ದರ್ಗಾ ಕಮಿಟಿಯಿಂದ ಉನ್ನತ ಶಿಕ್ಷಣ ಸಚಿವ ಎಂ ಸಿ ಸುಧಾಕರ್ ಗೆ ಸನ್ಮಾನ
ಚಿಂತಾಮಣಿ: ತಾಲ್ಲೂಕಿನ ನಿಮ್ಮಕಾಯಲಹಳ್ಳಿ ಗ್ರಾಮದ ಹಜರತ್ ಸೈಯದ್ ಜಲಾಲ್ ಖಾಕಿ ಷಾ ಮೌಲಾ ಬಾಬಾ ದರ್ಗಾದ ವಾರ್ಷಿಕ ಉರುಸ್ ಕಾರ್ಯಕ್ರಮ ಎರಡು ದಿನಗಳ ಕಾಲ ಸಂಭ್ರಮ ಸಡಗರಿಂದ ಹಾಗೂ ಶಾಂತಿಯುತ ವಾಗಿ ಆಚರಿಸಲಾಯಿತು.
ಉರುಸ್ ಪ್ರಯುಕ್ತ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾ!ಎಂ ಸಿ ಸುಧಾಕರ್ ರವರು ದರ್ಗಾ ಗೆ ಭೇಟಿ ನೀಡಿದಾಗ ದರ್ಗಾ ಕಮಿಟಿ ಅಧ್ಯಕ್ಷರಾದ ಅಮೀರ್ ಜಾನ್ ಕಾರ್ಯದರ್ಶಿ ಹಾಗೂ ಸದಸ್ಯರಾದ ಮೊಹಮ್ಮದ್, ಸದ್ದಾಂ,ಬಾಬಾಜಾನ್,ಶಬ್ಬೀರ್,ಇಮ್ರಾನ್ ಪಾಷಾ,ಮಹಬೂಬ್,ಹಾಗೂ ಮುಜಾವರ ಗಳು ಹೃದಯಸ್ಪರ್ಶವಾಗಿ ಸನ್ಮಾನಿಸಿ ಗೌರವಿಸಿದರು.
ಸಚಿವ ಎಂ ಸಿ ಸುಧಾಕರ್ ರವರು ಮಾತನಾಡಿ ದರ್ಗಾ ಅಭಿವೃದ್ದಿಗೆ ಮೊದಲನೇ ಆದ್ಯತೆ ಕೊಡುವುದಲ್ಲದೆ ದರ್ಗಾ ಆವರಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ,ಹೈಟೆಕ್ ಶೌಚಾಲಯಗಳು ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳು ಮಾಡಲು ಯೋಜನೆ ತಯಾರಿಸಲಾಗಿದೆ ಎಂದು ಹೇಳಿದರು.
ದರ್ಗಾ ಅಧ್ಯಕ್ಷರಾದ ಅಮೀರ್ ಜಾನ್ ಮಾತನಾಡಿ ಎರಡು ದಿನಗಳ ಕಾಲ ಗ್ರಾಮಸ್ಥರ ಹಿಂದೂ ಮುಸ್ಲಿಂ ಬಾಂಧ ವರ, ಮುಜಾವರಗಳ ಹಾಗೂ ಭಕ್ತಾದಿಗಳ ಸಹಕಾರದೊಂದಿಗೆ ಶಾಂತಿಯುತ ಉರುಸ್ ಕಾರ್ಯಕ್ರಮವನ್ನು ಆಚರಿಸಲಾಗಿದೆ,
ದರ್ಗಾಗೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಿದ್ದು ಸಚಿವರು ಅಭಿವೃದ್ಧಿ ಮಾಡುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸೋಮಶೇಖರ ರೆಡ್ಡಿ, ನಂದಿಗಾನಹಳ್ಳಿ ಅಶ್ವಥ್ ನಾರಾಯಣ ರೆಡ್ಡಿ,ಆಂಜನೇಯ ರೆಡ್ಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹಾಜಿ ಅನ್ಸರ್ ಖಾನ್, ರಾಮರೆಡ್ಡಿ, ಬೆಂಗಳೂರು ಶಬ್ಬೀರ್ ಪಾಷಾ, ಅಸ್ಲಾಂ ಪಾಷ, ಸೇರಿದಂತೆ ಸ್ಥಳೀಯ ಹಿಂದೂ ಮುಸ್ಲಿಂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.