ಗೌರಿಬಿದನೂರು; ತಾಲ್ಲೂಕಿನ ಕಸಬಾ ಹೋಬಳಿ ದೊಡ್ಡ ಕುರುಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿದುರಾ ಕಾಲೋನಿ ಬಳಿ ಉತ್ತರ ಪಿನಾಕಿನಿ ನದಿಗೆ ಅಡ್ಡಲಾಗಿ ೧೦ ವರ್ಷದ ಹಿಂದೆ ಚೆಕ್ ಡ್ಯಾಮ್ ನಿರ್ಮಾಣ ಮಾಡಿದ್ದು ಕಳೆದ ಬಾರಿ ನದಿ ಬಂದಾಗ ಕೊಚ್ಚಿಕೊಂಡು ಹೋಗಿದೆ, ಈಗ ನದಿ ಹರಿಯುತ್ತಿದ್ದು ನದಿಯ ನೀರು ಶೇಖರಣೆ ಆಗದೆ ಮುಂದಕ್ಕೆ ಹೋಗುತ್ತಿದೆ ಎಂದು ಆ ಭಾಗದ ರೈತರು ಮತ್ತು ಗ್ರಾಮಸ್ಥರು ಚೆಕ್ ಡ್ಯಾಮ್ ಬಳಿ ಪ್ರತಿಭಟನೆ ನಡೆಸಿದರು.
ಇದೇ ವೇಳೆ ಪಿನಾಕಿನಿ ಜಲ ಸಮೃದ್ಧಿ ಜಲ ಸಂಘದ ಎ.ಸಿ.ಅಶ್ವತಯ್ಯ ಮಾತನಾಡಿ ಈ ಹಿಂದೆ ಗ್ರಾಮದ ರೈತರ ಜಮೀನುಗಳಿಗೆ ಹೋಗಲು ರಸ್ತೆ ಇರಲಿಲ್ಲ ನಾವೇ ಒಂದು ಸಂಘ ಕಟ್ಟಿಕೊಂಡು ಚಂದ ವಸೂಲಿ ಮಾಡಿ ಕಾಲುದಾರಿ ಯನ್ನು ಎರಡು ಕಡೆ ರಸ್ತೆ ಮಾಡಿಕೊಂಡಿದ್ದೇವೆ ಅದು ಈಗ ಮಳೆಗೆ ಹಾಳಾಗಿದೆ. ನದಿ ಹರಿಯುತ್ತಿದ್ದು ಚೆಕ್ ಡ್ಯಾಮ್ ಶಿಥಿಲಾವಸ್ತೆಗೆ ತಲುಪಿದೆ, ನದಿ ಹರಿಯುತ್ತಿರುವುದರಿಂದ ಸುಮಾರು ೫೦ಕ್ಕೂ ಹೆಚ್ಚು ಜನ ರೈತರು ಬೆಳೆದಂತಹ ಬೆಳೆಗಳನ್ನು ತರಲು ಹೋಗುವುದಕ್ಕೆ ಸರಿಯಾದ ರಸ್ತೆ ಇರುವುದಿಲ್ಲ. ಚೆಕ್ ಡ್ಯಾಮ್ ಅನ್ನು ಸರಿಯಾದ ರೀತಿಯಲ್ಲಿ ನಿರ್ಮಿಸಿದರೆ ಅಂತರ್ಜಲ ವೃದ್ಧಿಯಾಗಿ ಕೊಳವೆ ಬಾವಿಗಳಲ್ಲಿ ೩ ವರ್ಷಕ್ಕೆ ಆಗುವಷ್ಟು ಕುಡಿಯುವ ನೀರು ಸಿಗುತ್ತದ. ಇಲ್ಲವಾದರೆ ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತದೆ ಸಂಬ0ಧಪಟ್ಟ ಇಲಾಖೆಯವರು ಗಮನಹರಿಸಿ, ರೈತರ ಹೊಲಕ್ಕೆ ಹೋಗಲು ರಸ್ತೆ ಮತ್ತು ಚೆಕ್ ಡ್ಯಾಮ್ ನಿರ್ಮಿಸಬೇಕೆಂದು ತಿಳಿಸಿದರು.
