ಉಪಚುನಾವಣೆ ವೇಳೆ ಮೇಲೆ ವಕ್ಫ್ ಕರಿನೆರಳು
ವಿಕೋಪಕ್ಕೆ ಹೋಗುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ ಸರಕಾರ
ಬೆಂಗಳೂರು: ಚುನಾವಣಾ ವೇಳೆ ಎದ್ದು ನಿಲ್ಲುವ ಜಾತಿಭೂತ, ಭೂ ವಿವಾದ, ಕೋಮು ಪ್ರಚೋದನೆ ವಿಚಾರಗಳು ಉಪಚುನಾವಣೆ ಮೇಲೂ ಕರಿ ನೆರಳು ಬೀಳುವ ಸಾಧ್ಯತೆ ಇದೆ. ಸಚಿವರೊಬ್ಬರ ನಡೆಯಿಂದಾಗಿ ವಕ್ಫ್ ವಿವಾದ ತಾರಕಕ್ಕೇರುವ ಸಂಭವವಿದ್ದು ಸರಕಾರ ಎಚ್ಚರಿಕೆಯಿಂದ ನಡೆದುಕೊಳ್ಳಬೇಕಿದೆ.
ವಿಜಯಪುರದಲ್ಲಿನ ರೈತರ ಜಾಗಕ್ಕೆ ಸಂಬಂಧಪಟ್ಟಂತೆ ರಾತ್ರೋರಾತ್ರಿ ವಕ್ ಬೋರ್ಡ್‌ಗೆ ಖಾತೆ ಮಾಡಿ ಕೊಡುವ ವಿಚಾರ ಸಚಿವ ಜಮೀರ್ ಅಹಮದ್ ಅವರ ಪ್ರವೇಶದಿಂದಾಗಿ ಮುನ್ನೆಲೆಗೆ ಬಂದಿದೆ. ಈ ವಿಚಾರವಾಗಿ ಮಾಜಿ ಸಚಿವ ಬಸನಗೌಡ ಯತ್ನಾಳ್ ಹಾಗೂ ಸಚಿವ ಜಮೀರ್ ಮದ್ಯೆ ಮಾತಿನ ಚಕಮಕಿ ನಡೆದಿತ್ತು. ಇದೇ ವೇಳೆ ವಕ್ ಆಸ್ತಿ ಯಾರಪ್ಪನದ್ದಲ್ಲ ಎಂದಿದ್ದ ಜಮೀರ್, ಅಪಪ್ರಚಾರ ಮಾಡಬೇಡಿ ಎಂದು ಯತ್ನಾಳ್‌ಗೆ ಸವಾಲು ಹಾಕಿದ್ದರು.
ಇದಕ್ಕೆ ತಿರುಗೇಟು ನೀಡಿದ್ದ ಯತ್ನಾಳ್ ವಿಜಯಪುರದಲ್ಲಿ ಬೇರೆ ಯವರಿಗೆ ಸೇರಿದ ಆಸ್ತಿಗೆ ಖಾತೆ ಮಾಡಿಸಿಕೊಳ್ಳಲು
ಜಮೀರ್ ಅಹಮದ್ ಬರುತ್ತಿದ್ದಾರೆ ಎಂದು ಹೇಳಿಕೆ ಸ್ಥಳೀಯವಾಗಿ ಕಾವೇರಿತ್ತು. ಇದಕ್ಕೆ ಉತ್ತರಿಸಿದ್ದ ಸಚಿವ ಜಮೀರ್, ವಕ್ಫ್ ಆಸ್ತಿ ಸರಕಾರದಿಂದ ಪಡೆದಿಲ್ಲ. ಬದಲಿಗೆ ಸರ್ಕಾರಿ ಸಂಸ್ಥೆಗಳೇ ವಕ್ಫ್ ಆಸ್ತಿ ಒತ್ತುವರಿ ಮಾಡಿವೆ. ಖಬರಸ್ಥಾನಕ್ಕೆ ಹೊರತು ಪಡಿಸಿ ವಕ್ ಬೋರ್ಡ್‌ಗೆ ಸರಕಾರ ಜಮೀನು ಕೊಟ್ಟಿಲ್ಲ. ವಕ್ಫ್ ಆಸ್ತಿ ನಿಮ್ಮಪ್ಪನದೂ ಅಲ್ಲ, ನಮ್ಮಪ್ಪನದು ಅಲ್ಲ. ಸಮುದಾ ಯದ ಒಳಿತಿಗಾಗಿ ದಾನಿಗಳು ಕೊಟ್ಟ ದೇವರ ಆಸ್ತಿ ಎಂದಿದ್ದರು.
