ಕಳಕಳಿ
ಶಂಕರನಾರಾಯಣ ಭಟ್
ಭ್ರಷ್ಟಾಚಾರಿಗಳನ್ನು, ಕುಟುಂಬ ರಾಜಕಾರಣವನ್ನು ದೂರ ಮಾಡುವ ಅಸ ಕೇವಲ ಮತದಾರರ ಕೈಯಲ್ಲಿದೆ ಎಂಬುದು ನಿಜಕ್ಕೂ ಒಪ್ಪುವಂಥ ಮಾತೇ. ಆದರೆ ಇಂದು ಮತದಾರನೇ ಭ್ರಷ್ಟನಾಗುತ್ತಿದ್ದಾನೆ. ಕೇವಲ ಕವಡೆ ಕಾಸಿಗಾಗಿ ತನ್ನ ಅಮೂಲ್ಯ ಮತವನ್ನೇ ಮಾರಾಟಕ್ಕೆ ಇಡುತ್ತಿದ್ದಾನೆ.
ಇಂಥ ಮತದಾರರಿಗೆ, ತಮ್ಮ ಅಭ್ಯರ್ಥಿ ಯಾರು, ಅವರಿಂದ ಸಮಾಜಕ್ಕೆ ನಿಜಕ್ಕೂ ಒಳಿತಾದೀತೇ, ಆತ ಸ್ವಂತ ಸಾಮರ್ಥ್ಯ ಹಾಗೂ ಅರ್ಹತೆಯ ಮೇಲೆ ನಿಂತವನೋ ಅಥವಾ ಯಾರೋ ಪ್ರಭಾವಿ ರಾಜಕಾರಣಿಯ ಮಗ ಎಂಬ
ಕಾರಣಕ್ಕೋ? ಎಂಬುದನ್ನೂ ಯೋಚಿಸದೆ, ಕೇವಲ ಹಣದ ಹಿಂದೆ ಬಿದ್ದು, ‘ಯಾರು ಹೆಚ್ಚು ಹಣ ಕೊಡುತ್ತಾರೋ ಅವರಿಗೇ ನನ್ನ ಮತ’ ಎಂಬಲ್ಲಿಗೆ ಬಂದು ನಿಂತಿದ್ದಾನೆ ಮತದಾರ.
ಇದು ಅಶಿಕ್ಷಿತರ ವಲಯದಲ್ಲಷ್ಟೇ ಕಾಣಬರುವ ಸಮಸ್ಯೆಯಲ್ಲ; ‘ಸುಶಿಕ್ಷಿತರು’ ಎಂಬ ಹಣೆಪಟ್ಟಿ ಹೊತ್ತಿರುವವರೂ ಮಾಡುತ್ತಿರುವ ಘನಂದಾರಿ ಕೆಲಸ! ಇಲ್ಲಿ ಮತ್ತೆ ಚೌಕಾಶಿ ಬೇರೆ- ‘ಆ ಅಭ್ಯರ್ಥಿ ಅಷ್ಟು ಕೊಡಲು ತಯಾರಾಗಿದ್ದಾನೆ, ನೀವು ಅದಕ್ಕಿಂತ ತುಸು ಜಾಸ್ತಿ ಕೊಟ್ಟರೇನೇ ನಿಮಗೆ ಮತ’ ಅಂತ. ಇದೊಂದು ರೀತಿಯಲ್ಲಿ ‘ಚುನಾವಣಾ ಮಾರು ಕಟ್ಟೆ’ ಅಂದರೂ ತಪ್ಪಲ್ಲ. ಇದನ್ನು ಚೆನ್ನಾಗಿ ಅರಿತಿರುವ ಅಭ್ಯರ್ಥಿಗಳು ತಮ್ಮ ತಾಕತ್ತನ್ನು ತೋರಿಸುವ ಬಗೆ ಎಂದರೆ, ಮತದಾರನನ್ನು ಕೊಂಡುಕೊಳ್ಳುವುದು. ಇದರರ್ಥ, ಮತದಾರ ಒಂದು ವ್ಯಾಪಾರದ ವಸ್ತುವಾಗಿ ಬಿಟ್ಟಿದ್ದಾನೆ.
ಕುಟುಂಬ ರಾಜಕಾರಣವೋ, ಹಣಬಲ-ತೋಳ್ಬಲದ ರಾಜಕಾರಣವೋ ಅದನ್ನು ಹಿಡಿತಕ್ಕೆ ತರುವ ತಾಕತ್ತು ಕೇವಲ ಮತದಾರನಿಗೇ ಇರುವಂಥದ್ದು. ಇದೊಂದು ಅತ್ಯಂತ ಪ್ರಬಲ ಅಸ್ತ್ರ. ಅಷ್ಟೇ ಅಲ್ಲ, ಇದು ಮತದಾರರ ಕೈಯಲ್ಲೇ ಇರುವುದರಿಂದ, ಅದರ ಸಮರ್ಥ ಪ್ರಯೋಗವೂ ಅವರಿಂದಲೇ ಸಾಧ್ಯವಿರುತ್ತದೆ. ಆದರೇನು? ಸ್ವಾತಂತ್ರ್ಯ ಸಿಕ್ಕಿ ೭೫ ವರ್ಷಗಳಾದರೂ, ಆ ನಂತರ ಅದೆಷ್ಟೋ ಚುನಾವಣೆಗಳು ನಡೆದು ನಮ್ಮ ಮತದಾನ ಮಾಡಿ ಕೈಸುಟ್ಟುಕೊಂಡರೂ
ಮತದಾರರಾದ ನಾವು ಇನ್ನೂ ಜಾಗೃತರಾಗಿಲ್ಲ ಅಂದರೆ, ಇದನ್ನು ರಾಜಕಾರಣಿಗಳ ತಾಕತ್ತು ಅನ್ನಬೇಕೋ ಅಥವಾ ಮತದಾರರ ನಿರ್ಲಿಪ್ತತೆ ಅನ್ನಬೇಕೋ ತಿಳಿಯುತ್ತಿಲ್ಲ.
