ಮಧ್ಯಪ್ರದೇಶ: ಸಬ್ ಇನ್ಸ್‌ಪೆಕ್ಟರ್‌ವೊಬ್ಬ (Sub-Inspector) ಪೊಲೀಸ್ ಸ್ಟೇಷನ್ ಗೆ ಸಮವಸ್ತ್ರದ ಧರಿಸದೆ ಬಂದಿದ್ದು ಮಾತ್ರವಲ್ಲ ದೂರು ನೀಡಲು ಬಂದ ಮಹಿಳೆಯನ್ನು ಕೆಟ್ಟದಾಗಿ ನಡೆಸಿಕೊಂಡ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ. ಮಧ್ಯಪ್ರದೇಶದ ಮೌಗಂಜ್ (Madhya Pradesh’s Mauganj district) ಜಿಲ್ಲೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಸಮವಸ್ತ್ರದ ಬದಲು ಲುಂಗಿ ಮತ್ತು ಟಿಶರ್ಟ್ ಧರಿಸಿ ಪೊಲೀಸ್ ಸ್ಟೇಷನ್ ಗೆ ಬಂದಿದ್ದು ಮಾತ್ರವಲ್ಲ ದೂರು ನೀಡಲು ಬಂದ ಮಹಿಳೆಯನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ವೈರಲ್ ಆಗಿದೆ.
ಹಟ ಔಟ್ ಪೋಸ್ಟ್ ಇನ್ ಚಾರ್ಜ್ ಸಬ್ ಇನ್ಸ್‌ಪೆಕ್ಟರ್ ಬೃಹಸ್ಪತಿ ಪಟೇಲ್ (50) ಎಂಬಾತ ಕರ್ತವ್ಯದಲ್ಲಿರುವಾಗ ಲುಂಗಿ ಧರಿಸಿ ಬಂದಿರುವುದು ಮಾತ್ರವಲ್ಲ ದೂರು ನೀಡಲು ಬಂದ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ರೇವಾ ರೇಂಜ್ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಸಾಕೇತ್ ಪಾಂಡೆ ಹೇಳಿದ್ದಾರೆ.
ವೈರಲ್ ವಿಡಿಯೋದಲ್ಲಿ ಪಟೇಲ್ ಮಹಿಳೆಯನ್ನು ಬೈದು ಬುದ್ಧಿವಂತರಂತೆ ವರ್ತಿಸಬೇಡಿ ಎಂದು ಹೇಳಿ ನೆಲದ ಮೇಲೆ ಕುಳಿತಿದ್ದ ಮಹಿಳೆಯನ್ನು ಓಡಿಸುವುದನ್ನು ಕಾಣಬಹುದು. ಈ ಕುರಿತು ಮಹಿಳೆ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿದೆ. ಜಿಲ್ಲಾ ಕೇಂದ್ರದಿಂದ ಸುಮಾರು 50 ಕಿಲೋ ಮೀಟರ್ ದೂರದಲ್ಲಿರುವ ಹೊರಠಾಣೆಯಲ್ಲಿ ಈ ಘಟನೆ ನಡೆದಿದ್ದಾರೆ. ಈ ಕುರಿತು ಹೆಚ್ಚುವರಿ ಪೊಲೀಸ್ ಅಧೀಕ್ಷಕರು ತನಿಖೆ ನಡೆಸುತ್ತಿದ್ದಾರೆ ಎಂದು ಸಾಕೇತ್ ತಿಳಿಸಿದ್ದಾರೆ.
MP Police के चौकी प्रभारी का वीडियो हो रहा वायरल, थाने में आई लड़की के साथ ऐसा व्यवहार, कब नपेंगे ? | MP Tak#MPTakLatestNews #Mauganj #MPPolice #ViralVideo pic.twitter.com/aydMCplnxq
— MP Tak (@MPTakOfficial) October 26, 2024
ಬೃಹಸ್ಪತ್ ಪಟೇಲ್ ಅವರ ವಿಡಿಯೋ ಈ ಹಿಂದೆಯೂ ವೈರಲ್ ಆಗಿತ್ತು. ಇತ್ತೀಚಿನ ಪ್ರಕರಣ ಅಕ್ಟೋಬರ್ 24ರಂದು ಸಂಜೆ ನಡೆದಿದೆ ಎನ್ನಲಾಗಿದೆ. ಲುಂಗಿ ಹಾಕಿಕೊಂಡು ಔಟ್ ಪೋಸ್ಟ್‌ನಲ್ಲಿ ಡ್ಯೂಟಿ ಮಾಡುತ್ತಿರುವ ವಿಡಿಯೋ ವೈರಲ್ ಆದ ಅನಂತರ ಇಡೀ ಇಲಾಖೆಯಲ್ಲಿ ಸಂಚಲನ ಮೂಡಿತ್ತು. ಔಟ್ ಪೋಸ್ಟ್ ಇನ್ ಚಾರ್ಜ್ ವಿರುದ್ಧವೂ ತನಿಖೆ ಆರಂಭಿಸಲಾಗಿದೆ.
ಬೃಹಸ್ಪತ್ ಪಟೇಲ್ ಅವರನ್ನು ಕೆಲವು ತಿಂಗಳ ಹಿಂದೆ ಹಟಾ ಔಟ್‌ಪೋಸ್ಟ್ ಉಸ್ತುವಾರಿಯನ್ನಾಗಿ ಮಾಡಲಾಗಿತ್ತು.
ಘಟನೆಯ ಕುರಿತು ತನಿಖೆಯನ್ನು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗೆ ವಹಿಸಲಾಗಿದೆ. ಸುಮಾರು ಒಂದೂವರೆ ವರ್ಷಗಳ ಹಿಂದೆ ಪಟೇಲ್ ನೋಟುಗಳನ್ನು ಎಣಿಸುವ ವಿಡಿಯೋವೊಂದು ವೈರಲ್ ಆಗಿತ್ತು.