Monday, 28th October 2024

Emerging Asia Cup : ಲಂಕಾ ಎ ತಂಡ ಸೋಲಿಸಿ ಎಮರ್ಜಿಂಗ್ ಏಷ್ಯಾ ಕಪ್ ಗೆದ್ದ ಅಫಘಾನಿಸ್ತಾನ

Emerging Asia Cup

ಬೆಂಗಳೂರು: ಅಕ್ಟೋಬರ್ 27ರಂದು ಅಲ್ ಅಮೆರಾತ್‌ನಲ್ಲಿ ನಡೆದ ಎಮರ್ಜಿಂಗ್ ಏಷ್ಯಾ ಕಪ್ ಫೈನಲ್‌ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಗೆದ್ದ ಅ ಫ್ಘಾನಿಸ್ತಾನ ಎ ತಂಡವು ಚಾಂಪಿಯನ್ ಆಗಿದೆ. ಕಡಿಮೆ ಸ್ಕೋರ್ ಫೈನಲ್‌ನಲ್ಲಿ ತಮ್ಮ ಬೌಲಿಂಗ್ ಪ್ರಾಬಲ್ಯ ಪ್ರದರ್ಶಿಸಿದ ಆಫ್ಘನ್ ತಂಡ ಪ್ರಶಸ್ತಿ ಗೆದ್ದುಕೊಂಡಿತು. ಭಾರತ ‘ಎ’ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಪ್ರಭಾವ ಬೀರಿದ್ದ ಅಫ್ಘಾನಿಸ್ತಾನದ ಬೌಲರ್‌ಗಳು ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಪಂದ್ಯಾವಳಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದ ಬಿಲಾಲ್ ಸಮಿ ಮತ್ತು ಅಲ್ಲಾ ಘನ್‌ಜಾನಿಫರ್‌ ಫೈನಲ್‌ನಲ್ಲಿ ಚೆಂಡಿನೊಂದಿಗೆ ಮಿಂಚಿದರು.

ಅಫ್ಘಾನಿಸ್ತಾನ ‘ಎ’ ತಂಡದ ಬೌಲಿಂಗ್ ದಾಳಿ ಆರಂಭದಿಂದಲೂ ಹಿಡಿತ ಸಾಧಿಸಿತು. ಅಫ್ಘಾನಿಸ್ತಾನದ ಬೌಲರ್‌ಗಳು ಒತ್ತಡ ಹೆಚ್ಚಿಸಿದ್ದರಿಂದ ಶ್ರೀಲಂಕಾ ಎ ತಂಡ ಜತೆಯಾಟ ನಿರ್ಮಿಸಲು ಹೆಣಗಾಡಿತು. ಸಹಮ್ ಆರ್ಚಿಗೆ 47 ಎಸೆತಗಳಲ್ಲಿ ಅಜೇಯ 64 ರನ್ ಗಳಿಸಿ ಶ್ರೀಲಂಕಾದ ಪರ ಮಿಂಚಿದರು. ಆದಾಗ್ಯೂ ಸಾಧಾರಣ 133 ರನ್ ಗಳಿಸಲು ಲಂಕಾ ಶಕ್ತಗೊಂಡಿತು. ಸಮಿ ಅವರ 3/22 ಮತ್ತು ಘನ್ಜಾನಿಫರ್ ಅವರ 2/14 ಎಕಾನಮಿಕಲ್ ಬೌಲಿಂಗ್ ಕಾರಣ ಲಂಕಾ ತಂಡಕ್ಕೆ ಚೇತರಿಸಿಕೊಂಡಿತು.

ಕಠಿಣ ಪಿಚ್‌

ಅಲ್ ಅಮೆರಾತ್‌ನಲ್ಲಿ ಪಿಚ್ ಕ್ಲಿಷ್ಟಕರವೆಂದು ಸಾಬೀತಾಯಿತು. ಇದು ಎರಡೂ ತಂಡಗಳಿಗೆ ಸವಾಲುಗಳನ್ನು ಒಡ್ಡಿತು. ಅಫ್ಘಾನಿಸ್ತಾನ ‘ಎ’ ತಂಡದ ಆರಂಭಿಕ ಬ್ಯಾಟರ್‌ ಜುಬೈದ್ ಅಕ್ಬರಿ ಮೊದಲ ಎಸೆತದಲ್ಲೇ ಗೋಲ್ಡನ್ ಡಕ್ ಔಟ್ ಆದರು. ಆದಾಗ್ಯೂ, ಸೆದಿಕುಲ್ಲಾ ಅಟಲ್ ಕ್ರೀಸ್‌ನಲ್ಲಿ ಸಂಯಮ ತೋರಿಸಿದರು. ಆಕ್ರಮಣಕಾರಿ ಸ್ಟ್ರೋಕ್‌ಗಳನ್ನು ತೋರಿದರು. 55 ಎಸೆತಗಳಲ್ಲಿ 55 ರನ್ ಗಳಿಸಿ ಅಫ್ಘಾನಿಸ್ತಾನ ‘ಎ’ ತಂಡಕ್ಕೆ ಆರಂಭಿಕ ಹಿನ್ನಡೆಯಿಂದ ತಪ್ಪಿಸಿಕೊಳ್ಳುವುದಕ್ಕೆ ನೆರವಾದರು.

ಆರಂಭಿಕ ವಿಕೆಟ್ ಹೊರತಾಗಿಯೂ ಶ್ರೀಲಂಕಾ ಎ ಬೌಲರ್‌ಗಳು ತಮ್ಮ ವೇಗ ಉಳಿಸಿಕೊಳ್ಳಲು ಕಷ್ಟಪಟ್ಟರು, ಅಫ್ಘಾನಿಸ್ತಾನದ ಇನ್ನಿಂಗ್ಸ್‌ನಲ್ಲಿ ಕೇವಲ ಮೂರು ವಿಕೆಟ್‌ ಮಾತ್ರ ಪಡೆದರು. ಮೊಹಮ್ಮದ್ ಇಶ್ಫಾಕ್ ಅವರು ಅಫ್ಘಾನಿಸ್ತಾನ ‘ಎ’ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು.

ಇದನ್ನೂ ಓದಿ: R Ashwin : ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದ ಆರ್. ಅಶ್ವಿನ್‌

ಈ ಗೆಲುವು ಅಫ್ಘಾನಿಸ್ತಾನ ‘ಎ’ ತಂಡಕ್ಕೆ ಮಹತ್ವದ ಕ್ಷಣವಾಗಿದೆ. ಸಮಿ ಮತ್ತು ಘನ್ಜಾನಿಫರ್ ನೇತೃತ್ವದ ಅವರ ಬೌಲಿಂಗ್ ದಾಳಿಯು ನಿರ್ಣಾಯಕವೆಂದು ಸಾಬೀತಾಗಿದೆ. ತಂಡದ ಸಮತೋಲಿತ ವಿಧಾನವು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಅವರ ಬೆಳವಣಿಗೆ ಪ್ರದರ್ಶಿಸಿತು.