ತಿರುಗಿಬಿದ್ದ ಬಿಜೆಪಿ
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಬಿಜೆಪಿ, ವಕ್ಫ್ ಕಾಯಿದೆ ಹೆಸರಿನಲ್ಲಿ ರೈತರ ಜಮೀನು ಹೊಡೆದುಕೊಳ್ಳುವ ಹುನ್ನಾರ ನಡೆಯುತ್ತಿದೆ. ಸಚಿವರು ಹೇಳಿದ್ದರಿಂದ ವಿಜಯಪುರದಲ್ಲಿ ರೈತರಿಗೆ ನೋಟಿಸ್ ನೀಡಿದ್ದಾರೆ.
ರೈತರು ಹಲ ದಶಕಗಳಿಂದ ಕೃಷಿ ಮಾಡುತ್ತಿದ್ದ ಜಮೀನು ಕೂಡ ವಕ್ಫ್ ಆಸ್ತಿ ಎಂದು ಅಧಿಕಾರಿಗಳ ಮೂಲಕ ನೋಟಿಸ್ ನೀಡುತ್ತಿದ್ದಾರೆ. ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುವ ಸಿದ್ದರಾಮಯ್ಯರ ಕಾಂಗ್ರೆಸ್ ಸರಕಾರದ ಬೆಂಬಲ ವಕ್ಫ್ ಬೋರ್ಡ್‌ಗೆ ಇರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜ ಯೇಂದ್ರ ಟೀಕಿಸಿದ್ದರು. ಇದೇ ವೇಳೆ ವಿಜಯನಗರದ ರೈತರು, ಸಂಸದ ಹಾಗೂ ವಕ್ಫ್ ಕಾಯಿದೆ -೨೦೨೪ರ ಜಂಟಿ ಸದನ ಸಮಿತಿಯ ಸದಸ್ಯರಾದ ತೇಜಸ್ವಿ ಸೂರ್ಯ ರನ್ನು ಭೇಟಿ ಮಾಡಿ ವಕ್ಫ್ ಅಕ್ರಮಗಳ ವಿರುದ್ಧ ನ್ಯಾಯ
ಒದಗಿಸುವಂತೆ ಕೋರಿ ಮನವಿ ಪತ್ರ ಸಲ್ಲಿಸಿದ್ದರು. ಇದಕ್ಕೆ ರೈತರಿಗೆ ನ್ಯಾಯ ಕೊಡಿಸುವ ಭರವಸೆ ಸಂಸದರು ನೀಡಿದ್ದರು.
