Saturday, 23rd November 2024

Deepavali Vastu Tips: ವಾಸ್ತು ಪ್ರಕಾರ ಮನೆಯೊಳಗಿನ ದೀಪಾವಳಿ ಅಲಂಕಾರ ಹೀಗಿರಬೇಕು

Vastu Tips

ಮನೆಮನೆಗೂ ಸಮೃದ್ಧಿ, ಸಂತೋಷವನ್ನು ತರುವ ಹಬ್ಬ ದೀಪಾವಳಿ (deepavali). ಕುಟುಂಬ ಸದಸ್ಯರೆಲ್ಲ ಒಟ್ಟುಗೂಡಿ ಆಚರಿಸುವ ಈ ಹಬ್ಬದ ವೇಳೆ ನಡೆಸುವ ಸಿದ್ದತೆಯಲ್ಲಿ ಕೆಲವೊಂದು ವಾಸ್ತು ನಿಯಮಗಳನ್ನು (Deepavali Vastu Tips) ಅನುಸರಿಸುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ (Positive energy) ಹರಿವನ್ನು ಹೆಚ್ಚಿಸಬಹುದು, ಸಂಪತ್ತನ್ನು ಆಕರ್ಷಿಸಬಹುದು.

ಜೀವನದಲ್ಲಿ ಶಾಂತಿ, ಸಾಮರಸ್ಯ, ಯಶಸ್ಸನ್ನು ಉತ್ತೇಜಿಸಲು ಮನೆಯ ಅಲಂಕಾರದಲ್ಲೂ ಕೆಲವೊಂದು ನಿಯಮಗಳನ್ನು ಪಾಲಿಸುವುದು ಬಹುಮುಖ್ಯ ಎನ್ನುತ್ತದೆ ವಾಸ್ತು ಶಾಸ್ತ್ರ. ಈ ಬಾರಿಯ ದೀಪಾವಳಿಯಲ್ಲಿ ಸಮೃದ್ಧಿಯನ್ನು ಮನೆಗೆ ಸ್ವಾಗತಿಸಲು ಸಹಾಯ ಐದು ಸರಳ ಮತ್ತು ಶಕ್ತಿಯುತವಾದ ವಾಸ್ತು ಸ್ನೇಹಿ ಅಲಂಕಾರಗಳಿಗೆ ಸಲಹೆಗಳು ಇಲ್ಲಿವೆ.

ಪ್ರವೇಶ ದ್ವಾರದ ಅಲಂಕಾರ

ಮನೆಯ ಪ್ರವೇಶ ದ್ವಾರವು ಸಮೃದ್ಧಿಯ ಪ್ರವೇಶಕ್ಕೆ ಗೇಟ್‌ವೇ ಆಗಿದೆ. ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿಯನ್ನು ಸ್ವಾಗತಿಸುವುದನ್ನು ಸಂಕೇತಿಸುವ ಮನೆಯ ಮುಖ್ಯ ಬಾಗಿಲು ಸ್ವಚ್ಛವಾಗಿರಿಸಿ, ಚೆನ್ನಾಗಿ ಅಲಂಕರಿಸಿ ಮತ್ತು ದೀಪಗಳಿಂದ ಬೆಳಗಿಸಿ. ಧನಾತ್ಮಕ ಶಕ್ತಿಯನ್ನು ಆಹ್ವಾನಿಸಲು ಪ್ರವೇಶ ದ್ವಾರದಲ್ಲಿ ರಂಗೋಲಿ ಹಾಕಿ, ತೋರಣವನ್ನು ಕಟ್ಟಿ ಮತ್ತು ತಾಜಾ ಹೂವುಗಳಿಂದ ಅಲಂಕರಿಸಿ. ವಾಸ್ತು ಪ್ರಕಾರ ಮನೆಯ ಬಾಗಿಲ ಬಳಿ ಜೋಡಿ ಆನೆ ಅಥವಾ ಕುದುರೆಗಳನ್ನು ಇಡುವುದರಿಂದ ಆರ್ಥಿಕ ಬೆಳವಣಿಗೆಯಾಗುತ್ತದೆ.

Vastu Tips

ಚಿನ್ನ, ಕೆಂಪು ಬಣ್ಣಕ್ಕಿರಲಿ ಆದ್ಯತೆ

ಮನೆಯ ಅಲಂಕಾರದಲ್ಲಿ ಚಿನ್ನ ಮತ್ತು ಕೆಂಪು ಬಣ್ಣಗಳನ್ನು ಬಳಸಿ. ಚಿನ್ನ ಮತ್ತು ಕೆಂಪು ಬಣ್ಣ ವಾಸ್ತು ಶಾಸ್ತ್ರದಲ್ಲಿ ಮಂಗಳಕರ ಬಣ್ಣಗಳೆಂದು ಪರಿಗಣಿಸಲಾಗಿದೆ. ಸಂಪತ್ತು ಮತ್ತು ಶಕ್ತಿಯನ್ನು ಇದು ಪ್ರತಿನಿಧಿಸುತ್ತದೆ. ಪರದೆ, ಗೋಡೆಯ ಮೇಲೆ ತೂಗು ಹಾಕುವ ಅಲಂಕಾರಿಕ ವಸ್ತುಗಳಲ್ಲಿ ಈ ಬಣ್ಣಗಳನ್ನೇ ಆಯ್ದುಕೊಳ್ಳಿ. ಲಿವಿಂಗ್ ರೂಮ್ ನಲ್ಲಿ ದೀಪ ಅಥವಾ ಪ್ರತಿಮೆಗಳಂತಹ ಚಿನ್ನದ ಪರಿಕರಗಳನ್ನು ಸೇರಿಸುವುದರಿಂದ ಮನೆಯಲ್ಲಿ ಸಮೃದ್ಧಿಯ ಶಕ್ತಿಯ ಹರಿವನ್ನು ಹೆಚ್ಚಿಸಬಹುದು.

