Wednesday, 20th November 2024

Chikkaballapur News: ಕಣ್ಣುಗಳು ದೇಹದ ಸೂಕ್ಷ ಅಂಗ;ಇದರ ಆರೋಗ್ಯಕ್ಕೂ ಒತ್ತು ನೀಡಬೇಕು: ಸಿ.ಎಸ್.ನಂಜೇಗೌಡ

ಗೌರಿಬಿದನೂರ: ಮಾನವನ ಅಂಗಗಳಲ್ಲಿ ಪ್ರಮುಖ ಅಂಗವೆಂದರೆ ಕಣ್ಣು,ಕಣ್ಣಿನ ದೃಷ್ಟಿ ಕಳೆದುಕೊಂಡರೆ ಬದುಕೆಲ್ಲಾ ಕತ್ತಲೆಯ ಕೂಪದಲ್ಲಿ ಕಳೆಯಬೇಕಾಗುತ್ತದೆ. ಅದಕ್ಕಾಗಿ ಪ್ರತಿಯೊಬ್ಬರೂ ಕಾಲಕಾಲಕ್ಕೆ ಕಣ್ಣನ್ನು ಪರೀಕ್ಷೆಗೆ ಒಳಪಡಿಸಿಕೊಂಡು ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಲಯನ್ಸ್ ಕ್ಲಬ್ ಅಧ್ಯಕ್ಷ ಸಿಎನ್.ನಂಜೇಗೌಡ ತಿಳಿಸಿದರು.

ಅವರು ನಗರದ ಮುನೇಶ್ವರ ಬಡಾವಣೆಯಲ್ಲಿರು ಲಯನ್ಸ್ ಕಣ್ಣಿನ ಆಸ್ಪತ್ರೆಯಲ್ಲಿ ನಡೆದ,ನೇತ್ರ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ನೇತ್ರ ತಪಾಸಣಾ ಶಿಬಿರದಲ್ಲಿ ಒಟ್ಟು ೪೯ ಮಂದಿ ತಮ್ಮ ಕಣ್ಣುಗಳನ್ನು ತಪಾಸಣೆ ಮಾಡಿಸಿಕೊಂಡರು. ತಪಾಸಣಾ ಶಿಬಿರದಲ್ಲಿ  ಲಯನ್ಸ್ ಸಂಸ್ಥೆಯ ಹಿರಿಯ ಸದಸ್ಯರಾದ ಮಂಜುನಾಥ್, ಶ್ರೀ ರಾಮ್ ಆದಿನಾರಾಯಣಶೆಟ್ಟಿ, ಕಾರ್ಯದರ್ಶಿ ಬಾಲಕೃಷ್ಣ, ಉಪಾಧ್ಯಕ್ಷ ಸುರಾಜ್ , ಖಜಾಂಚಿ ಜಗನ್ನಾಥ್, ರವೀಂದ್ರ ಹಾಗೂ ಇನ್ನಿತರರು ಹಾಜರಿದ್ದರು.