ಸಚಿವ ಎಂ.ಬಿ.ಪಾಟೀಲ್ ಸ್ಪಷ್ಟನೆ
ವಾಕ್ಸಮರ ಹೆಚ್ಚುತ್ತಿದ್ದಂತೇ ಮಧ್ಯಪ್ರವೇಶಿಸಿದ್ದ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್, ವಕ್ಫ್ ಆಸ್ತಿ ಬರೀ ೧೧ ಎಕರೆ. ಮಿಕ್ಕಿದ್ದು ಹೊನವಾಡ ಗ್ರಾಮದ ರೈತರದು ಎಂದರಲ್ಲದೆ ೧೯೭೪ರ ಗೆಜೆಟ್ ನಲ್ಲಿನ ತಪ್ಪನ್ನು ೧೯೭೭ರಲ್ಲಿ ಸರಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದರು. ಗೆಜೆಟ್‌ನಲ್ಲಿ ತಪ್ಪಾಗಿ ನಮೂದಿಸಿದ್ದರಿಂದ ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದ ೧,೨೦೦ ಎಕರೆ ವಕ್ಫ್ ಆಸ್ತಿ ಎನ್ನುವ ಗೊಂದಲ ಸೃಷ್ಟಿಯಾಗಿದೆ. ಇಲ್ಲಿ ೧೧ ಎಕರೆ ಮಾತ್ರ ವಕ್ಫ್ ಗೆ ಸೇರಿದ್ದು, ಇದರಲ್ಲಿ ೧೦ ಎಕರೆ ೧೪ ಗುಂಟೆಯಲ್ಲಿ ಖಬರಸ್ತಾನವಿದೆ.
ಉಳಿದ ೨೪ ಗುಂಟೆಯಲ್ಲಿ ಈದ್ಗಾ, ಮಸೀದಿ ಇತ್ಯಾದಿ ಕಟ್ಟಡಗಳಿವೆ. ಉಳಿದ ಜಮೀನೆಲ್ಲ ರೈತರಿಗೆ ಸೇರಿದೆ. ಇದನ್ನು
ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿ ಕೂಡ ಸ್ಪಷ್ಟಪಡಿಸಿದ್ದಾರೆ ಎಂದಿದ್ದರು.
ಭಾಂಡಗೆ ಹಿಗ್ಗಾಮುಗ್ಗ ಟೀಕೆ
ಈ ವಿಚಾರಕ್ಕೆ ಭಾನುವಾರ ಮತ್ತೊಂದು ತಿರುವು ಸಿಕ್ಕಿದೆ. ಹಿಂದೂಗಳ ಇರುವ ಕೆಲವು ನಾಲಾಯಕರು ವಕ್ಫ್ ಬೋರ್ಡ್‌ಗೆ ಬೆಂಬಲ ನೀಡುತ್ತಿದ್ದಾರೆ. ಸಚಿವ ಜಮೀರ್ ಅಹಮದ್ ನಾಲಿಗೆ ಬಿಗಿ ಹಿಡೀಬೇಕು. ಮೊನ್ನೆ ಕಾರಿಗೆ ಕಲ್ಲು ಒಗೆದಿzರೆ, ಆವತ್ತು ಉಳಿದಿದ್ದಾನೆ ಎಂದು ಏಕವಚನದಲ್ಲಿ ಬಿಜೆಪಿ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ವಕ್ಫ್ ಬೋರ್ಡ್ ಯಾರದ್ದು ? ಅದು ಯಾವಾಗಿನಿಂದ ಚಾಲು ಆಗಿದ್ದು ? ಮನಮೋಹನ್ ಸಿಂಗ್ ಹೋಗು ವಾಗ ಸಹಿ ಮಾಡಿ ಹೋಗಿ ವಿಶೇಷ ಸೌಲಭ್ಯ ಕೊಟ್ಟಿದ್ದಾರೆ. ಈಗ ಎಲ್ಲಿ ಹೋದಲ್ಲಿ ನಮ್ಮದೇ ಇದು ಜಾಗ ಅಂತಾರೆ. ನೋಟಿಸ್ ಕೊಟ್ಟು ಇದು ವಕ್ಫ್ ಗೆ ಸಂಬಂಧಪಟ್ಟಿದ್ದು, ೨೦ ದಿನದಲ್ಲಿ ಖಾಲಿ ಮಾಡಬೇಕು ಅಂತಾರೆ. ಇವರೇನು ನ್ಯಾಯಾಲಯವೇ ? ಎಂದು ಪ್ರಶ್ನಿಸಿದ್ದು, ಪೂರ್ಣ ವಕ್ಫ್ ಬೋರ್ಡ್ ರದ್ದಾಗಬೇಕು.