ದೀಪಗಳನ್ನು ಸರಿಯಾಗಿ ಇರಿಸಿ

ದೀಪಗಳನ್ನು ಬೆಳಗಿಸದೆ ದೀಪಾವಳಿಯು ಅಪೂರ್ಣವಾಗಿರುತ್ತದೆ. ಇದು ಕತ್ತಲೆ ಮತ್ತು ಅಜ್ಞಾನದ ನಿವಾರಣೆಯನ್ನು ಸೂಚಿಸುತ್ತದೆ. ವಾಸ್ತು ಪ್ರಕಾರ ಮನೆಯ ಉತ್ತರ, ಪೂರ್ವ ಮತ್ತು ಈಶಾನ್ಯ ಮೂಲೆಗಳಲ್ಲಿ ದೀವಟಿಗೆಗಳನ್ನು ಇಡುವುದು ಅದೃಷ್ಟವನ್ನು ಆಹ್ವಾನಿಸುತ್ತದೆ. ಮುಖ್ಯದ್ವಾರದ ಬಳಿ ದೀಪವನ್ನು ಹಚ್ಚುವುದರಿಂದ ಧನಾತ್ಮಕ ಶಕ್ತಿಯೂ ಮನೆಗೆ ಬರುತ್ತದೆ. ಸಮತೋಲಿತ ಶಕ್ತಿಯ ಹರಿವನ್ನು ಕಾಪಾಡಿಕೊಳ್ಳಲು ಮನೆಯ ಉದ್ದಕ್ಕೂ ಬೆಳಕು ಸಮನಾಗಿರುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಹಣದ ಪ್ರದೇಶ ಸ್ವಚ್ಛವಾಗಿರಲಿ

ಮನೆಯ ಈಶಾನ್ಯ ಮೂಲೆಯನ್ನು ವಾಸ್ತು ಶಾಸ್ತದಲ್ಲಿ ಸಂಪತ್ತಿನ ಮೂಲೆ ಎಂದು ಪರಿಗಣಿಸಲಾಗಿದೆ. ಈ ಪ್ರದೇಶವನ್ನು ಸ್ವಚ್ಛವಾಗಿ, ವ್ಯವಸ್ಥಿತವಾಗಿ ಮತ್ತು ಗೊಂದಲ ಮುಕ್ತವಾಗಿ ಇರಿಸಿ. ಆರ್ಥಿಕ ಬೆಳವಣಿಗೆ ಮತ್ತು ಸಮೃದ್ಧಿಯನ್ನು ಸಂಕೇತಿಸಲು ಇಲ್ಲಿ ಸಣ್ಣ ನೀರಿನ ಕಾರಂಜಿ ಅಥವಾ ಒಳಾಂಗಣ ಸಸ್ಯವನ್ನು ಇರಿಸಬಹುದು. ಈಶಾನ್ಯದಲ್ಲಿ ಭಾರವಾದ ಪೀಠೋಪಕರಣಗಳನ್ನು ತಪ್ಪಿಸಿ. ಯಾಕೆಂದರೆ ಇದು ಧನಾತ್ಮಕ ಶಕ್ತಿಯ ಹರಿವನ್ನು ನಿರ್ಬಂಧಿಸುತ್ತದೆ.

Vastu Tips

Deepavali Vastu Tips: ದೀಪಾವಳಿ ಪೂಜೆ ಸಂದರ್ಭದಲ್ಲಿ ಈ ವಾಸ್ತು ನಿಯಮ ಪಾಲಿಸಿ

ತಾಜಾ ಹೂವುಗಳಿಂದ ಅಲಂಕರಿಸಿ

ತಾಜಾ ಹೂವು, ನೀರು ಮತ್ತು ಹಸಿರು ಸಸ್ಯಗಳಿಂದ ಮನೆಯನ್ನು ಅಲಂಕರಿಸಿ. ಇದು ಮನೆಗೆ ಚೈತನ್ಯ ಮತ್ತು ಸಮೃದ್ಧಿಯನ್ನು ಆಹ್ವಾನಿಸುತ್ತದೆ. ಮಾರಿಗೋಲ್ಡ್ ಅಥವಾ ಚೆಂಡು ಹೂವುಗಳು ವಿಶೇಷವಾಗಿ ದೀಪಾವಳಿಯ ಸಮಯದಲ್ಲಿ ಅಲಂಕಾರಕ್ಕೆ ಸೂಕ್ತವಾಗಿದೆ. ಮನೆಗೆ ಅದೃಷ್ಟವನ್ನು ಆಹ್ವಾನಿಸಲು ಮನಿ ಪ್ಲಾಂಟ್‌ಗಳು ಅಥವಾ ಬಿದಿರಿನಂತಹ ಸಣ್ಣ ಮಡಕೆ ಸಸ್ಯಗಳನ್ನು ಲಿವಿಂಗ್ ರೂಮಿನಲ್ಲಿ ಇರಿಸಬಹುದು. ಇದರ ಗರಿಷ್ಠ ಪ್ರಯೋಜನಕ್ಕಾಗಿ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಇರಿಸಿ