Monday, 28th October 2024

Bikes Burnt : ಪಾರ್ಕಿಂಗ್ ಮಾಡಿದ್ದ 12 ಬೈಕ್‌ಗಳು ಏಕಾಏಕಿ ಬೆಂಕಿಗಾಹುತಿ

ಬೆಂಗಳೂರು: ನೆಲಮಹಡಿಯಲ್ಲಿ ಪಾರ್ಕ್ ಮಾಡಲಾಗಿದ್ದ 12 ಬೈಕ್‌ಗಳು ಏಕಾಏಕಿ ಬೆಂಕಿಗಾಹುತಿಯಾದ (Bikes Burnt) ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಡಾಮಿನೋಸ್ ಪಿಜ್ಜಾ ಡೆಲಿವರಿ ಮಾಡಲು ಬಳಸುತ್ತಿದ್ದ ವಾಹನಗಳು ಇವುಗಳು ಎಂದು ಹೇಳಲಾಗಿದೆ. ನಗರ ಉಲ್ಲಾಳು ಬಳಿ ಭಾನುವಾರ ಮುಂಜಾನೆ ಈ ಘಟನೆ ನಡೆದಿದೆ.

ಉಲ್ಲಾಳದ ಮುಖ್ಯರಸ್ತೆಯಲ್ಲಿ ಸಚಿನ್ ಬೋರೇಗೌಡ ಎಂಬುವರು ಡಾಮಿನೋಸ್ ಪಿಜ್ಜಾದ ಮಳಿಗೆ ನಡೆಸುತ್ತಿದ್ದಾರೆ. ಅಲ್ಲಿನ ಆಹಾರವನ್ನು ಮನೆ ಮನೆಗೆ ತಲುಪಿಸಲು ಡೆಲಿವರಿ ಬಾಯ್‌ಗಳು ಈ ವಾಹನವನ್ನು ಬಳಸುತ್ತಿದ್ದರು. ಆ ಬೈಕ್‌ಗಳನ್ನು ಕೆಲಸ ಮುಗಿಸಿದ ಬಳಿಕ ನೆಲಮಹಡಿಯಲ್ಲಿ ನಿಲ್ಲಿಸಲಾಗಿತ್ತು. ರಾತ್ರಿ ವೇಳೆ ಅವುಗಳಿಗೆ ಬೆಂಕಿ ಬಿದ್ದಿದ್ದು ಅಪಾರ ನಷ್ಟವಾಗಿದೆ.

ಭಾನುವಾರ ಮುಂಜಾನೆ ವೇಳೆ ಶಾರ್ಟ್‌ ಸರ್ಕೀಟ್ ಉಂಟಾಗಿ ಬೈಕ್ ಒಂದಕ್ಕೆ ಬೆಂಕಿ ಬಿದ್ದಿರಬಹುದು ಎಂದು ಹೇಳಲಾಗಿದೆ. ಆ ಬೆಂಕಿ ಹರಡಿಕೊಂಡು ಉಳಿದೆಲ್ಲ ಬೈಕ್‌ಗಳಿಗೆ ಹಾನಿ ಮಾಡಿದೆ. ಬೆಂಕಿಗೆ ಆಹುತಿಯಾಗಿರುವ 12ರಲ್ಲಿ 11 ಎಲೆಕ್ಟ್ರಿಕ್ ಸ್ಕೂಟರ್‌ಗಳಾಗಿವೆ. ಒಂದು ಮಾತ್ರ ಬಜಾಜ್ ಪಲ್ಸರ್ ಬೈಕ್. ಅಗ್ನಿ ಶಾಮಕ ದಳದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

,…

ಕುಡಿದ ಮತ್ತಿನಲ್ಲಿ ಚಾಲಕ, ನಿರ್ವಾಹಕನ ಮೇಲೆ ಹಲ್ಲೆ

ಬೆಂಗಳೂರು: ಎಣ್ಣೆ ಏಟಿನಲ್ಲಿ ಬಿಎಂಟಿಸಿ ಬಸ್ ನಿರ್ವಾಹಕ ಹಾಗೂ ಚಾಲಕನ ಮೇಲೆ ಹಲ್ಲೆ ಮಾಡಿರುವ ಘಟನೆ ಟ್ಯಾನರಿ ರಸ್ತೆಯಲ್ಲಿ ಭಾನುವಾರ ನಡೆದಿದೆ. ಪ್ರಕರಣ ದಾಖಲಿಸಿಕೊಂಡಿರುವ ಡಿ.ಜೆ.ಹಳ್ಳಿ ಠಾಣೆ ಪೊಲೀಸರು, ತನಿಖೆ ಕೈಗೊಂಡಿದ್ದು ಆರೋಪಿಗಳ ಪತ್ತೆಗೆ ಶೋಧ ಆರಂಭಿಸಿದ್ದಾರೆ.

ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಬಸ್‌ ಅಡ್ಡಗಟ್ಟಿ ನಿರ್ವಾಹಕ ಶಿವಕುಮಾರ್ ಮತ್ತು ಚಾಲಕ ಗಗನ್ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ದುಷ್ಕರ್ಮಿಗಳ ಕೃತ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಪೊಲೀಸರು ಅದರ ಆಧಾರದಲ್ಲಿ ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: Self Harming : ಉದ್ಘಾಟನೆಯಾಗಲು ಕೆಲವೇ ದಿನ ಬಾಕಿ ಇದ್ದ ಕಟ್ಟದಲ್ಲಿ ವ್ಯಕ್ತಿ ಆತ್ಮಹತ್ಯೆ

ಯಲಹಂಕ ಹಾಗೂ ಶಿವಾಜಿನಗರ ಮಾರ್ಗದ ಬಸ್ ಅನ್ನು ಚಾಲಕ ಸಂಜೆ 5.25ರ ಸುಮಾರಿಗೆ ಟ್ಯಾನರಿ ರಸ್ತೆಯ ಕೆನರಾ ಬ್ಯಾಂಕ್ ನಿಲ್ದಾಣದಲ್ಲಿ ನಿಲ್ಲಿಸಿದ್ದರು. ಈ ವೇಳೆ ಅಲ್ಲಿಗೆ ವಾಹನದಲ್ಲಿ ಬಂದ ಗಲಾಟೆಕೋರರು ಒಳ ಪ್ರವೇಶಿಸಿ ಗಗನ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಲಾರಂಭಿಸಿದ್ದಾರೆ. ಈ ವೇಳೆ ತಡೆಯಲು ಮುಂದಾದ ಶಿವಕುಮಾರ್ ಅವರನ್ನೂ ಸಹ ಬಸ್‌ನಿಂದ ಹೊರಗಡೆ ಎಳೆದು ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಗಗನ್ ನೀಡಿರುವ ದೂರಿನ ಅನ್ವಯ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿರುವ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ. ಆರೋಪಿಗಳು ಮದ್ಯದ ಅಮಲಿನಲ್ಲಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.