತ್ತೇನೆ ಎಂದರು.

ಹಾಲು ಒಕ್ಕೂಟದ ಚುನಾವಣೆಗೆ ಬಿಜೆಪಿ ಜೆಡಿಎಸ್ ಮೈತ್ರಿ ಆಗಿ ಅಭ್ಯರ್ಥಿ ಘೋಷಣೆ ಮಾಡಿದ್ದೇವೆ ಈ ಭಾಗದ ಅಭ್ಯರ್ಥಿಯಾಗಿ ಚೆನ್ನಮಲ್ಲಪ್ಪವನ್ನು ನೇಮಕ ಮಾಡಿದ್ದೇವೆ ಎಂದರು.

ಪತಿಗಾಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಚೆನ್ನಮಲ್ಲಪ್ಪ. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕ್ವಾಟಗುಡ್ಡ ಅಂಜಿನಪ್ಪ, ಬಿಜೆಪಿ ಮುಖಂಡ ಶಿವಕುಮಾರ್ ಸಖೆಲ್. ಹಾಗೂ ಬಿಜೆಪಿ ಜೆಡಿಎಸ್ ಕಾರ್ಯಕರ್ತರು ಮುಖಂಡರು ಇದ್ದರು.