Friday, 22nd November 2024

Indias Census : 2025ಕ್ಕೆ ಜನಗಣತಿ ಶುರು; ಕೇಂದ್ರದಿಂದ ಮಹತ್ವದ ನಿರ್ಧಾರ

Indias census

ನವದೆಹಲಿ : 2028 ರ ಲೋಕಸಭೆ ಚುನಾವಣೆಗೂ (Loka Sabha Election) ಮುನ್ನ ದೇಶದಲ್ಲಿ ಜನಗಣತಿ (Indias Census) ನಡೆಸಲು ಕೇಂದ್ರ ಸರ್ಕಾರ ತಯಾರಿ (Central Government) ನಡೆಸುತ್ತಿದೆ ಎಂದು ತಿಳಿದು ಬಂದಿದೆ. ನಾಲ್ಕು ವರ್ಷಗಳ ಸುದೀರ್ಘ ವಿಳಂಬದ ನಂತರ ದೇಶದಲ್ಲಿ ಗಣತಿ 2025ರಿಂದ 2026ರ ವರೆಗೆ ನಡೆಯಲಿದೆ ಎಂಬ ನಿರೀಕ್ಷೆಯಿದೆ. 2011ರ ಜನಗಣತಿಯ ನಂತರ 10 ವರ್ಷಗಳ ನಂತರ ಅಂದರೆ 2021ಕ್ಕೆ ಜನಗಣತಿ ನಡೆಯಬೇಕಿತ್ತು. ಆದರೆ ಕೊರೋನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ನಾಲ್ಕು ವರ್ಷ ತಡವಾಗಿದೆ.

ಜನಗಣತಿಯ ನಂತರ ಜನಸಂಖ್ಯೆ ಆಧಾರದ ಮೇಲೆ ಲೋಕಸಭಾ ಲೋಕಸಭಾ ಸ್ಥಾನಗಳ ವಿಂಗಡಣೆ ಆಗಲಿದೆ. 2028ಕ್ಕೆ ಲೋಕಸಭಾ ಚುನಾಚಣೆ ನಡೆಯಲಿದ್ದು ಆ ವೇಳೆ ಸಂಪೂರ್ಣ ಸಮೀಕ್ಷೆಯ ವರದಿ ಕೈ ಸೇರಲಿದೆ ಎಂದು ಹೇಳಲಾಗುತ್ತದೆ. ಬರೇ ಜನಗಣತಿಗೆ ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಜಾತಿ ಗಣತಿ ನಡೆಸಿದ ಬಳಿಕ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಧರ್ಮ ಮತ್ತು ಸಾಮಾಜಿಕ ವರ್ಗದ ಸಮೀಕ್ಷೆ
ಮುಂಬರುವ ಜನಗಣತಿಯು ಎಲ್ಲಾ ಧರ್ಮಗಳು, ಸಾಮಾನ್ಯ ಮತ್ತುಎಸ್‌ಸಿ-ಎಸ್‌ಟಿ ವರ್ಗಗಳ ಒಳಗಿನ ಉಪ-ಪಂಗಡಗಳ ಸಮೀಕ್ಷೆಗಳನ್ನು ಒಳಗೊಂಡಿರುತ್ತದೆ. ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಎಣಿಕೆಗಳನ್ನು ಒಳಗೊಂಡಿರುತ್ತದೆ. ಜನಗಣತಿ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿರುವ ಸಂದರ್ಭದಲ್ಲಿ ಜಾತಿಗಣತೆಯ ಬಗ್ಗೆ ಮಾತನಾಡಿದ ಕಾಂಗ್ರೆಸ್‌ ಮುಖಂಡ ಮಾಣಿಕಂ ಟ್ಯಾಗೋರ್ “ಜಾತಿ ಗಣತಿ ನಡೆಸಲು ಕೇಂದ್ರ ಸರ್ಕಾರ ನಿರಾಕರಿಸಿರುವುದು ಒಬಿಸಿ ಸಮುದಾಯಗಳಿಗೆ ಮಾಡಿದ ದ್ರೋಹ. ನ್ಯಾಯಾಲಯದ ಮಾತನ್ನು ನಿರ್ಲಕ್ಷಿಸಿ, ಕೇಂದ್ರ ನಮ್ಮ ಜನರಿಗೆ ಅನ್ಯಾಯ ಮಾಡುತ್ತಿದೆ. ಇದು ರಾಜಕೀಯ ದುರಹಂಕಾರ,” ಆರ್‌ಎಸ್‌ಎಸ್‌, ಜೆಡಿಯು ಮತ್ತು ಟಿಡಿಪಿ ನಮ್ಮ ಜನರೊಂದಿಗೆ ನಿಲ್ಲುತ್ತದೆಯೇ ಇಲ್ಲಾ ಮೌನವಾಗಿರುತ್ತದೆಯೇ ಎಂದು ಪ್ರಶ್ನಿಸಿದ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Space Station : 2035ರ ವೇಳೆಗೆ ಭಾರತಕ್ಕೆ ಸ್ವಂತ ಬಾಹ್ಯಾಕಾಶ ನಿಲ್ದಾಣ: ಕೇಂದ್ರ ಸಚಿವ

ಕೊರೊನಾದಿಂದ ವಿಳಂಬಗೊಂಡ ಜನಗಣತಿಯ ಸಲುವಾಗಿ ಪ್ರಸ್ತುತ ಭಾರತದ ರಿಜಿಸ್ಟ್ರಾರ್ ಜನರಲ್ ಮತ್ತು ಸೆನ್ಸಸ್ ಕಮಿಷನರ್ ಆಗಿ ಸೇವೆ ಸಲ್ಲಿಸುತ್ತಿರುವ ಮೃತುಂಜಯ್ ಕುಮಾರ್ ನಾರಾಯಣ್ ಸೇವಾ ಅವಧಿಯನ್ನು ಆಗಸ್ಟ್ 2026ರವರೆಗೆ ವಿಸ್ತರಿಸಲಾಗಿದೆ.

ಕಳೆದ ಆಗಸ್ಟ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಜನಗಣತಿಯನ್ನು ನಡೆಸುವ ಸಂಭವನೀಯತೆಯ ಕುರಿತು “ಜನಗಣತಿಯನ್ನು ಸೂಕ್ತ ಸಮಯದಲ್ಲಿ ಕೈಗೊಳ್ಳಲಾಗುವುದು. ಅಧಿಕೃತವಾಗಿ ಜನಗಣತಿ ಹೇಗೆ ಮಾಡಲಾಗುತ್ತದೆ ಎಂಬುದನ್ನು ನಾನು ಪ್ರಕಟಿಸುತ್ತೇನೆ” ಎಂದು ಹೇಳಿದ್ದರು. ಮುಂದಿನ ರಾಷ್ಟ್ರೀಯ ಜನಗಣತಿಯನ್ನು ಮೊಬೈಲ್ ಫೋನ್ ಅಪ್ಲಿಕೇಶನ್ ಮೂಲಕ ಸಂಪೂರ್ಣವಾಗಿ ಡಿಜಿಟಲ್ ಆಗಿ ಮಾಡಲಾಗುತ್ತದೆ ಎಂದು ಶಾ ಉಲ್ಲೇಖಿಸಿದ್ದರು.