ಶ್ರೀನಗರ: ಕಳೆದ ಕೆಲ ದಿನಗಳಿಂದ ಜಮ್ಮು ಕಾಶ್ಮೀರದಲ್ಲಿ( Jammu and Kashmir) ಉಗ್ರರ ದಾಳಿ ( Terror attack) ನಡೆಯುತ್ತಿದ್ದು, ಸೇನಾ ವಾಹನದ ಮೇಲೆ ಗುಂಡು ಹಾರಿಸಲಾಗಿದೆ. ಜಮ್ಮುವಿನ ಅಖ್ನೂನ್ ಸೆಕ್ಟರ್‌ನಲ್ಲಿ( Akhnoor sector ) ಸೋಮವಾರ ಗುಂಡಿನ ದಾಳಿ ನಡೆದಿದೆ. ಸೇನಾ ಸಿಬ್ಬಂದಿ ಪ್ರತಿದಾಳಿ ನಡೆಸಿ ಶಂಕಿತ ಉಗ್ರನನ್ನು ಹತ್ಯೆ ಮಾಡಿದ್ದುಕಾರ್ಯಾಚರಣೆ ಮುಂದುವರಿಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಬಟಾಲ್ ಪ್ರದೇಶದಲ್ಲಿ ಬೆಳಗ್ಗೆ 7ಗಂಟೆ ಸುಮಾರಿಗೆ ಮೂವರು ಭಯೋತ್ಪಾದಕರು ಸೇನಾ ವಾಹನದ ಮೇಲೆ ಹಲವು ಸುತ್ತು ಗುಂಡು ಹಾರಿಸಿದರು. ತಕ್ಷಣ ಎಚ್ಚೆತ್ತ ಭದ್ರತಾ ಪಡೆಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಒಬ್ಬ ಉಗ್ರನನ್ನು ಹತ್ಯೆ ಮಾಡಿದೆ. ಉಳಿದವರಿಗಾಗಿ ಶೋಧ ನಡೆಸಲಾಗುತ್ತಿದೆ. ಭದ್ರತಾ ಪಡೆಗಳು ದೀಪಾವಳಿ ಹಬ್ಬದ ಸಲುವಾಗಿ ಜಮ್ಮು ಮತ್ತು ಕಾಶ್ಮೀರದುದ್ದಕ್ಕೂ ಕಟ್ಟೆಚ್ಚರ ವಹಿಸಿವೆ.
BIG NEWS : EXCLUSIVE VISUAL
— Indian Observer (@ag_Journalist) October 28, 2024
Suspected terrorists fired upon vehicle of Indian Army in Jogwan area of Akhnoor
Fired upon Army vehicle early today morning
Joint forces have launched massive search operation in the area #Jammu #Terrorist #IndianArmy #Akhnoor #jogwan… pic.twitter.com/mYHxi9tt3T
ಜಮ್ಮು ಕಾಶ್ಮೀರ ವಿಧಾನ ಸಭೆ ಚುನಾವಣೆಯ ಬಳಿಕ ಉಗ್ರರ ದಾಳಿ ಜೋರಾಗಿದ್ದು ನಾಗರಿಕರನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸುತ್ತಿದ್ದಾರೆ. ಕಳೆದ ವಾರದಲ್ಲಿ ಜಮ್ಮು ಮತ್ತು ಕಾಶ್ಮೀರದಾದ್ಯಂತ, ವಿಶೇಷವಾಗಿ ಕಣಿವೆ ಪ್ರದೇಶದಲ್ಲಿ ನಡೆದ ಅನೇಕ ಗುಂಡಿನ ಚಕಮಕಿಗಳಲ್ಲಿಇಬ್ಬರು ಸೈನಿಕರು ಹಾಗೂ ನಾಗರಿಕರು ಸೇರಿ 12 ಜನ ಮೃತ ಪಟ್ಟಿದ್ದರು.
ಇದನ್ನೂ ಓದಿ : Terror Attack: ಜಮ್ಮು & ಕಾಶ್ಮೀರದಲ್ಲಿ ಸೇನಾ ವಾಹನದ ಮೇಲೆ ಉಗ್ರರ ದಾಳಿ; 4 ಮಂದಿ ಬಲಿ
ಅಕ್ಟೋಬರ್ 24 ರಂದು, ಬಾರಾಮುಲ್ಲಾದ ಗುಲ್ಮಾರ್ಗ್ ಬಳಿ ಸೇನಾ ವಾಹನದ ಮೇಲೆ ಭಯೋತ್ಪಾದಕರು ನಡೆಸಿದ್ದು, ಎರಡು ಸೈನಿಕರು ಮತ್ತು ಇಬ್ಬರು ನಾಗರಿಕರು ಮೃತಪಟ್ಟಿದ್ದಾರೆ. ಈ ಘಟನೆಗೂ ಮೊದಲು ತ್ರಾಲ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಉತ್ತರಪ್ರದೇಶ ಮೂಲದ ಕಾರ್ಮಿಕ ಗಾಯಗೊಂಡಿದ್ದ. ಅಕ್ಟೋಬರ್ 20 ರಂದು ಗಂಡರ್‌ಬಾಲ್ ಜಿಲ್ಲೆಯ ಸೋನಾಮಾರ್ಗ್‌ನ ಸುರಂಗ ಮಾರ್ಗ ನಿರ್ಮಾಣ ಸ್ಥಳದ ಬಳಿ ವಾಸವಿದ್ದ 6 ವಲಸೆ ಕಾರ್ಮಿಕರು ಹಾಗೂ ವೈದ್ಯ ಸೇರಿದಂತೆ 7 ಜನರನ್ನು ಹತ್ಯೆ ಮಾಡಲಾಗಿತ್ತು. ಈ ಘಟನೆಗೆ ಎರಡು ದಿನಗಳ ಮೊದಲು ಬಿಹಾರದ ಮತ್ತೊಬ್ಬ ವಲಸೆ ಕಾರ್ಮಿಕನ ಮೇಲೆ ದಾಳಿ ನಡೆಸಲಾಗಿತ್ತು. ಅಖ್ನೂರ್ ಸೆಕ್ಟರ್ ಪ್ರದೇಶವು ಉಗ್ರರ ದಾಳಿಗೆ ಕುಖ್ಯಾತವಾಗಿದೆ. ಭಾರತ ಮತ್ತು ಪಾಕಿಸ್ತಾನ ಎರಡೂ ಪ್ರದೇಶಗಳಲ್ಲಿ ಹರಿದು ಹೋಗುವ ಮನಾವರ್ ತಾವಿ ನದಿ ಮೂಲಕ ಉಗ್ರರು ಭಾರತದ ಗಡಿಯೊಳಗೆ ನುಸುಳಿ ಭದ್ರತಾ ಪಡೆಗಳ ಮೇಲೆ ದಾಳಿ ಎಸಗಿದ ಹಲವು ಘಟನೆಗಳು ಹಿಂದೆ ನಡೆದಿದ್ದಿದೆ.