‘ಯಾರು ಆರಿಸಿ ಬಂದರೂ ನಾವು ದುಡಿದು ತಿನ್ನುವುದೇನು ತಪ್ಪೀತೇ? ಯಾರು ಅಧಿಕಾರಕ್ಕೆ ಬಂದರೂ ಉದ್ಧಾರ ಆಗುವುದು ಅಷ್ಟರಲ್ಲೇ ಇದೆ’ ಎಂಬ ಮತದಾರರ ಒಂದು ರೀತಿಯ ವಿಚಿತ್ರ ಮನೋಧರ್ಮವೇ ರಾಜಕೀಯ ಭ್ರಷ್ಟಾ
ಚಾರ, ಕುಟುಂಬ ರಾಜಕಾರಣಗಳು ಅಡೆತಡೆ ಇಲ್ಲದೆ ಸಾಗುವುದಕ್ಕೆ ಕಾರಣವಾಗಿದೆ. ಇಂದಿನ ಈ ಸ್ಥಿತಿಗೆ ರಾಜಕಾರಣಿ ಗಳ ಕಡೆಗೆ ಬೆರಳು ಮಾಡಿ ತೋರಿಸುವ ಬದಲು, ನಮ್ಮಂಥ ಮತದಾರರೇ ಹೊಣೆಯನ್ನು ಹೊರಬೇಕು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿ ಪ್ರಜೆಯೂ ಪ್ರಭುವೇ. ಆದರೆ ಆತ ಹಾಗೆ ವರ್ತಿಸದೆ ಗುಲಾಮನಂತೆ ನಡೆದು ಕೊಳ್ಳುತ್ತಿದ್ದಾನೆ. ಹೀಗಾಗಿ ಆತ ಗುಲಾಮಗಿರಿಯ ರಾಜಕೀಯ ವ್ಯವಸ್ಥೆಯನ್ನೇ ಅನುಭವಿಸಬೇಕಾಗಿ ಬಂದಿದೆ. ಪಕ್ಷ, ಕುಟುಂಬ, ಹಣ ಅಥವಾ ಇನ್ನಾವುದೇ ಅಂಶ ಲೆಕ್ಕಕ್ಕೇ ಬಾರದೆ, ಅಭ್ಯರ್ಥಿಯ ಸಾಮರ್ಥ್ಯ ಹಾಗೂ ಉತ್ತಮ ಗುಣವನ್ನು ಮಾತ್ರವೇ ಪರಿಗಣಿಸುವಂತಾಗಬೇಕು. ಆಗ ಮಾತ್ರ ರಾಜಕೀಯದಲ್ಲಿನ ಹೊಲಸು ನಿರ್ಮೂಲವಾಗಿ ಸ್ವಚ್ಛ ಪರಿಸರ ದೊರಕೀತು. ಅದಕ್ಕೆ ವಿಶೇಷವಾದುದನ್ನೇನೂ ಮಾಡಬೇಕಿಲ್ಲ, ‘ನಮ್ಮ ಮತ ಮಾರಾಟಕ್ಕಿಲ್ಲ’ ಎಂಬುದನ್ನು ಅಭ್ಯರ್ಥಿಗಳಿಗೆ ಮನವ ರಿಕೆ ಮಾಡಿಕೊಟ್ಟರೆ ಸಾಕು. ಇದು ಅಷ್ಟೊಂದು ಕಷ್ಟದ ಕೆಲಸವೇ? ಅಲ್ಲವೇ ಅಲ್ಲ! ಈ ಅಸ ನಮ್ಮಲ್ಲೇ ಇದೆ. ಅದನ್ನು ಸರಿಯಾಗಿ ಪ್ರಯೋಗಿಸಿ ನಮಗೆ ಬೇಕಾದ ಪ್ರತಿನಿಽಯನ್ನು ಆಯ್ಕೆಮಾಡಿ
ಕೊಳ್ಳೋಣ.
(ಲೇಖಕರು ಹವ್ಯಾಸಿ ಬರಹಗಾರರು)
ಇದನ್ನೂ ಓದಿ: Janamejaya Umarji Column: ಸಾಂಸ್ಕೃತಿಕ ಮಾರ್ಕ್ಸ್‌ವಾದದ ರಾಜಕಾರಣ