Sunday, 27th October 2024

Tejasvi Surya: ಕಠಿಣ ಐರನ್‌ಮ್ಯಾನ್‌ ರೇಸ್ ಗೆದ್ದ ಮೊದಲ ಸಂಸದ ತೇಜಸ್ವಿ‌ ಸೂರ್ಯ! ಮೋದಿ ಶ್ಲಾಘನೆ

Tejasvi surya

ಬೆಂಗಳೂರು: ಫಿಟ್‌ನೆಸ್ ಮೂಲಕವೇ ದೇಶದಲ್ಲಿ ಹೆಸರಾಗಿರುವ ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ (Tejasvi Surya) ಅವರು ಇದೀಗ ತಮ್ಮ ಫಿಟ್‌ನೆಸ್ ಮೂಲಕವೇ ಹೊಸ ದಾಖಲೆ ಬರೆದಿದ್ದಾರೆ. ದೇಶದಲ್ಲಿ ತೀರಾ ಕಠಿಣ ಎನಿಸುವ ಸ್ಪರ್ಧೆಯಲ್ಲಿ ಒಂದೆಸಿರುವ ಐರನ್ ಮ್ಯಾನ್‌ 70.3 ರೇಸ್‌ನಲ್ಲಿ ಸಂಸದ ತೇಜಸ್ವಿ ಸೂರ್ಯ ಅವರು ಗೆಲುವು ಸಾಧಿಸುವ ಮೂಲಕ ಈ ಸ್ಫರ್ಧೆಯಲ್ಲಿ ವಿಜೇತರಾದ ಮೊದಲ ಸಂಸದ ಎನ್ನುವ ದಾಖಲೆ ಬರೆದಿದ್ದಾರೆ. ಐರನ್‌ಮ್ಯಾನ್‌ ಸ್ಪರ್ಧೆಯಲ್ಲಿ ವಾಕಿಂಗ್, ಸ್ವಿಮ್ಮಿಂಗ್‌ ಹಾಗೂ ಸೈಕ್ಲಿಂಗ್‌ ಮೂರು ರೀತಿಯ ಸ್ಪರ್ಧೆಗಳಿರುತ್ತವೆ, ಈ ಮೂರರಲ್ಲಿಯೂ ತೇಜಸ್ವಿ ಸೂರ್ಯ ಅವರು ಗೆಲುವು ಸಾಧಿಸುವ ಮೂಲಕ ಐರನ್‌ಮ್ಯಾನ್‌ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ್ದಾರೆ. ಈ ವಿಶೇಷ ಸಾಧನೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.

ಗೋವಾದಲ್ಲಿ ಭಾನುವಾರ ನಡೆದ ಈ ಸ್ಫರ್ಧೆಯಲ್ಲಿ ತೇಜಸ್ವಿ ಸೂರ್ಯ ಅವರು 1,900 ಮೀಟರ್ ಈಜು, 90 ಕಿ.ಮೀ ಸೈಕ್ಲಿಂಗ್‌ ಮತ್ತು 21.1 .ಕಿಮೀ ಓಟದ ಮೂರು ವಿಭಾಗಗಳಲ್ಲಿ ಭಾಗಿಯಾಗಿ 8 ಗಂಟೆ, 27 ನಿಮಿಷ ಮತ್ತು 32 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದರು.

ಈ ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕೆೆ ಈಜು, ಓಟ ಹಾಗೂ ಸೈಕ್ಲಿಂಗ್‌ ಮೂರರಲ್ಲಿಯೂ ಪರಿಣಿತಿ ಇರಬೇಕು ಹಾಗೂ ದೈಹಿಕವಾಗಿಯೂ ಸಾಕಷ್ಟು ಸದೃಢರಾಗಿರಬೇಕು. ಆದ್ದರಿಂದ ಇದಕ್ಕೆೆ ತಿಂಗಳ ಕಾಲ ಪರಿಶ್ರಮ ಅಗತ್ಯ. ಆದ್ದರಿಂದ ಬಹುತೇಕರು ಈ ಐರನ್‌ಮ್ಯಾಾನ್ ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕೆೆ ಹಿಂದೇಟು ಹಾಕುತ್ತಾರೆ. ಆದರೆ ತೇಜಸ್ವಿ ಸೂರ್ಯ ಅವರು ನಾಲ್ಕು ತಿಂಗಳ ಕಠಿಣ ಪರಿಶ್ರಮದ ಮೂಲಕ ಈ ಸ್ಪರ್ಧೆಯಲ್ಲಿ ಸ್ಪರ್ಧಿಸಿ ವೃತ್ತಿಪರ ಕ್ರೀಡಾಪಟುಗಳನ್ನು ಮೀರಿ ತೇಜಸ್ವಿ ಸೂರ್ಯ ಗೆಲುವು ಸಾಧಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.

