Sunday, 27th October 2024

Pralhad Joshi: ಭತ್ತಕ್ಕೆ 2,300 ರೂ. ಬೆಂಬಲ ಬೆಲೆ; ಅನ್ನದಾತರಿಗೆ ಕೇಂದ್ರ ಸರ್ಕಾರದ ದೀಪಾವಳಿ ಗಿಫ್ಟ್

Pralhad Joshi

ಹೊಸದಿಲ್ಲಿ: ಕೇಂದ್ರ ಸರ್ಕಾರ ಅನ್ನದಾತರಿಗೆ ದೀಪಾವಳಿ (Deepavali) ಹಬ್ಬಕ್ಕೆ ಬೆಂಬಲ ಬೆಲೆಯ ಗಿಫ್ಟ್ ನೀಡಿದೆ. ಭತ್ತದ ಬೆಂಬಲ ಬೆಲೆ ಹೆಚ್ಚಿಸುವ ಮೂಲಕ ಭತ್ತ ಬೆಳೆಗಾರರ ಬದುಕಿಗೆ ಬೆಳಕು ಬೀರಿದೆ. ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ (Union Minister of Consumer Affairs, Food and Public Distribution) ಪ್ರಲ್ಹಾದ್‌ ಜೋಶಿ (Pralhad Joshi) ಭಾನುವಾರ (ಅ. 27) ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸರ್ಕಾರ ಭತ್ತದ ಬೆಳೆಗಾರರ ಬೆಂಬಲಕ್ಕೆ ನಿಂತಿರುವ ಬಗ್ಗೆ ಮಾಹಿತಿ ನೀಡಿದರು.

2,300 ರೂ.ಗೆ ಬೆಂಬಲ ಬೆಲೆ ಹೆಚ್ಚಳ: ʼʼಪ್ರತಿ ಕ್ವಿಂಟಾಲ್‌ ಭತ್ತಕ್ಕೆ ಇರುವ 1,310 ಇದ್ದು ಬೆಂಬಲ ಬೆಲೆಯನ್ನು 2,300 ರೂ.ಗೆ ಹೆಚ್ಚಿಸಲಾಗಿದೆʼʼ ಎಂದು ಸಚಿವರು ವಿವರಿಸಿದರು.

185 ಲಕ್ಷ ಟನ್ ಭತ್ತ, 124 ಲಕ್ಷ ಟನ್ ಅಕ್ಕಿ ಸಂಗ್ರಹಕ್ಕೆ ಯೋಜನೆ: ಇನ್ನು ಕೇಂದ್ರ ಆಹಾರ ಇಲಾಖೆ ಮತ್ತು ಭಾರತೀಯ ಆಹಾರ ನಿಗಮವು ಪ್ರಸಕ್ತ ಮುಂಗಾರು ಹಂಗಾಮಿನ 185 ಲಕ್ಷ ಟನ್ ಭತ್ತ ಮತ್ತು 124 ಲಕ್ಷ ಟನ್ ಅಕ್ಕಿ ಸಂಗ್ರಹಕ್ಕೆ ಯೋಜನೆ ಸಹ ಹಾಕಿಕೊಂಡಿದೆ ಎಂದೂ ಪ್ರಲ್ಹಾದ್‌ ಜೋಶಿ ತಿಳಿಸಿದರು.

14 ಲಕ್ಷ ಮೆಟ್ರಿಕ್ ಟನ್ ಸಂಗ್ರಹಕ್ಕೆ ಸ್ಥಳವಿದೆ: ʼʼಭತ್ತ ಬೆಳೆಗಾರರ ಆತಂಕ ಪಡುವ ಅಗತ್ಯವಿಲ್ಲ. ಪ್ರಸ್ತುತ ಮುಂಗಾರು ಹಂಗಾಮು ಭತ್ತ ಸಂಗ್ರಹಕ್ಕೆ ಸಾಕಷ್ಟು ಸ್ಥಳವಿದೆ. ಪ್ರಸ್ತುತ 14 ಎಲ್‌ಎಂಟಿ ಭತ್ತ ಸಂಗ್ರಹಕ್ಕೆ ಸ್ಥಳಾವಕಾಶವಿದೆ. ಪಂಜಾಬಿನಲ್ಲಿ ಸಂಗ್ರಹಿಸಿರುವ ಅಕ್ಕಿಯನ್ನು ತ್ವರಿತವಾಗಿ ಸ್ಥಳಾಂತರಿಸಲಾಗುತ್ತಿದೆʼʼ ಎಂದು ಹೇಳಿದರು.