ದೇಶದಲ್ಲಿ ಅಜಾಗರಕತೆ ಉಂಟಾಗುತ್ತದೆ. ಕೇವಲ ವಿಜಯಪುರ ಮಾತ್ರ ಅಲ್ಲ, ಇದು ದೇಶದ ತುಂಬ ನಡೆದಿದೆ ಅಂತ ಬಾಗಲಕೋಟೆಯಲ್ಲಿ ಆರೋಪಿಸಿದ್ದಾರೆ. ಈ ವಿಚಾರ ವಿಕೋಪಕ್ಕೆ ಹೋಗುವ ಮುನ್ನ ರಾಜ್ಯ ಸರಕಾರ ಎಚ್ಚೆತ್ತು ಕೊಂಡು ಪರಿಸ್ಥಿತಿ ನಿಭಾಯಿಸಬೇಕಿದೆ. ಇಲ್ಲದಿದ್ದರೆ ವಿವಾದ ರಾಜ್ಯದಿಂದ ದೇಶಕ್ಕೂ ಹರಡಲೂಬಹುದು.
ಯಾಕಿ ವಿವಾದ ?
ಅಲಸಂಖ್ಯಾತರಿಗೆ ಸೇರಿದ್ದ ಎನ್ನಲಾದ ಇಲ್ಲವೇ ಸಮುದಾಯದ ಒಳಿತಿಗೆ ದಾನಿಗಳು ನೀಡಿದ ಜಾಗ ಕಾಲಾನಂತರ ದಲ್ಲಿ ವಕ್ಫ್ ಆಸ್ತಿಯೆಂದು ಪರಿಗಣಿಸಲ್ಪಟ್ಟಿದೆ. ಇದಕ್ಕೆ ಮನಮೋಹನ್ ಸಿಂಗ್ ಸರಕಾರ ಬೋರ್ಡ್‌ನ ಮಾನ್ಯತೆ ನೀಡಿ ಹಲವು ಪ್ರದೇಶಗಳನ್ನು ಗುರುತಿಸಿತ್ತು. ಹೀಗಿದ್ದರೂ ವಕ್ಫ್ ಸೇರಿದ ಹಲವು ಆಸ್ತಿಗಳನ್ನು ಅದೇ ಸಮುದಾಯದ ಹಲವರು ದುರುಪಯೋಗ ಪಡಿಸಿಕೊಂಡಿದ್ದಲ್ಲದೆ, ಅಕ್ರಮ ನಡೆಸಿರುವ ಆರೋಪವಿದೆ.
ಈ ಸಂಬಂಧ ಹಲವಾರು ವ್ಯಾಜ್ಯಗಳು ನ್ಯಾಯಾಲಯದಲ್ಲಿದೆ. ಇದೇ ವೇಳೆ ಐತಿಹಾಸಿಕ ಪ್ರಮಾದ ಸರಿಪಡಿಸುವ
ನಿಟ್ಟಿನಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ವಕ್ಫ್ ಕಾಯಿದೆಗೆ ಶೀಘ್ರವೇ ತಿದ್ದುಪಡಿ ಮಸೂದೆ ಜಾರಿಗೆ ತರಲು ಹೊರಟಿದೆ. ಮುಂದಿನ ಚಳಿಗಾಲದ ಅಧಿವೇಶನದಲ್ಲಿ ವಕ್ಫ್ ೨೦೦೪ ರ ನೂತನ ನೀತಿ ಜಾರಿಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: Waqf Board : ವಕ್ಫ್ ಬೋರ್ಡ್ ಹೆಸರಲ್ಲಿ ರೈತರ ಜಮೀನು ಕಬಳಿಕೆ; ಶಾಸಕ ಶರಣಗೌಡ ಕಂದಕೂರ ಆಕ್ಷೇಪ