Sunday, 27th October 2024

Tumkur News: ಚಂದ್ರಯಾನ-3 ಉಡ್ಡಯನದ ನಂತರ ಇಸ್ರೋ ಸಾಧನೆ ಮಾಡಿದೆ

ತುಮಕೂರು: ಚಂದ್ರಯಾನ-3ರ ಉಡ್ಡಯನದ ನಂತರ ಅಂತರಿಕ್ಷ ಬಾಹ್ಯಾಕಾಶ ಕ್ಷೇತ್ರದಲ್ಲಿ ಅನೇಕ ದೇಶಗಳು ಮಾಹಿತಿ ಪಡೆಯುತ್ತಿದ್ದು, ಪ್ರವಾಹ, ಚಂಡಮಾರುತ ಸೇರಿದಂತೆ ಪ್ರಾಕೃತಿಕ ವಿಕೋಪದ ವಾತಾವರಣ ಉಂಟಾಗುವ ಏರುಪೇರುಗಳ ಮಾಹಿತಿಯನ್ನು ಪಡೆಯಲಾಗುತ್ತಿದ್ದು, ಹೆಚ್ಚಿನ ಅನಾಹುತ ತಪ್ಪಿಸಲು ಸಹಕಾರಿಯಾಗುತ್ತಿದೆ ಎಂದು ಬೆಂಗಳೂರಿನ ಇಸ್ರೋ ಕೇಂದ್ರದ ಟೆಲಿಮಿಟ್ರಿ, ಟ್ರಾಕೀಂಗ್ ಕಮಾಂಡ್ ನೆಟ್ವರ್ಕ್ ನಿರ್ದೇಶಕ ಡಾ ಬಿ.ಎನ್.ರಾಮಕೃಷ್ಣ ಅಭಿಪ್ರಾಯಪಟ್ಟರು.

ನಗರದ ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ-4 ಟೋಲ್‌ಗೇಟ್ ಸಮೀಪದಲ್ಲಿರುವ ನೂತನ ಶ್ರೀ ಸಿದ್ಧಾರ್ಥ ಸ್ಕೂಲ್ ಆಫ್ ಇಂಜಿನಿಯರ್ ಕಾಲೇಜಿನ ನೂತನ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಚಂದ್ರಯಾನ 3ರಲ್ಲಿ ಉಡ್ಡಯನದ ನಂತರದಲ್ಲಿ ಇಸ್ರೋ ತನ್ನದೇ ಸಾಧನೆ ಮಾಡಿದೆ. ಅದೇ ರೀತಿ ರಾಕೆಟ್ ನಿರ್ಮಾಣ ಕಾರ್ಯಗಳಲ್ಲಿ ಅನೇಕ ಸಂಶೋಧನೆ ನಡೆಸಿ ಇಡೀ ವಿಶ್ವಕ್ಕೆ ಅವಶ್ಯಕತೆ ಇರುವ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಲಾಗಿದೆ. ಇಸ್ರೋದ ಚಂದ್ರಯಾನ ಯಶಸ್ವಿಯಾಗಿದ್ದನ್ನು ಇಡೀ ವಿಶ್ವ ಗಮನಿಸಿದೆ ಎಂದ ರಾಮಕೃಷ್ಣ ಅವರು, ಸ್ಪೇಸ್ ಅಂದರೆ ಅನಂತವೆAದು ಇದಕ್ಕೆ ಕೊನೆಯಿಲ್ಲ. ಅಂತರಿಕ್ಷ ಬಾಹ್ಯಾಕಾಶ ಕ್ಷೇತ್ರದಲ್ಲಿ ಬೆಳವಣಿಗೆಗಳ ಬಗ್ಗೆ ಅನೇಕ ದೇಶಗಳು ಮಾಹಿತಿ ಪಡೆಯುತ್ತಿವೆ ಎಂದರು.