2,700 ಮಂಡಿಗಳಲ್ಲಿ ಸಂಗ್ರಹ: ʼʼಅ. 1ರಂದು 2,700 ಮಂಡಿಗಳಲ್ಲಿ ಭತ್ತ ಸಂಗ್ರಹಣೆ ಪ್ರಾರಂಭಿಸಿದ್ದು, ಇಂದಿಗೆ ಒಟ್ಟು 50 ಎಲ್‌ಎಂಟಿ ಭತ್ತವನ್ನು ಸಂಗ್ರಹಿಸಲಾಗಿದೆ. ನಾಮನಿರ್ದೇಶನದ ಆಧಾರದ ಮೇಲೆ CWC/SWC ಗೋದಾಮುಗಳನ್ನು ಬಾಡಿಗೆಗೆ ತೆಗೆದುಕೊಂಡು ಶೇಖರಣೆಗೆ ವ್ಯವಸ್ಥೆ ಮಾಡಲಾಗಿದೆ. ಗೋಧಿ ದಾಸ್ತಾನು ತ್ವರಿತ ಸ್ಥಳಾಂತರ ಜೊತೆಗೆ PEG ಯೋಜನೆಯಡಿ 31 ಎಲ್‌ಎಂಟಿ ಶೇಖರಣೆಗೆ ವ್ಯವಸ್ಥೆ ಮಾಡಲಾಗುತ್ತಿದೆʼʼ ಎಂದರು.

ಆನ್ ಲೈನ್ ಪೋರ್ಟಲ್: ಅಕ್ಕಿ ಗಿರಣಿದಾರರಿಗೆ ದೂರು ಪರಿಹಾರಕ್ಕಾಗಿ ಆನ್‌ಲೈನ್ ಪೋರ್ಟಲ್ ಅನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದೂ ಸಚಿವ ಪ್ರಲ್ಹಾದ ಜೋಶಿ ಮಾಹಿತಿ ನೀಡಿದರು.

ಪ್ರಮುಖಾಂಶಗಳು

  • ಅ. 24ಕ್ಕೆ 34.75 LMT ನ ಅಖಿಲ ಭಾರತ ಚಾಲನಾ ಯೋಜನೆಯಿಂದ ಪಂಜಾಬ್‌ಗೆ ಸುಮಾರು ಶೇ. 40 (13.76 LMT) ಪಾಲನ್ನು ಹಂಚಲಾಗಿದೆ.
  • ಚಾಲನಾ ಯೋಜನೆ ಮತ್ತು ಶೇಖರಣಾ ಸಾಮರ್ಥ್ಯ ರಚನೆ/ನೇಮಕವನ್ನು ವಾರಕ್ಕೊಮ್ಮೆ ಮೇಲ್ವಿಚಾರಣೆ ಮಾಡಲು ಉನ್ನತ ಮಟ್ಟದ ಸಮಿತಿಯನ್ನು ಸ್ಥಾಪಿಸಲಾಗಿದೆ.
  • ಭತ್ತದ ಪ್ರಸ್ತುತ ಔಟ್ ಟರ್ನ್ ಅನುಪಾತ (OTR) ಮತ್ತು ಡ್ರೈಯೇಜ್ ಘಟನೆಗಳನ್ನು ಪರಿಶೀಲಿಸುವ ಅಧ್ಯಯನವನ್ನು ನಡೆಸಲು ಐಐಟಿ ಖರಗ್‌ಪುರವನ್ನು ನಿಯೋಜಿಸಲಾಗಿದೆ.
  • 15 ದಿನಗಳ ಕಾಯುವ ಅವಧಿಯನ್ನು ಮೀರಿ ಗೊತ್ತುಪಡಿಸಿದ ಡಿಪೋಗಳಲ್ಲಿ ಖಾಲಿ ಜಾಗದ ಲಭ್ಯತೆಯಿಲ್ಲದ ಸಂದರ್ಭದಲ್ಲಿ ಹೆಚ್ಚುವರಿ ಸಾರಿಗೆ ಶುಲ್ಕಗಳನ್ನು ಅನುಮತಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Pralhad Joshi: ಹಿಂದೂ ಹಬ್ಬಗಳಿಗೆ ಮಾತ್ರ ನಿರ್ಬಂಧ ಹೇರುವ ಧೈರ್ಯ ಕಾಂಗ್ರೆಸ್‌ ಸರ್ಕಾರಕ್ಕಿದೆ; ಪ್ರಲ್ಹಾದ್‌ ಜೋಶಿ ವಾಗ್ದಾಳಿ