Friday, 22nd November 2024

Bomb threat: ʻ46 ಲಕ್ಷ ರೂ.ಗೆ ಕೊಡಿ… ಇಲ್ಲದಿದ್ದರೆ ಬಾಂಬ್‌ ಸ್ಫೋಟ…ʼ ಲಖನೌ ಹೊಟೇಲ್‌ಗಳಿಗೆ ಬೆದರಿಕೆ

Bomb threat

ಲಖನೌ: ಗುಜರಾತ್‌ನ ಹೊಟೇಲ್‌ಗಳಿಗೆ ಬಾಂಬ್‌ ಬೆದರಿಕೆ(Bomb threat) ಬಂದಿರುವ ಬೆನ್ನಲ್ಲೇ ಇದೀಗ ಉತ್ತರಪ್ರದೇಶದ ಲಖನೌದಲ್ಲಿ ಹತ್ತು ಹೊಟೇಲ್‌ಗಳಿಗೆ ಬೆದರಿಕೆ ಸಂದೇಶ ಬಂದಿದೆ. ಇ-ಮೇಲ್‌ ಮೂಲಕ ಈ ಬಾಂಬ್‌ ಬೆದರಿಕೆ ಬಂದಿದ್ದು, $55,000 (4,624,288 ರೂ.) ಕೊಡದೇ ಇದ್ದಲ್ಲಿ ಬಾಂಬ್‌ ಸ್ಫೋಟಿಸುವುದಾಗಿ ಕಿಡಿಗೇಡಿಗಳು ಎಚ್ಚರಿಕೆ ನೀಡಿದ್ದಾರೆ.

ನಿಮ್ಮ ಹೋಟೆಲ್‌ನಲ್ಲಿ ಬಾಂಬ್‌ಗಳನ್ನು ಕಪ್ಪು ಚೀಲಗಳಲ್ಲಿ ಅಡಗಿಸಿಡಲಾಗಿದೆ. ನನಗೆ $55,000 ಬೇಕು, ಅಥವಾ ನಾನು ಸ್ಫೋಟಕಗಳನ್ನು ಸ್ಫೋಟಿಸುತ್ತೇನೆ ಮತ್ತು ರಕ್ತವು ಎಲ್ಲೆಡೆ ಹರಡುತ್ತದೆ. ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸುವ ಯಾವುದೇ ಪ್ರಯತ್ನವು ಸಫಲವಾಗುವುದಿಲ್ಲ ಎಂದು ಬಾಂಬ್ ಬೆದರಿಕೆ ಇಮೇಲ್ ಸಂದೇಶ ಬಂದಿದೆ. ಬೆದರಿಕೆಯನ್ನು ಸ್ವೀಕರಿಸಿದ ನಂತರ, ಹೋಟೆಲ್ ಆಡಳಿತವು ಪೊಲೀಸರಿಗೆ ಮಾಹಿತಿ ನೀಡಿತು, ಸ್ಥಳೀಯ ಅಧಿಕಾರಿಗಳು ತಕ್ಷಣ ತನಿಖೆ ಕೈಗೆತ್ತಿಕೊಂಡಿದ್ದಾರೆ.

ಇನ್ನು ನಿನ್ನೆಯಷ್ಟೇ ಗುಜರಾತ್‌ನ 10 ಹೊಟೇಲ್‌ಗಳಿಗೂ ಅದೇ ರೀತಿಯ ಬೆದರಿಕೆ ಬಂದಿತ್ತು. ಇಂಪೀರಿಯಲ್ ಪ್ಯಾಲೇಸ್, ಸಯಾಜಿ ಹೋಟೆಲ್, ಸೀಸನ್ಸ್ ಹೋಟೆಲ್ ಮತ್ತು ಗ್ರ್ಯಾಂಡ್ ರೀಜೆನ್ಸಿ, ಸೇರಿದಂತೆ ಅನೇಕ ಸುಪ್ರಸಿದ್ಧ ಹೊಟೇಲ್‌ಗಳಿಗೆ ಇ-ಮೇಲ್‌ ಮೂಲಕ ಬೆದರಿಕೆ ಸಂದೇಶ ಬಂದಿತ್ತು.

ಇನ್ನುಈ ಬೆದರಿಕೆ ಸಂದೇಶ ಬರುತ್ತಿದ್ದಂತೆ ಹೊಟೇಲ್‌ಗೆ ಗ್ರಾಹಕರು ಮತ್ತು ಸ್ಥಳೀಯ ನಿವಾಸಿಗಳಲ್ಲಿ ಭಾರೀ ಆತಂಕ ಸೃಷ್ಟಿಯಾಗಿತ್ತು. ಬೆದರಿಕೆ ಇಮೇಲ್‌ನ ಮೂಲವನ್ನು ಪತ್ತೆಹಚ್ಚಲು ರಾಜ್‌ಕೋಟ್ ಪೊಲೀಸರು ಸಂಪೂರ್ಣ ತನಿಖೆ ಆರಂಭಿಸಿದ್ದಾರೆ. ನಿಮ್ಮ ಹೋಟೆಲ್‌ನ ಪ್ರತಿಯೊಂದು ಸ್ಥಳದಲ್ಲಿ ನಾನು ಬಾಂಬ್‌ಗಳನ್ನು ಇರಿಸಿದ್ದೇನೆ. ಕೆಲವೇ ಗಂಟೆಗಳಲ್ಲಿ ಬಾಂಬ್‌ಗಳು ಸ್ಫೋಟಗೊಳ್ಳುತ್ತವೆ. ಇಂದು ಅನೇಕ ಅಮಾಯಕರ ಜೀವಗಳು ಬಲಿಯಾಗುತ್ತವೆ. ತಕ್ಷಣ ಜನರನ್ನು ಸ್ಥಳಾಂತರಿಸಿ ಎಂದು ಹೋಟೆಲ್‌ಗಳಿಗೆ ಬಂದ ಇಮೇಲ್ ಸಂದೇಶ ಬಂದಿದೆ ಎನ್ನಲಾಗಿದೆ.

ಏರ್ ಇಂಡಿಯಾ, ಇಂಡಿಗೋ, ವಿಸ್ತಾರಾ ಮತ್ತು ಇತರ ಹಲವಾರು ಭಾರತೀಯ ವಿಮಾನಯಾನ ಸಂಸ್ಥೆಗಳು ಕಳೆದ 10 ದಿನಗಳಲ್ಲಿ 250 ಹೆಚ್ಚು ಬೆದರಿಕೆ ಸಂದೇಶಗಳು ಬಂದಿರುವ ಬೆನ್ನಲ್ಲೇ ಇದೀಗ ಕಿಡಿಗೇಡಿಗಳು ಹೊಟೇಲ್‌ಗಳಿಗೆ ಸಂದೇಶ ಕಳುಹಿಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: Israeli strik : ಮಧ್ಯಪ್ರಾಚ್ಯಗಳಲ್ಲಿ ಯುದ್ಧ; ಶಾಂತಿ ಮಂತ್ರ ಪಠಿಸಿದ ಭಾರತದ ವಿದೇಶಾಂಗ ಇಲಾಖೆ