ಪ್ರಾಕೃತಿಕ ವಿಕೋಪಗಳು, ದುರಂತ, ಬರ, ಪ್ರವಾಹ ಚಂಡಮಾರುತ ಸೇರಿದಂತೆ ವಾತಾವರಣ ಉಂಟಾಗುವ ಏರು ಪೇರುಗಳ ಬಾಹ್ಯಾಕ್ಯಾಶದಿಮದ ಮಾಹಿತಿಯನ್ನು ಪಡೆಯಲಾಗುತ್ತಿದ್ದು, ಇದರಿಂದ ಹೆಚ್ಚಿನ ಹಾನಿ ಹಾಗೂ ಅನಾಹುತ ತಪ್ಪಿಸಬಹುದಾಗಿದೆ ಎಂದು ಅವರು ಹೇಳಿದರು.

ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಸಂಶೋಧನಾತ್ಮಕ್ ಅಧ್ಯಯನ ನಡೆಸಿ, ಮುಂದೆ ಸಂಭವಿಸುವ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಬಹುದು. ಟ್ರಾಫಿಕ್, ರಸ್ತೆ ಸಂಚಾರದಲ್ಲಿನ ದಟ್ಟಣೆ ಘಟನೆಗಳ ಬಗ್ಗೆ ಮಾಹಿತಿ ಯನ್ನು ತತ್‌ ಕ್ಷಣದಲ್ಲಿ ಪಡೆಯುವ ತಂತ್ರಜ್ಞಾನ ಅವಿಷ್ಕಾರವಾಗುತ್ತಿದ್ದು, ಇದನ್ನು ವಾಹನ ತಯಾರಿಕಾ ಕಂಪನಿ ಗಳು ಅಳವಡಿಸಬಹುದು. ಪ್ರತಿ ಸಮಸ್ಯೆಗೂ ಒಂದಲ್ಲಾ ಒಂದು ಹೊಸ ರೀತಿಯಲ್ಲಿ ಸಂಶೋಧನಾತ್ಮಕ ಉತ್ತರ ಕಂಡು ಕೊಳ್ಳಬಹುದು ಎಂದು ಇಸ್ರೋ ವಿಜ್ಞಾನಿ ರಾಮಕೃಷ್ಣ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಜಿ.ಪರಮೇಶ್ವರ್ ಮಾತನಾಡಿ, ಭಾರತ ಎಂದಿಗೂ ಕೂಡಾ ಮುಂಚೂಣಿಯಲ್ಲಿರುವ ರಾಷ್ಟ್ರ. ಸ್ವಾತಂತ್ರ‍್ಯ ಬಂದ ನಂತರ ದೇಶದಲ್ಲಿ ಶಿಕ್ಷಣ ಕ್ರಾಂತಿಯಾಗಿದೆ. ಸಾಮಾನ್ಯ ಶಿಕ್ಷಣ ಕಿಂತ ತಂತ್ರಜ್ಞಾನದ ಶಿಕ್ಷಣದ ಬೇಡಿಕೆ ಹೆಚ್ಚಿದ್ದು, ಈ ಕಾಂತ್ರಿಯಿಂದ ಬಾಹ್ಯಾಕಾಶ ಕ್ಷೇತ್ರದಲ್ಲಿ ಆಮೂಲಾಗ್ರ ಬೆಳವಣಿಗೆ ಆಗಿವೆ. ಈ ಸಾಧನೆಯನ್ನು ವಿದೇಶಗಳ ತಿರುಗಿ ನೋಡುವಂತೆ ಮಾಡಿದೆ. ತಂತ್ರಜ್ಞಾನ ಮತ್ತು ಮಾಹಿತಿ ಕ್ಷೇತ್ರದಲ್ಲಿ ಅಮೇರಿಕಾ ಸೇರಿದಂತೆ ಇತರೆ ದೇಶಗಳಿಗೆ ಮೀರಿದ ಬೆಳವಣಿಗೆಯಾಗಿದೆ ಎಂದರು.

