Sunday, 27th October 2024

Viral News: ಗೋಡೆಗೆ ಅಂಟಿಸಿದ ಬಾಳೆಹಣ್ಣಿನ ಕಲಾಕೃತಿಗೆ ಚಿನ್ನದ ಬೆಲೆ; ಹರಾಜಿನಲ್ಲಿ 12 ಕೋಟಿ ರೂ. ಪಡೆಯುವ ನಿರೀಕ್ಷೆ

Viral News

ರೋಮ್‌: ಯಾವುದೇ ಕಲಾಕೃತಿ ನೋಡುವಾಗ ಮನಸ್ಸು ಅರಳುವುದು ಸಹಜ. ಅದರಲ್ಲಿಯೂ ಪ್ರಕೃತಿಗೆ ಸಂಬಂಧಿಸಿದ ಕಲಾಕೃತಿಗಳು ಎಂತಹವರನ್ನೂ ಆಕರ್ಷಿಸುತ್ತದೆ. ಶ್ರಮವಹಿಸಿ ಬಿಡಿಸಿವ ಕಲಾಕೃತಿ ಜನ ಸಾಮಾನ್ಯರನ್ನು ಆಕರ್ಷಿಸಿದರೆ ಕಲಾವಿದನ ಶ್ರಮ ಸಾರ್ಥಕ ಎನಿಸಿಕೊಳ್ಳುತ್ತದೆ. ಕೆಲವೊಮ್ಮೆ ಅತ್ಯುತ್ತಮ ಕಲಾಕೃತಿಗಳು ಹರಾಜಿನಲ್ಲಿ ಉತ್ತಮ ಬೆಲೆಗೆ ಬಿಕರಿಯಾಗುತ್ತವೆ. ಬೆಲೆಯ ಕಾರಣಕ್ಕೆ ವಿಶ್ವ ದಾಖಲೆಯನ್ನೂ ನಿರ್ಮಿಸುತ್ತವೆ. ನಾವು ಈಗ ಹೇಳ ಹೊರಟಿರುವುದು ಅಂತಹ ಅಪರೂಪದ ಕಲಾಕೃತಿಯ ಬಗ್ಗೆ. ಈ ಕಲಾಕೃತಿ ಹರಾಜಿನಲ್ಲಿ ಪಡೆದುಕೊಳ್ಳಲಿರುವ ಬೆಲೆ ಕೇಳಿದರೆ ಅಚ್ಚರಿಯಿಂದ ನಿಮ್ಮ ಹುಬ್ಬು ಮೇಲಕ್ಕೇರುವುದು ಖಚಿತ. ಈ ಕಲಾಕೃತಿಯ ಬೆಲೆ ಬರೋಬ್ಬರಿ 1 ಮಿಲಿಯನ್‌ – 1.5 ಮಿಲಿಯನ್‌ ಡಾಲರ್‌. ಅಂದರೆ ಸುಮಾರು 12 ಕೋಟಿ ರೂ! ಯಾವುದು ಈ ಕಲಾಕೃತಿ? ಏನಿದರ ವೈಶಿಷ್ಟ್ಯ? ಇಲ್ಲಿದೆ ವಿವರ (Viral News).

ಇಟಲಿಯ ಕಲಾವಿದ ಮೌರಿಜಿಯೋ ಕ್ಯಾಟೆಲನ್ (Maurizio Cattelan) ರಚಿಸಿರುವ ಕಲಾಕೃತಿ ಇಷ್ಟೊಂದು ದುಬಾರಿ ಮೊತ್ತಕ್ಕೆ ಹರಾಜಿನಲ್ಲಿ ಬಿಕರಿಯಾಗುವ ನಿರೀಕ್ಷೆಯಲ್ಲಿದೆ. ಖಾಲಿಯಿರುವ ಬಿಳಿಗೋಡೆಗೆ ಟೇಪ್‌ ಮೂಲಕ ಅಂಟಿಸಿರುವ ಬಾಳೆಹಣ್ಣಿನ ಕಲಾಕೃತಿ ಇದಾಗಿದ್ದು, ಇದಕ್ಕೆ ‘ಕಮೀಡಿಯನ್​​’ (Comedian) ಎಂಬ ಹೆರಿಡಲಾಗಿದೆ. ಈ ಕಲಾಕೃತಿ 2019ರಲ್ಲಿ 85 ಲಕ್ಷ ರೂ.ಗೆ ಮಾರಾಟವಾಗಿತ್ತು. 5 ವರ್ಷಗಳ ಬಳಿಕ ಇದೀಗ ಇದರ ಬೆಲೆ ಸುಮಾರು 12 ಪಟ್ಟು ಹೆಚ್ಚಾಗಿದೆ. ಹರಾಜಿನ ವಿಜೇತರು ಟಜ್ಟ್‌ ಟೇಪ್‌ ರೋಲ್‌, ಒಂದು ಬಾಳೆಹಣ್ಣು, ದೃಢೀಕರಣದ ಪ್ರಮಾಣ ಪತ್ರ ಮತ್ತು ಕಲಾಕೃತಿಯನ್ನು ಸ್ಥಾಪಿಸಲು ಅನುಮತಿ ಪಡೆಯಲಿದ್ದಾರೆ.

