Saturday, 23rd November 2024

Richest Beggar: ಮುಂಬೈ ಬೀದಿಯ ಭಿಕ್ಷುಕ ಭರತ್‌ ಜೈನ್‌ ಕೋಟ್ಯಧಿಪತಿ!

Richest Beggar

ಮುಂಬೈ: ಭಿಕ್ಷುಕರು ಎಂದಾಕ್ಷಣ ಎಲ್ಲರ ಮನಸ್ಸಿನಲ್ಲಿಯೂ ಒಂದು ಅಸಡ್ಡೆ ಇರುತ್ತದೆ. ದುಡಿದು ತಿನ್ನುವ ಬದಲು ಭಿಕ್ಷೆ ಎತ್ತುತ್ತಾರೆ ಎಂದು ಬೇಕಾಬಿಟ್ಟಿ ಉಪದೇಶ ಕೊಡುವವರೇ ಹೆಚ್ಚು. ಆದರೆ ಇಂದಿನ ದಿನಗಳಲ್ಲಿ ಕೆಲವರು ಭಿಕ್ಷಾಟನೆಯನ್ನು ಲಾಭದಾಯಕ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಭಿಕ್ಷೆ ಬೇಡಿಯೇ ಶ್ರೀಮಂತರಾದವರು ಇದ್ದಾರೆ. ಅದರಲ್ಲಿ ಭಿಕ್ಷುಕ ಭರತ್ ಜೈನ್‍ ಕೂಡ ಒಬ್ಬರು. ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, ಮುಂಬೈನ ಬೀದಿಗಳಲ್ಲಿ ಭಿಕ್ಷೆ ಬೇಡುವ ಭರತ್ ಜೈನ್ ವಿಶ್ವದ ಅತ್ಯಂತ ಶ್ರೀಮಂತ ಭಿಕ್ಷುಕ (Richest Beggar) ಎನಿಸಿಕೊಂಡಿದ್ದಾರೆ.

ಭರತ್‌ ಜೈನ್‌ ಅವರು ಭಿಕ್ಷೆಯ ಮೂಲಕ ಜೈನ್ 7.5 ಕೋಟಿ ರೂ. ನಿವ್ವಳ ಮೊತ್ತವನ್ನು ಸಂಗ್ರಹಿಸಿದ್ದಾರೆ. ಭಿಕ್ಷಾಟನೆಯಿಂದ ಅವರ ಮಾಸಿಕ ಸಂಪಾದನೆ 60,000ರಿಂದ 75,000 ರೂ. ಆಗಿದೆ. ಆಫೀಸಿನಲ್ಲಿ ದಿನವಿಡೀ ಕೆಲಸ ಮಾಡುವವರು ಕೂಡ ತಿಂಗಳಿಗೆ ಇಷ್ಟು ಸಂಪಾದನೆ ಮಾಡಲಾರರು.

Richest Beggar

ಇದಲ್ಲದೆ, ಅವರು ಮುಂಬೈನಲ್ಲಿ ರೂ. 1.2 ಕೋಟಿ ಮೌಲ್ಯದ 2 ಬಿಎಚ್‍ಕೆ ಫ್ಲ್ಯಾಟ್ ಹೊಂದಿದ್ದಾರೆ ಮತ್ತು ಥಾಣೆಯಲ್ಲಿ ತಿಂಗಳಿಗೆ ರೂ. 30,000 ಬಾಡಿಗೆ ನೀಡುವ ಎರಡು ಅಂಗಡಿಗಳನ್ನು ಹೊಂದಿದ್ದಾರೆ. ಜೈನ್ ಅವರು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ರೈಲ್ವೆ ನಿಲ್ದಾಣ (ಸಿಎಸ್ಎಂಟಿ) ಅಥವಾ ಆಜಾದ್ ಮೈದಾನದ ಪ್ರಮುಖ ಸ್ಥಳಗಳಲ್ಲಿ ಭಿಕ್ಷೆ ಬೇಡುತ್ತಾರೆ ಎಂದು ವರದಿಯಾಗಿದೆ. ಅಂತಹ ಶ್ರೀಮಂತ ವ್ಯಕ್ತಿಯಾಗಿದ್ದರೂ, ಜೈನ್ ಬೀದಿಗಳಲ್ಲಿ ಭಿಕ್ಷೆ ಬೇಡುವುದನ್ನು ಮುಂದುವರಿಸಿದ್ದಾರೆ. ಅನೇಕ ಜನರು ದಿನವಿಡೀ  ದುಡಿದರೂ ನೂರು ರೂಪಾಯಿಗಳನ್ನು ಗಳಿಸಲು ಹೆಣಗಾಡುತ್ತಿದ್ದರೆ, ಜೈನ್ 10 ರಿಂದ 12 ಗಂಟೆಗಳ ಅವಧಿಯಲ್ಲಿ ದಿನಕ್ಕೆ 2,000-2,500 ರೂ.ಗಳನ್ನು ಗಳಿಸುತ್ತಾರೆ.

ಇದನ್ನೂ ಓದಿ:ಮದುವೆಯಾಗು ಎಂದು ಒತ್ತಾಯಿಸಿದ ಹಿಂದೂ ಹುಡುಗಿಗೆ ಸಮಾಧಿ ಕಟ್ಟಿದ ಸಲೀಂ ಅರೆಸ್ಟ್‌

ಜೈನ್ ಮತ್ತು ಅವರ ಕುಟುಂಬವು ಪರೇಲ್‍ನಲ್ಲಿ 1 ಬಿಎಚ್‍ಕೆ ಡ್ಯುಪ್ಲೆಕ್ಸ್ ಅಪಾರ್ಟ್ಮೆಂಟ್‍ನಲ್ಲಿ ವಾಸಿಸುತ್ತಿದ್ದಾರೆ. ಅವರ ಮಕ್ಕಳು ಕಾನ್ವೆಂಟ್ ಶಾಲೆಗೆ ಹೋಗಿ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಅವರ ಇತರ ಕುಟುಂಬ ಸದಸ್ಯರು ಸ್ಟೇಷನರಿ ಅಂಗಡಿಯನ್ನು ನಡೆಸುತ್ತಿದ್ದಾರೆ. ಭಿಕ್ಷಾಟನೆಯನ್ನು ನಿಲ್ಲಿಸುವಂತೆ ಕುಟುಂಬದವರು ಹೇಳಿದರೂ ಜೈನ್ ಅವರ ಮಾತನ್ನು ನಿರ್ಲಕ್ಷಿಸಿ  ಭಿಕ್ಷಾಟನೆ ಕೆಲಸವನ್ನು ಮುಂದುವರಿಸಿದ್ದಾರಂತೆ.