Monday, 28th October 2024

U23 World Championship : ಚಿನ್ನದ ಪದಕ ಗೆದ್ದ ಭಾರತದ ಚಿರಾಗ್ ಚಿಕ್ಕಾರ

U23 World Championship

ಬೆಂಗಳೂರು: ಭಾರತದ ಚಿರಾಗ್ ಚಿಕ್ಕರಾ ಅವರು 23 ವರ್ಷದೊಳಗಿನವರ ಕುಸ್ತಿ ವಿಶ್ವ ಚಾಂಪಿಯನ್ (U23 World Championship) ಆದ ಮೂರನೇ ಭಾರತೀಯ ಸ್ಪರ್ಧಿ ಮತ್ತು ಎರಡನೇ ಪುರುಷ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭಾರತವು ಇಲ್ಲಿ ನಡೆದ ವಯೋಮಿತಿಯ ಪಂದ್ಯಾವಳಿಯಲ್ಲಿ ತಲಾ ಒಂದು ಚಿನ್ನ ಮತ್ತು ಬೆಳ್ಳಿ ಸೇರಿದಂತೆ ಒಂಬತ್ತು ಪದಕಗಳನ್ನು ಗೆದ್ದುಕೊಂಡಿದೆ. ಪುರುಷರ ಫ್ರೀಸ್ಟೈಲ್ 57 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಚಿಕ್ಕರಾ, ಅಂತಿಮ ಸೆಕೆಂಡುಗಳಲ್ಲಿ ಕಿರ್ಗಿಸ್ತಾನದ ಅಬ್ದಿಮಾಲಿಕ್ ಕರಚೊವ್ ವಿರುದ್ಧ 4-3 ಅಂತರದಲ್ಲಿ ಗೆಲುವು ಸಾಧಿಸಿ ಪ್ರಶಸ್ತಿ ಗೆದ್ದರು.

ಪ್ಯಾರಿಸ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಅಮನ್ ಸೆಹ್ರಾವತ್ ನಂತರ ಅಂಡರ್ 23 ಚಾಂಪಿಯನ್ಶಿಪ್‌ಶೀಪ್‌ನಲ್ಲಿ ಚಿನ್ನ ಗೆದ್ದ ಎರಡನೇ ಭಾರತೀಯ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

2022ರ ಆವೃತ್ತಿಯಲ್ಲಿ ಸೆಹ್ರಾವತ್ ಇದೇ ವಿಭಾಗದಲ್ಲಿ ಈ ಸಾಧನೆ ಮಾಡಿದ್ದರೆ, ರೀತಿಕಾ ಹೂಡಾ ಕಳೆದ ವರ್ಷ 76 ಕೆ.ಜಿ. ವಿಭಾಗದಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ರವಿ ಕುಮಾರ್ ದಹಿಯಾ 2018ರಲ್ಲಿ 23 ವರ್ಷದೊಳಗಿನವರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಗೆದ್ದಿದ್ದರು.

ಚಿಕ್ಕಾರ ಗೆಲುವಿನ ಹಾದಿ

ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಗೌಕೊಟೊ ಒಜಾವಾ ಅವರನ್ನು 6-1, ಅಂತಿಮ ಎಂಟರ ಘಟದಲ್ಲಿ ಇಯೂನಸ್ ಇವಾಬಟಿರೊವ್ ಅವರನ್ನು 12-2 ಮತ್ತುಸೆಮಿಯಲ್ಲಿ ಅಲನ್ ಒರಾಲ್ಬೆಕ್ ಅವರನ್ನು 8-0 ಅಂತರದಿಂದ ಸೋಲಿಸುವ ಮೂಲಕ ಚಿಕ್ಕಾರಾ ಫೈನಲ್ ತಲುಪಿದರು

ಪುರುಷರ ಫ್ರೀಸ್ಟೈಲ್ ವಿಭಾಗದಲ್ಲಿ ಭಾರತವು ಎರಡು ಕಂಚಿನ ಪದಕಗಳನ್ನು ಒಳಗೊಂಡಿದ್ದು, 82 ಅಂಕಗಳೊಂದಿಗೆ ತಂಡವು ನಾಲ್ಕನೇ ಸ್ಥಾನದಲ್ಲಿದೆ. ಇರಾನ್ (158), ಜಪಾನ್ (102) ಮತ್ತು ಅಜೆರ್ಬೈಜಾನ್ (100) ಮೊದಲ ಮೂರು ಸ್ಥಾನದಲ್ಲಿದೆ.

ಇದನ್ನೂ ಓದಿ: Fakhar Zaman : ವಿರಾಟ್ ಕೊಹ್ಲಿಯನ್ನು ಬಾಬರ್‌ಗೆ ಹೋಲಿಸಿದ್ದಕ್ಕೆ ಶೋಕಾಸ್‌ ನೋಟಿಸ್‌ ಪಡೆದ ಪಾಕ್ ಬ್ಯಾಟರ್‌!

ಪುರುಷರ ಫ್ರೀಸ್ಟೈಲ್‌ನಲ್ಲಿ ಭಾರತವು ಇನ್ನೂ ಎರಡು ಕಂಚಿನ ಪದಕಗಳನ್ನು ಗೆದ್ದಿದ್ದು, ಈ ವಿಭಾಗದಲ್ಲಿ ದೇಶದ ಪದಕಗಳ ಸಂಖ್ಯೆ ನಾಲ್ಕಕ್ಕೆ ಏರಿದೆ. ತಂಡ ಶ್ರೇಯಾಂಕದಲ್ಲಿ ರಾಷ್ಟ್ರವನ್ನು ನಾಲ್ಕನೇ ಸ್ಥಾನಕ್ಕೇರಿಸಿದೆ. ಈ ವಿಭಾಗದ ತಂಡಗಳ ರ್ಯಾಂಕಿಂಗ್‌ನಲ್ಲಿ ಇರಾನ್ 158 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಜಪಾನ್ (102), ಅಜೆರ್‌ಬೈಜಾನ್‌ (100) ಮತ್ತು ಐನಿಡಾ (82) ನಂತರದ ಸ್ಥಾನಗಳಲ್ಲಿವೆ.