50ಕ್ಕೂ ಹೆಚ್ಚು ದೇಶದ ಕೀಡಾಪಟುಗಳು ಭಾಗಿ

ಈ ಬಗ್ಗೆೆ ಮಾತನಾಡಿರುವ ಸಂಸದ ತೇಜಸ್ವಿ ಸೂರ್ಯ, ಗೋವಾ ಐರನ್‌ಮ್ಯಾಾನ್ ಸ್ಪರ್ಧೆ ಕ್ರೀಡೆಗೆ ಹೆಸರುವಾಸಿಯಾಗಿದ್ದು 50ಕ್ಕೂ ಹೆಚ್ಚು ದೇಶಗಳ ಕ್ರೀಡಾಪಟುಗಳು ಈ ರೇಸ್‌ನಲ್ಲಿ ಭಾಗವಹಿಸಿದ್ದರು. ಇದರಲ್ಲಿ ಭಾಗವಹಿಸುವುದು ಕಠಿಣ ಸವಾಲಾಗಿದ್ದು ಕಳೆದ 4 ತಿಂಗಳಿಂದ ಫಿಟ್‌ನೆಸ್ ಸುಧಾರಿಸಲು ಕಠಿಣವಾಗಿ ತರಬೇತಿ ಪಡೆದಿದ್ದು ಪ್ರಸ್ತುತ ಈ ಸವಾಲನ್ನು ಪೂರ್ಣಗೊಳಿಸಿದ್ದಕ್ಕಾಗಿ ನನಗೆ ಅತ್ಯಂತ ಸಂತೋಷವಾಗಿದೆ ಎಂದು ಹೇಳಿದ್ದಾರೆ.

ನನ್ನ ದೈಹಿಕ ಸಾಮರ್ಥ್ಯ ದೇಶದ ಅಭ್ಯುದಯಕ್ಕೆೆ ಸಹಕಾರಿಯಾಗಲಿದೆ ಎಂಬ ವಿಶ್ವಾಸ ಮೂಡಿದೆ. ದೊಡ್ಡ ಮಹತ್ವಾಕಾಂಕ್ಷೆಗಳನ್ನು ಬೆನ್ನಟ್ಟುತ್ತಿರುವ ಭಾರತವು ಯುವ ರಾಷ್ಟ್ರವಾಗಿ ರೂಪುಗೊಳಿಸುವಲ್ಲಿ ನಮ್ಮ ದೈಹಿಕ ಸಾಮರ್ಥ್ಯ ಪೋಷಿಸುವಲ್ಲಿ ಹೆಚ್ಚಿನ ಉತ್ತೇಜನ ದೊರಕಿದ್ದು ಭಾರತವನ್ನು ಆರೋಗ್ಯಕರ ರಾಷ್ಟ್ರವಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಈ ಮೂಲಕ ನಮ್ಮ ದೈಹಿಕ ಸಾಮರ್ಥ್ಯ ಸ್ಥಿರವಾಗಿಸಿಕೊಳ್ಳುವ ಮೂಲಕ ಯಾವುದೇ ಉದ್ಯಮದಲ್ಲಿ ಯಶಸ್ವಿ ಸಾಧ್ಯತೆಗಳನ್ನು ಸುಧಾರಿಸಬಹುದಾಗಿದೆ ಎಂದರು.

