Saturday, 23rd November 2024

Respect Goumatha : ಈ ರಾಜ್ಯದಲ್ಲಿನ್ನು ‘ಬಿಡಾಡಿ ದನಗಳು’ ಎಂದು ಕರೆಯುವುದು ಗೋಮಾತೆಗೆ ಮಾಡುವ ಅವಮಾನ

Respect Goumatha

ನವದೆಹಲಿ: ರಾಜಸ್ಥಾನದಲ್ಲಿ ಬೀದಿಯಲ್ಲಿ ಓಡಾಡುವ ಹಸುಗಳು (Respect Goumatha) ಮತ್ತು ಇತರ ಗೋವುಗಳನ್ನು ‘ಬಿಡಾಡಿಗಳು’ ಎಂಬ ಪದವನ್ನು ಬಳಸುವಂತಿಲ್ಲ. ಈ ಪದ ‘ಅವಮಾನಕರ’ ಮತ್ತು ‘ಸೂಕ್ತವಲ್ಲ’ ಎಂದು ರಾಜ್ಯ ಸರ್ಕಾರ ತನ್ನ ದೇಶದಲ್ಲಿ ತಿಳಿಸಿದೆ. ಸ್ವಯಂ ತಿರುಗಾಡುವ ಹಸುಗಳು ಮತ್ತು ಇತರ ಗೋವುಗಳಿಗೆ ‘ಅಸಹಾಯಕ’ ಅಥವಾ ‘ನಿರಾಶ್ರಿತ’ ಎಂಬ ಪದಗಳ ಬಳಕೆ ಮಾಡಬೇಕು ಎಂದು ಸರ್ಕಾರ ಹೇಳಿದೆ.

ಇದಕ್ಕೂ ಮುನ್ನ ಜುಲೈನಲ್ಲಿ, ರಾಜಸ್ಥಾನದ ರಾಜ್ಯ ಸಚಿವ ಜೋರಾರಾಮ್ ಕುಮಾವತ್ ಅವರು ರಾಜಸ್ಥಾನದಲ್ಲಿ ಹಸುಗಳನ್ನು ‘ಬಿಡಾಡಿ ‘ ಎಂದು ಕರೆಯಬಾರದು. ಪ್ರಾಣಿಗಳನ್ನು ಕೂಡ ‘ನಿರಾಶ್ರಿತ’ ಎಂಬ ಪದವನ್ನು ಬಳಸಬೇಕು ಎಂದು ಹೇಳಿದ್ದಾರೆ. ಅದನ್ನೀಗ ರಾಜ್ಯ ಸರ್ಕಾರ ಆದೇಶ ರೂಪದಲ್ಲಿ ಹೊರಡಿಸಿದೆ.

ಹಸುಗಳು ಮತ್ತು ಎತ್ತುಗಳ ರಕ್ಷಣೆ ಮತ್ತು ಪ್ರಚಾರಕ್ಕಾಗಿ ಬಿಜೆಪಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಕುಮಾವತ್ ಹೇಳಿದರು. ಅಲ್ಲದೆ ಗೋವುಗಳ ಕಲ್ಯಾಣಕ್ಕಾಗಿ ಮುಖ್ಯಮಂತ್ರಿ ಪಶುಸಂಗೋಪನಾ ಅಭಿವೃದ್ಧಿ ನಿಧಿಯಡಿ 250 ಕೋಟಿ ರೂ.ಗಳ ಅನುದಾನ ನೀಡಲಾಗುವುದು ಎಂದು ಅವರು ಹೇಳಿದರು.

ಇದನ್ನೂ ಓದಿ: Sabarimala Temple : ಅಯ್ಯಪ್ಪ ಭಕ್ತರೇ ಗಮನಿಸಿ; ವಿಮಾನ ಪ್ರಯಾಣದಲ್ಲಿ ಕ್ಯಾಬಿನ್‌ನಲ್ಲಿಯೇ ‘ಇರುಮುಡಿ’ ಇಟ್ಟುಕೊಳ್ಳಲು ಅವಕಾಶ

ರಾಜಸ್ಥಾನದ ಗೋವುಗಳ ಕಲ್ಯಾಣಕ್ಕಾಗಿ ಗಣನೀಯವಾದ ಏನನ್ನೂ ಮಾಡುವ ಬದಲು ಬಿಜೆಪಿ ಕೇವಲ ಗೋವುಗಳ ಸ್ಥಿತಿಯ ಬಗ್ಗೆ ತುಟಿ ಬಿಚ್ಚಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಈ ಹಿಂದೆ ಆರೋಪಿಸಿದೆ.