ಹೆಚ್‌ಎಂಎಸ್ ಎಜುಕೇಷನ್ ಸೊಸೈಟಿಯ ಸದಸ್ಯರಾದ, ಮಾಜಿ ಶಾಸಕ ರಫೀಕ್ ಅಹಮ್ಮದ್ ಅವರು ಮಾತನಾಡಿ ಇಂದಿನ ಕಾಲದ ಮಕ್ಕಳು ಪೋಷಕರು ಶಿಕ್ಷಣದ ಮಹತ್ವದ ಬಗ್ಗೆ ಅರಿಯಬೇಕು. ಶೈಕ್ಷಣಿಕ ಕ್ಷೇತ್ರದಲ್ಲಿ ಅಧ್ಯಯನ ಮಾಡುವುದು ಇಂದು ಮುಖ್ಯವಾಗಿದೆ. ಇಂಜಿನಿಯರ್ ವಿದ್ಯಾರ್ಥಿಗಳು ಮುಂದೆ ಇಸ್ರೋದಂಹ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ ಸಾಧನೆಯನ್ನು ಮಾಡಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಸಾಹೇ ವಿವಿ ಕುಲಪತಿ ಡಾ. ಕೆ.ಬಿ.ಲಿಂಗೇಗೌಡ ಮಾತನಾ, ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳಿಗೆ ನೂರು ವರ್ಷಗಳ ಸಾಧನೆ ಯತ್ತ ಸಾಗಿದೆ. ಇಂಜಿನಿಯರ್‌ಗಳು ಸಾಧನೆ ಮಾಡಿದರೆ ಕ್ಷಣ ಮಾತ್ರದಲ್ಲಿ ಏನುಬೇಕಾದರೂ ಸಾಧನೆ ಮಾಡಬಹುದು. ಪೊಷಕರು ಸದಾ ತಮ್ಮ ಮಕ್ಕಳ ಚಟುವಟಿಕೆಯನ್ನು ಸೂಕ್ಷö್ಮವಾಗಿ ಗಮನಿಸಬೇಕು ಎಂದರು.

ಸಮಾರಂಭದಲ್ಲಿ ಸಾಹೇ ವಿವಿ ರಿಜಿಸ್ಟ್ರಾರ್ ಡಾ. ಎಂ.ಝಡ್. ಕುರಿಯನ್, ಪರೀಕ್ಷಾಂಗ ನಿಯಂತ್ರಕರಾದ ಡಾ.ಗುರು ಶಂಕರ್, ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ನಂಜುಂಡಪ್ಪ, ಸಾಹೇ ವಿವಿ ಕುಲಾಧಿಪತಿಗಳ ಸಲಹೆಗಾರ ರಾದ ಡಾ.ವಿವೇಕ್ ವೀರಯ್ಯ, ಎಸ್ ಎಸ್ ಐಟಿ ಪ್ರಾಂಶುಪಾಲರಾದ ಡಾ. ಎಂ.ಎಸ್. ರವಿಪ್ರಕಾಶ್, ಶ್ರೀ ಸಿದ್ಧಾರ್ಥ ಸ್ಕೂಲ್ ಆಫ್ ಇಂಜಿನಿಯರ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಲ್.ಸಂಜೀವ್ ಕುಮಾರ್, ಸಿದ್ದಾರ್ಥ ವೈದ್ಯ ಕೀಯ ಕಾಲೇಜುಗಳ ಪ್ರಾಂಶುಪಾಲರಾದ ಡಾ. ಸಾನಿಕೊಪ್ಪ, ಡಾ.ದಿವಾಕರ್, ಡಾ.ಪ್ರವೀಣ್ ಕುಡುವಾ ಸೇರಿದಂತೆ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ವಿವಿಧ ವಿಭಾಗದ ಮುಖ್ಯಸ್ಥರು, ಸಿಬ್ಬಂದಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ: Tumkur News: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು ಚಿತ್ರದುರ್ಗ ಸಂಸದ ಗೋವಿಂದ ಎಂ.ಕಾರಜೋಳ