Monday, 28th October 2024

Viral Video: ಮಗನ ಅಪಾಯಕಾರಿ ಸ್ಟಂಟ್‌ಗೆ ಸಿಟ್ಟಿಗೆದ್ದು ದೊಣ್ಣೆಯೇಟು ಕೊಟ್ಟ ಅಮ್ಮ!

Viral Video

ಬೆಂಗಳೂರು: ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಯುವಕರು ಅಪಾಯಕಾರಿಯಾದ ಸ್ಟಂಟ್‍ಗಳನ್ನು ಮಾಡಿ ಜೀವಕ್ಕೆ ಆಪತ್ತು ತಂದುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅಂತಹ ಪ್ರಕರಣಗಳು ತುಂಬಾ ನಡೆದಿವೆ. ಇತ್ತೀಚೆಗೆ ಯುವಕನೊಬ್ಬ ಅಪಾಯಕಾರಿ ಸ್ಟಂಟ್ ಮಾಡುತ್ತಿರುವ ವಿಡಿಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ. ಸುತ್ತಲೂ ಚೂಪಾದ ರಾಡ್‍ಗಳನಿಟ್ಟು ಸ್ಟಂಟ್ ಮಾಡಿದ್ದಾನೆ. ಇದು ನೋಡುಗರನ್ನು ಬೆಚ್ಚಿ ಬೀಳಿಸಿದೆ. ಅದಕ್ಕಿಂತಲೂ ಹೆಚ್ಚಾಗಿ ತನ್ನ ಮಗನ ಹುಚ್ಚಾಟ ನೋಡಿ ಆತನ ಅಮ್ಮ ದೊಣ್ಣೆಯಲ್ಲಿ ಚೆನ್ನಾಗಿ ಬಾರಿಸಿದ್ದಾರೆ.

ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯ ಈ ವಿಡಿಯೊದಲ್ಲಿ ಹುಡುಗನೊಬ್ಬ ಅಪಾಯಕಾರಿ ಸ್ಟಂಟ್ ಮಾಡಿದ್ದಾನೆ. ಅದಕ್ಕಾಗಿ ಆತ ವಾಹನ ಟೈಯರ್‌ ನಡುವೆ ಎರಡು ಇಟ್ಟಿಗೆಯನ್ನು ಇಟ್ಟು ಅದರ ಸುತ್ತಲೂ ಚೂಪಾದ ಕಬ್ಬಿಣದ ರಾಡ್‍ಗಳನ್ನು ಇರಿಸಿದ್ದಾನೆ. ಆತ ಮೊಬೈಲ್‍ನಲ್ಲಿ ವಿಡಿಯೊ ಆನ್ ಮಾಡಿ ಮಧ್ಯದಲ್ಲಿರುವ ಇಟ್ಟಿಗೆಗಳ ಮೇಲೆ ನಿಂತು ಒಮ್ಮೆ ಮೇಲೆ ಹಾರಿ ಮತ್ತೆ ಅದೇ ಸ್ಥಳದಲ್ಲಿ ಬಂದು ನಿಲ್ಲಲ್ಲು ಪ್ರಯತ್ನಿಸಿದ್ದಾನೆ. ಆದರೆ ಆಯ ತಪ್ಪಿ ಕಾಲಿಗೆ ಕಬ್ಬಿಣದ ರಾಡ್‍ವೊಂದು ಚುಚ್ಚಿ ಗಾಯಗೊಂಡಿದ್ದಾನೆ. ಆತ ಅಪಾಯಕಾರಿ ಸ್ಟಂಟ್  ಮಾಡುವುದನ್ನು ಕಂಡು ಮಹಿಳೆಯೊಬ್ಬರು ಆತನನ್ನು ಹೊಡೆಯಲು ಕೋಲು ಹಿಡಿದುಕೊಂಡು ಓಡಿ ಬಂದಿದ್ದಾರೆ.

ಆರಂಭದಲ್ಲಿ ಆತ ಏನು ಮಾಡುತ್ತಿದ್ದಾನೆ ಎಂದು ತಿಳಿಯದ ಅಮ್ಮ ತಡೆಯಲಿಲ್ಲ. ಆದರೆ ನಂತರ ಚೂಪಾದ ಕಬ್ಬಿಣದ ರಾಡ್‍ ಮಧ್ಯದಲ್ಲಿ ಹಾರುವುದನ್ನು ಕಂಡು ಹೆದರಿ ಆತನನನ್ನು ಹೊಡೆಯಲು ಬಂದಿದ್ದಾರೆ. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದಕ್ಕೆ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ:ಮುಂಬೈ ಬೀದಿಯ ಭಿಕ್ಷುಕ ಭರತ್‌ ಜೈನ್‌ ಕೋಟ್ಯಧಿಪತಿ!

ಸೋಶಿಯಲ್ ಮೀಡಿಯಾದ ರೀಲ್ಸ್‌ಗಾಗಿ ಅಪಾಯಕಾರಿಯಾದ ಸ್ಟಂಟ್ ಮಾಡುತ್ತಿರುವ ವಿಡಿಯೊ ಈ ಹಿಂದೆ ಹಲವು ಬಾರೀ ಸೋಶಿಯಲ್ ಮೀಡಿಯಾಗಳಲ್ಲಿ ಅಪ್‍ಲೋಡ್‍ ಆಗಿದೆ. ಕೆಲ ದಿನಗಳ ಹಿಂದೆ ಒಬ್ಬ ಯುವಕ ಎರಡು ಕಾರುಗಳ ಮೇಲೆ ತನ್ನ ಒಂದೊಂದು ಕಾಲುಗಳನ್ನು ಇಟ್ಟು ಸ್ಟಂಟ್ ಮಾಡಿದ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದನು.  ಇದು ವೈರಲ್ ಆಗಿದೆ. ಇದನ್ನು ನೋಡಿದ ಪೊಲೀಸರು ಆತನನ್ನು ಬಂಧಿಸಿ ಜೈಲಿಗೆ ಹಾಕಿದ್ದಾರೆ. ವೈರಲ್ ಆಗಿರುವ ವಿಡಿಯೊದಲ್ಲಿ ‘ಫೂಲ್ ಔರ್ ಕಾಂಟೆ’ (1991)ಚಿತ್ರದಲ್ಲಿ ನಟ ಅಜಯ್ ದೇವಗನ್ ಮಾಡಿದ ಸಾಹಸವನ್ನು ಮರುಸೃಷ್ಟಿಸಲು ಆತ ಪ್ರಯತ್ನಿಸಿದ್ದ.