ಇದನ್ನೂ ಓದಿ: HD Kumaraswamy: ಎಚ್‌ಎಂ‌ಟಿ ಭೂಮಿ ವಶಕ್ಕೆ ಪಡೆದ ರಾಜ್ಯ ಸರ್ಕಾರದ ವಿರುದ್ಧ ಕಾನೂನು ಹೋರಾಟ; ಕುಮಾರಸ್ವಾಮಿ ಘೋಷಣೆ

ಫಿಟ್ ಇಂಡಿಯ ಅಭಿಯಾನವು ಕ್ರೀಡಾ ಸ್ಫೂರ್ತಿ ಜಾಗೃತಿಯನ್ನು ಹೆಚ್ಚಿನ ಜನರನ್ನು ಫಿಟ್ನೆೆಸ್ ದಿನಚರಿಗೆ ತರುವಲ್ಲಿ ಸಹಕಾರಿಯಾಗಿದೆ. ಅದು ನಮ್ಮ ರಾಷ್ಟ್ರಕ್ಕೆೆ ಮೂಲಭೂತ ಅಗತ್ಯವಿದೆ ಎಂದು ಅಭಿಪ್ರಾಾಯಪಟ್ಟಿದ್ದಾರೆ. ಗೆಲುವು ಸಾಧಿಸಿರುವ ಬಗ್ಗೆೆ ತೇಜಸ್ವಿ ಸೂರ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಬಿ.ಎಲ್. ಸಂತೋಷ್ ಸೇರಿದಂತೆ ಹಲವು ನಾಯಕರು ಶುಭ ಹಾರೈಸಿದ್ದಾರೆ.

ಸ್ಪರ್ಧೆಯಲ್ಲಿ ಏನೆಲ್ಲ ಇರುತ್ತದೆ?

  • 1,900 ಮೀಟರ್ ಈಜು
  • 90 ಕಿಮೀ ಸೈಕ್ಲಿಂಗ್
  • 21.1 ಕಿಮೀ ಓಟ

ಈ ಮೂರನ್ನು ಪೂರ್ಣಗೊಳಿಸಲು ತೇಜಸ್ವಿ ಸೂರ್ಯ ತಗೆದುಕೊಂಡ ಸಮಯ : 8 : 27 : 32 ಗಂಟೆ

ಐರನ್‌ಮ್ಯಾನ್‌ ಸ್ಪರ್ಧೆಯಲ್ಲಿ ಭಾಗವಹಿಸುವುದು ಕಠಿಣ ಸವಾಲು. ಕಳೆದ ನಾಲ್ಕು ತಿಂಗಳಿಂದ ಫಿಟ್‌ನೆಸ್ ಸುಧಾರಿಸಲು ಕಠಿಣ ತರಬೇತಿ ಪಡೆದಿದ್ದೆ. ಪ್ರಸ್ತುತ ಈ ಸವಾಲು ಪೂರ್ಣಗೊಳಿಸಿದ್ದಕ್ಕಾಗಿ ನನಗೆ ಅತ್ಯಂತ ಸಂತೋಷ. ಪ್ರಧಾನಿ ನರೇಂದ್ರ ಮೋದಿಯವರ ಫಿಟ್ ಇಂಡಿಯಾ ಅಭಿಯಾನ ಸವಾಲನ್ನು ಸ್ವೀಕರಿಸಲು ಪ್ರೇರಣೆ ನೀಡಿದೆ.
-ತೇಜಸ್ವಿ ಸೂರ್ಯ, ಸಂಸದ

ಪ್ರಧಾನಿ ಮೋದಿ ಶ್ಲಾಘನೆ

ಸಂಸದ ತೇಜಸ್ವಿ ಸೂರ್ಯ ಅವರ ಸಾಧನೆಗೆ ಪ್ರಧಾನಿ ಮೋದಿ ಶ್ಲಾಘನೆ ವ್ಯಕ್ತಪಡಿಸಿದರು. ಇದು ಫಿಟ್ನೆಸ್ ಸಂಬಂಧಿತ ಚಟುವಟಿಕೆಗಳನ್ನು ಮುಂದುವರಿಸಲು ಇನ್ನೂ ಅನೇಕ ಯುವಕರಿಗೆ ಸ್ಫೂರ್ತಿ ನೀಡುತ್ತದೆ ಎಂದು ನನಗೆ ಖಾತ್ರಿಯಿದೆ ಎಂದು ಮೋದಿ ಶ್ಲಾಘಿಸಿದ್ದಾರೆ.