Sunday, 27th October 2024

Digital Condom: ಲಾಂಚ್‌ ಆಗಿದೆ ಡಿಜಿಟಲ್‌ ಕಾಂಡೋಮ್‌; ಹಾಗಂದ್ರೇನು? ಇದರ ಬಳಕೆ ಹೇಗೆ ಮತ್ತು ಏಕೆ? ಇಲ್ಲಿದೆ ಡಿಟೇಲ್ಸ್‌

Digital Condom

ಬರ್ಲಿನ್‌ : ತಂತ್ರಜ್ಞಾನ ಹೆಚ್ಚಾದಂತೆ ಮನುಷ್ಯ ಖಾಸಗಿ ಬದುಕನ್ನು ಕಳೆದುಕೊಳ್ಳುತ್ತಿದ್ದಾನೆ. ಅದೆಷ್ಟೋ ಖಾಸಗಿ ವಿಚಾರಗಳು ಕೈಯಲ್ಲಿರುವ ಸ್ಮಾರ್ಟ್‌ಫೋನ್‌ನಿಂದ ಜಗಜ್ಜಾಹೀರಾಗಿರುವ ಸಂಗತಿಗಳು ಆಗಾಗ ಬೆಳಕಿಗೆ ಬರುತ್ತಿರುತ್ತವೆ. ಇದೀಗ ಅಂತಹ ಅಪಾಯಕ್ಕೆ ಬ್ರೇಕ್‌ ಹಾಕಲು ಡಿಜಿಟಲ್ ಕಾಂಡೋಮ್‌ ಆಪ್‌ (Digital Condom) ಪರಿಚಿತವಾಗಿದೆ.

ಜರ್ಮನಿಯ ಲೈಂಗಿಕ ಆರೋಗ್ಯ ಬ್ರ್ಯಾಂಡ್ ಬಿಲ್ಲಿ ಬಾಯ್ (brand Billy Boy )ಸಂಸ್ಥೆಯು ಇನ್ನೋಸಿಯನ್ ಬರ್ಲಿನ್ ಜೊತೆಗಿನ ಪಾಲುದಾರಿಕೆಯಲ್ಲಿ ಡಿಜಿಟಲ್ ಕಾಂಡೋಮ್‌ನ್ನು (Digital Condom) ಪರಿಚಯಿಸಿದೆ . ಇದು ಡಿಜಿಟಲ್‌ ಕಾಂಡೋಮ್‌ ಅಪ್ಲಿಕೇಶನ್‌ ಆಗಿದ್ದು, ಒಪ್ಪಿಗೆ ಇಲ್ಲದೆ ಜೋಡಿಯ ಖಾಸಗಿ ಕ್ಷಣವನ್ನು ಆಡಿಯೋ ಅಥವಾ ವಿಡಿಯೋ ರೆಕಾರ್ಡಿಂಗ್‌ ತಡೆಗಟ್ಟಲು ಈ ಆಪ್‌ ಸಹಾಯಕಾರಿಯಾಗಿದೆ. ʼನಿಜವಾದ ಕಾಂಡೋಮ್‌ ಬಳಸಿದಷ್ಟೇ ಸುಲಭʼ ಎಂಬ ಶೀರ್ಷಿಕೆಯಡಿಯಲ್ಲಿ ಕಂಪನಿ ಜಾಹೀರಾತು ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಕಾಂಡೋಮ್‌ ಅಪ್ಲಿಕೇಶನ್‌ ಹೇಗೆ ಕಾರ್ಯ ನಿರ್ವಹಿಸುತ್ತದೆ?

