Sunday, 27th October 2024

Manu Bhaker: ಅನಗತ್ಯ ಟ್ವೀಟ್‌ ಮಾಡಿ ಟೀಕೆಗೆ ಗುರಿಯಾದ ಒಲಿಂಪಿಯನ್‌ ಮನು ಭಾಕರ್‌

ನವದೆಹಲಿ: ಪ್ಯಾರಿಸ್‌ ಒಲಿಂಪಿಕ್ಸ್‌ ಅವಳಿ ಕಂಚಿನ ಪದಕ ವಿಜೇತೆ, ಭಾರತದ ತಾರಾ ಶೂಟರ್‌ ಮನು ಭಾಕರ್‌(Manu Bhaker) ಅನಗತ್ಯವಾಗಿ ಟೀಕೆಗೆ ಒಳಗಾಗಿದ್ದಾರೆ. ತಮ್ಮ ಟ್ವಿಟರ್‌ ಎಕ್ಸ್‌ ಖಾತೆಯಲ್ಲಿ ‘ನಾನು ಪ್ರತಿಷ್ಠಿತ ಮೇಜರ್‌ ಧ್ಯಾನ್‌ ಚಂದ್‌ ಖೇಲ್‌ ರತ್ನ(Dhyan Chand Khel Ratna Award) ಪ್ರಶಸ್ತಿಗೆ ಅರ್ಹಳೇ? ನೀವೇ ಹೇಳಿ ಎಂದು ಟ್ವೀಟ್‌ ಮಾಡಿದ್ದಾರೆ.

ಈ ಟ್ವೀಟ್‌ಗೆ ಭಾರೀ ಟೀಕೆಗಳು ಬಂದ ಕಾರಣ ತಕ್ಷಣ ಮನು ತಮ್ಮ ಟ್ವೀಟ್‌ ಡಿಲೀಡ್‌ ಮಾಡಿದ್ದಾರೆ. ಕೆಲವರು ಇದು ಮನು ಅವರ ಟ್ವಿಟರ್‌ ಎಕ್ಸ್‌ ಖಾತೆ ಹ್ಯಾಕ್‌ ಆಗಿರುವ ಸಾಧ್ಯತೆ ಇದೆ ಎಂದರೆ, ಇನ್ನು ಕೆಲವರು ಇದು ಉದ್ದೇಶಪೂರ್ವಕವಾಗಿ ಮಾಡಿರುವ ಟ್ವೀಟ್‌ ಎಂದು ಹೇಳಿದ್ದಾರೆ. ಇತ್ತೀಚೆಗೆ ಮನು ಹೋದಲ್ಲೆಲ್ಲ ತಾವು ಗೆದ್ದ ಪದಕಗಳನ್ನು ಒಯ್ಯುತ್ತಿರುವುದೇಕೆ ಕೆಲ ನೆಟ್ಟಿಗರು ಅವರನ್ನು ಟ್ರೋಲ್​ ಮಾಡಿದ್ದರು. ಪದಕ ಗೆದ್ದಿರುವುದು ದೇಶಕ್ಕೆ ತಿಳಿದಿದೆ ಆದರೂ ಪ್ರತಿ ಕಾರ್ಯಕ್ರಮಕ್ಕೂ ಎರಡು ಪದಕಗಳೊಂದಿಗೆ ಏಕೆ ಬರುತ್ತೀರಿ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದರು. ಇದಕ್ಕೆ ಮನು ನಾನು ಪಡೆದ ಪದಕಗಳನ್ನು ನಾನು ತರಬಾರದು ಎಂದು ಹೇಳುವುದರ ಹಿಂದಿನ ಅರ್ಥವೇನು ಎಂದು ಹೇಳುವ ಮೂಲಕ ತಕ್ಕ ತಿರುಗೇಟು ನೀಡಿದ್ದರು.

ʼಕೆಲವೊಮ್ಮೆ ತನ್ನ ವಿರುದ್ಧ ಹರಡುತ್ತಿರುವ ವದಂತಿಗಳಿಂದ ಅಸಮಾಧಾನ ಮತ್ತು ಕೋಪವನ್ನು ಅನುಭವಿಸುತ್ತೇನೆ. ಆದರೆ, ತನ್ನ ಕೋಪವನ್ನು ಹೇಗೆ ನಿರ್ವಹಿಸಬೇಕೆಂದು ಕಲಿತಿದ್ದೇನೆ ಎಂದು ಮನು ಭಾಕರ್ ಟ್ರೋಲ್‌ ಮಾಡುವವರಿಗೆ ತಕ್ಕ ಉತ್ತರ ನೀಡಿದ್ದರು.​ ಅಲ್ಲದೆ, ಕೋಪವು ಯಾವುದನ್ನೂ ಪರಿಹರಿಸುವುದಿಲ್ಲ. ಎಲ್ಲವನ್ನೂ ಧನಾತ್ಮಕವಾಗಿ ನೋಡಲು ಕಲಿಯಿರಿ. ಶೂಟಿಂಗ್‌ ಮೇಲಿನ ನನ್ನ ಪ್ರೀತಿಗೆ ಅಂತ್ಯವಿಲ್ಲ. ದೇಶಕ್ಕಾಗಿ ಸ್ಪರ್ಧಿಸಿ ಪದಕ ಗೆಲ್ಲಬೇಕು ಎಂಬುದೇ ನನ್ನ ಆಸೆ ಎಂದಿದ್ದರು.

ಇದನ್ನೂ ಓದಿ Vinayak M Bhatta, Amblihonda Column: ದುಡಿಮೆಗೊಂದು ಕೈ, ದಾನಕ್ಕೊಂದು ಕೈ..

ಪ್ಯಾರಿಸ್ ಒಲಿಂಪಿಕ್ಸ್-2024 ಮಹಿಳೆಯರ 10 ಮೀಟರ್ಸ್​ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚು ಮತ್ತು ಮಿಶ್ರ 10 ಮೀಟರ್ಸ್​ ಪಿಸ್ತೂಲ್ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್ ಅವರೊಂದಿಗೆ ಮತ್ತೊಂದು ಕಂಚಿನ ದಾಖಲೆಯನ್ನು ನಿರ್ಮಿಸಿದರು. 25 ಮೀಟರ್ಸ್​ ವಿಭಾಗದಲ್ಲಿ ಮೂರನೇ ಪದಕ ಸ್ವಲ್ಪದರಲ್ಲೇ ಕೈ ತಪ್ಪಿತ್ತು.

ಪದಕ ಗೆದ್ದ ಬಳಿಕ ಮನು ಭಾಕರ್‌ (Manu Bhaker) ಅವರ ಬ್ರಾಂಡ್‌ ಮೌಲ್ಯ 20 ಲಕ್ಷ ರೂ.ನಿಂದ 1.5 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ವರದಿಯಾಗಿದೆ. 22 ವರ್ಷದ ಮನು ಭಾಕರ್‌, ಕಳೆದ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದರಾದರೂ ಅವರಿಗೆ ಪದಕ ಲಭಿಸಿರಲಿಲ್ಲ. ಆದರೆ ಪ್ಯಾರಿಸ್‌ ನಲ್ಲಿ ಸಿಕ್ಕಿರುವ ಎರಡು ಪದಕಗಳು ಭಾಕರ್‌ ಬದುಕನ್ನೇ ಬದಲಿಸುವ ನಿರೀಕ್ಷೆಯಿದೆ ಎನ್ನಲಾಗಿದೆ.