ಮಾಜಿ ಗ್ರಾ.ಪಂ ಸದಸ್ಯ ಡಿ.ಡಿ.ಸತ್ಯನಾರಾಯಣ ಮಾತನಾಡಿ ದೊಡ್ಡ ಕುರುಗೋಡು, ಹಾಲಗಾನಹಳ್ಳಿ, ಕದಿರೇನ ಹಳ್ಳಿ, ನಾಗಸಂದ್ರ, ಹುದೂತಿ, ಗೌಡಸಂದ್ರ, ವಿದುರಾಶ್ವತ, ಭಾಗಗಳಲ್ಲಿ ವಾಸವಿರುವ ನಾವು ಪುಣ್ಯ ಸ್ಥಳದಲ್ಲಿ ಹುಟ್ಟಿದ್ದು ನಾವು ಜನಿಸಿದ ಜಾಗದಲ್ಲಿ ಮಾಜಿ ಶಾಸಕರ ಕಾಲಾವಧಿಯಲ್ಲಿ ಚೆಕ್ ಡ್ಯಾಮ್ ನಿರ್ಮಾಣ ಮಾಡಲಾಗಿತ್ತು. ಆದರೆ ಅದು ಕಳಪೆ ಕಾಮಗಾರಿಯಾಗಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ 10 ಅಡಿಯಷ್ಟು ಗುಂಡಿ ಬಿದ್ದು ಡ್ಯಾಮ್ ನೆರೆ ಬಿಟ್ಟಿರುವ ಸ್ಥಿತಿಗೆ ಬಂದಿದೆ.
ಇದರ ಬಗ್ಗೆ ವಿಡಿಯೋ ಸಹಿತ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನ ವಿಲ್ಲ ನದಿ ಪಾತ್ರದಲ್ಲಿ ಗಿಡ ಗಂಟೆಗಳು ಬೆಳೆದು ನಿಂತಿವೆ ದೊಡ್ಡ ಕುರುಗೋಡು ಗ್ರಾಮದಲ್ಲಿ ಹಲವು ದಿನಗಳಿಂದ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಕುರಿಗಳನ್ನು ಎಳೆದುಕೊಂಡು ಬಂದು ನದಿಯಲ್ಲಿ ಕಚ್ಚಿ ಸಾಯಿಸಿರುವ ಘಟನೆಗಳು ನಡೆದಿದೆ ಮತ್ತು ರೈತರ ಹೊಲಕ್ಕೆ ಹೋಗಲು ರಸ್ತೆ ಕಲ್ಪಿಸಿ ಕೊಡಬೇಕು ಮತ್ತು ರೈತರು ಪಡುವ ಕಷ್ಟವನ್ನು ಶಾಸಕರಾಗಲಿ, ಜಿಲ್ಲಾಧಿಕಾರಿಗಳಾಗಲಿ, ತಹಸೀಲ್ದಾರ್ ಆಗಲಿ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿ ನಮಗೆ ಚೆಕ್ ಡ್ಯಾಮ್ ಹಾಗೂ ಹೊಲಗಳಿಗೆ ಹೋಗಲು ರಸ್ತೆ ಕಲ್ಪಿಸಿ ಕೊಡಬೇಕೆಂದು ಮನವಿ ಮಾಡಿದರು.
ತಹಸೀಲ್ದಾರ್ ಪರವಾಗಿ ಪ್ರತಿಭಟನಾ ಸ್ಥಳಕ್ಕೆ ಶಿರಸ್ತೆದಾರ ಕಬೀರ್ ಭೇಟಿ ನೀಡಿ ರೈತರ ಮನವಿ ಪತ್ರ ಸ್ವೀಕರಿಸಿ ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದು ತಿಳಿಸಿದರು.
ಇದೇ ವೇಳೆ ಗ್ರಾಮದ ಮುಖಂಡರಾದ ಶ್ರೀನಿವಾಸ್, ಕೆ.ಸತ್ಯನಾರಾಯಣ, ಆದಿಯಪ್ಪ, ಎನ್,ರಂಗಪ್ಪ, ಮಂಜುನಾಥ್, ರಂಗ, ನಾರಾಯಣಪ್ಪ, ಜಿ.ಎನ್.ನಾಗರಾಜ್, ಶಂಕ್ರಪ್ಪ, ಅಶ್ವತ್ಥನಾರಾಯಣ್, ಗುರ್ಕಾ ರಾಮಾಂಜಿ, ಅಶ್ವತ್ಥ ಮತ್ತು ಗ್ರಾಮ ಆಡಳಿತ ಅಧಿಕಾರಿ ಮಹೇಶ್, ಗ್ರಾಮಾಂತರ ಠಾಣೆಯ ಪಿಎ??? ರಮೇಶ್ ಗುಗ್ಗರಿ ಮತ್ತು ಸಿಬ್ಬಂದಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.