ಅಪ್ಲಿಕೇಶನ್ ಅನ್ನು ಪರಿಚಯಿಸಿರುವ ಡೆವಲಪರ್ ಫೆಲಿಪ್ ಅಲ್ಮೇಡಾ “ಸ್ಮಾರ್ಟ್‌ಫೋನ್‌ಗಳು ಜನರಿಗೆ ಅತ್ಯವಶ್ಯಕ. ಜನರ ಜೀವನದಿಂದ ಬೇರ್ಪಡಿಸಲು ಸಾಧ್ಯವಿಲ್ಲ. ನಿಮ್ಮ ಅನುಮತಿಯಿಲ್ಲದೇ ನಿಮ್ಮ ವೈಯಕ್ತಿಕ ಸಂಗತಿಗಳನ್ನು, ಕ್ಷಣಗಳ ರೆಕಾರ್ಡಿಂಗ್‌ನಿಂದ ನಿಮ್ಮನ್ನು ರಕ್ಷಿಸುವ ಸಲುವಾಗಿ ಈ ಆಪ್‌ ಅನ್ನು ಡೆವಲವ್‌ ಮಾಡಲಾಗಿದೆ. ಬ್ಲೂಟೂತ್ ಬಳಕೆಯ ಮೂಲಕ ನಿಮ್ಮ ಕ್ಯಾಮರಾ ಮತ್ತು ಮೈಕ್ ಅನ್ನು ಸರಳವಾಗಿ ನಿರ್ಬಂಧಿಸಬಹುದಾದ ಮೊದಲ ಅಪ್ಲಿಕೇಶನ್ ಇದಾಗಿದೆ ಎಂದು ವಿವರಿಸಿದರು.

ಅಪ್ಲಿಕೇಶನ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ವಿವರಿಸಿದ ಕಂಪನಿಯು “ಇದು ಏಕಕಾಲದಲ್ಲಿ ಅನೇಕ ಸಾಧನಗಳನ್ನು ನಿರ್ಬಂಧಿಸಬಹುದು” ಎಂದು ಹೇಳಿದೆ. ಅಪ್ಲಿಕೇಶನ್‌ನ ಕಾರ್ಯವು ಸರಳವಾಗಿದೆ: ಖಾಸಗಿ ಕ್ಷಣಗಳ ಮೊದಲು, ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಸ್ಮಾರ್ಟ್‌ಫೋನ್ ಅನ್ನು ಸಮೀಪದಲ್ಲಿ ಇರಿಸುತ್ತಾರೆ. ಈ ಅಪ್ಲೀಕೇಶನ್‌ ಖಾಸಗಿ ಕ್ಷಣಗಳನ್ನು ರೆಕಾರ್ಡ್‌ ಮಾಡುವುದನ್ನು ತಡೆಯುತ್ತದೆ. ಒಂದು ವೇಳೆ ರೆಕಾರ್ಡಿಂಗ್‌ ಆಗುತ್ತಿದ್ದರೆ ಸೈರನ್‌ ಮೂಲಕ ಎಚ್ಚರಿಕೆ ಸಂದೇಶವನ್ನು ನೀಡುತ್ತದೆ ಎಂದು ಹೇಳಿದೆ.

ಇದನ್ನೂ ಓದಿ : ಸಮಾಜಿಕ ಜಾಲತಣದಲ್ಲಿ ಚರ್ಚೆ ಹುಟ್ಟು ಹಾಕಿದ ಅಪ್ಲೀಕೇಶನ್‌ Abhishek-Aishwarya: ಐಶ್ವರ್ಯ ಜತೆ ಡಿವೋರ್ಸ್‌ ವದಂತಿ ಬೆನ್ನಲ್ಲೇ ಮೌನ ಮುರಿದ ಅಭಿಷೇಕ್ ಬಚ್ಚನ್‌;‌ ವಿಡಿಯೋ ಫುಲ್‌ ವೈರಲ್‌

ಡಿಜಿಟಲ್‌ ಕಾಂಡೋಮ್‌ ಅಪ್ಲಿಕೇಶನ್‌ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯನ್ನು ಹುಟ್ಟು ಹಾಕಿದೆ. ನೆಟ್ಟಿಗರು ತರಹೇವಾರಿ ಕಮೆಂಟ್‌ ಮಾಡುತ್ತಿದ್ದು, ವ್ಯಕ್ತಿಯೊಬ್ಬ ವ್ಯಂಗ್ಯವಾಗಿ, “ಹೋಲ್ಡ್, ಬೇಬಿ, ಇದು ಅಪ್‌ಡೇಟ್ ಆಗುತ್ತಿದೆ” ಎಂದು ಹೇಳಿದ್ದಾರೆ. ಇನ್ನೊಬ್ಬರು “ನಮ್ಮ ಸಮಾಜದಲ್ಲಿ ಇದರ ಅಗತ್ಯೆ ಇರುವುದು ದುಃಖಕರವಾಗಿದೆ” ಎಂದು ಕಾಮೆಂಟ್ ಮಾಡಿದ್ದಾರೆ.