ಏನಿದರ ವೈಶಿಷ್ಟ್ಯ?

‘ಕಮೀಡಿಯನ್​​’ ಎನ್ನುವುದು ಯಾವುದೇ ಚಿತ್ರ, ಬರಹಗಳಿಲ್ಲದ ಗೋಡೆಗೆ ಟೇಪ್‌ನಲ್ಲಿ ಅಂಟಿಸಿರುವ ಬಾಳೆಹಣ್ಣು. ಇದು ನೈಜ ಬಾಳೆಹಣ್ಣಾಗಿದ್ದು, ಈ ಕಲಾಕೃತಿಯನ್ನು ಖರೀದಿಸಿದವರು ಬೇಕಾದಾಗ ಬಾಳೆಹಣ್ಣನ್ನು ಬದಲಾಯಿಸಬಹುದು. ಅಚ್ಚರಿ ಎಂದರೆ ಕಲಾವಿದ ಮೌರಿಜಿಯೋ ಕ್ಯಾಟೆಲನ್ ಮೊದಲು ಕಂಚಿನ ಬಾಳೆಹಣ್ಣನ್ನು ತಯಾರಿಸಿದ್ದರು. ಆದರೆ ಅದು ಸರಿ ಕಾಣಲಿಲ್ಲವೆಂದು ಬಳಿಕ ಮಿಯಾಮಿಯ ಅಂಗಡಿಯೊಂದರಲ್ಲಿ ನಿಜವಾದ ಬಾಳೆಹಣ್ಣನ್ನು ಖರೀದಿಸಿ ಅದನ್ನು ಡಕ್ಟ್​ ಟೇಪ್​ನಿಂದ ಅಂಟಿಸಿದ್ದರು. ಬಳಿಕ ಇದು ಭಾರೀ ಜನಪ್ರಿಯತೆ ಪಡೆಯಿತು. 15 ವರ್ಷಗಳ ಬಳಕ ಕಲಾ ಮೇಳಕ್ಕಾಗಿ ಮೌರಿಜಿಯೋ ಕ್ಯಾಟೆಲನ್ ತಯಾಸಿಕೊಟ್ಟ ಕಲಾಕೃತಿ ಇದಾಗಿತ್ತು.

ಯಾರು ಈ ಮೌರಿಜಿಯೋ ಕ್ಯಾಟೆಲನ್?

ಇಟಲಿಯಲ್ಲಿ 1960ರಲ್ಲಿ ಜನಿಸಿದ ಮೌರಿಜಿಯೋ ಕ್ಯಾಟೆಲನ್ ಜನಪ್ರಿಯ ಕಲಾವಿದರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಅವರು ಈ ಹಿಂದೆ ಚಿನ್ನದ ಟಾಯ್ಲೆಟ್ ಸೀಟ್ ಅನ್ನು ತಯಾರಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಉಡುಗೊರೆ ನೀಡುವ ಮೂಲಕ ಸುದ್ದಿಯಾಗಿದ್ದರು.

ಮೌರಿಜಿಯೋ ಕ್ಯಾಟೆಲನ್ ಅವರ ತಾಯಿ ಸ್ವಚ್ಛತಾ ಸಿಬ್ಬಂದಿ ಮತ್ತು ತಂದೆ ಟ್ರಕ್ ಚಾಲಕರಾಗಿದ್ದರು. ಕ್ಯಾಟೆಲನ್ 1980ರ ದಶಕದ ಆರಂಭದಲ್ಲಿ ಫೋರ್ಲಿ (ಇಟಲಿ)ಯಲ್ಲಿ ಮರದ ಪೀಠೋಪಕರಣಗಳನ್ನು ವಿನ್ಯಾಸಗೊಳಿಸುವ ಮತ್ತು ಉತ್ಪಾದಿಸುವ ಮೂಲಕ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಕ್ಯಾಟೆಲನ್ ಕಲೆಯಲ್ಲಿ ಯಾವುದೇ ಔಪಚಾರಿಕ ತರಬೇತಿಯನ್ನು ಹೊಂದಿಲ್ಲ. ಅದಗ್ಯೂ ಜನಪ್ರಿಯ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಆ ಮೂಲಕ ತಮ್ಮ ಕಲಾಕೃತಿಗಳಿಗೆ ಕೋಟಿ ಕೋಟಿ ಗಳಿಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: Sayed Haider Raza: ಜನಪ್ರಿಯ ಕಲಾವಿದ ಸೈಯದ್ ಹೈದರ್ ರಾಜಾ ಅವರ 2.5 ಕೋಟಿ ರೂ. ಮೌಲ್ಯದ ಕಲಾಕೃತಿ ಕಳವು