ತುಮಕೂರು: ಬೈಕ್ ಕಳವು ಮಾಡುತ್ತಿದ್ದ (Theft Case) ಆರೋಪಿಯನ್ನು ಕ್ಯಾತ್ಸಂದ್ರ ಠಾಣೆಯ ಪೊಲೀಸರು ಬಂಧಿಸಿ, ಆತನಿಂದ 21 ಲಕ್ಷ ರೂ. ಮೌಲ್ಯದ 42 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿರುವ ಘಟನೆ ಜರುಗಿದೆ. ಶಿಡ್ಲಘಟ್ಟದ ಮುಬಾರಕ್ ಖಾನ್ (53) ಬಂಧಿತ ಆರೋಪಿ.
ಕ್ಯಾತ್ಸಂದ್ರ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳವು ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿದ್ದ ಹಿನ್ನೆಲೆಯಲ್ಲಿ ಈ ಸಂಬಂಧ ವಿಶೇಷ ತಂಡ ರಚನೆ ಮಾಡಲಾಗಿತ್ತು. ತಂಡದ ಅಧಿಕಾರಿಗಳಾದ ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಪಿಎಸ್‌ಐ ಮತ್ತು ಸಿಬ್ಬಂದಿ ಅ.16 ರಂದು ಕಾರ್ಯಾಚರಣೆ ನಡೆಸುವಾಗ ಆರೋಪಿ ಕಳವು ಮಾಡಿದ್ದ ಬೈಕ್ ಸಮೇತ ಸಿಕ್ಕಿಬಿದ್ದಿದ್ದಾನೆ.
ಈ ಸುದ್ದಿಯನ್ನೂ ಓದಿ | Karnataka Rain: ನಾಳೆ ಬೆಂಗಳೂರು, ತುಮಕೂರು ಸೇರಿ ಹಲವೆಡೆ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ
ಈತನ ಮೇಲೆ ಕ್ಯಾತ್ಸಂದ್ರ ಪೊಲೀಸ್ ಠಾಣೆಯ-2, ತುಮಕೂರು ನಗರ ಪೊಲೀಸ್ ಠಾಣೆಯ-3, ಶ್ರೀನಿವಾಸಪುರ ಠಾಣೆಯ-2, ಆಂಧ್ರಪ್ರದೇಶದ ಕುಪ್ಪಂ ಪೊಲೀಸ್ ಠಾಣೆಯ-1, ರಾಬರ್ಟ್ ಸನ್ ಪೇಟೆ ಪೊಲೀಸ್ ಠಾಣೆಯ-1, ಯಲಹಂಕ ಪೊಲೀಸ್ ಠಾಣೆಯ-1, ಬಾಗೇಪಲ್ಲಿ ಪೊಲೀಸ್ ಠಾಣೆಯ-1, ಪಾವಗಡ ಪೊಲೀಸ್ ಠಾಣೆಯ-1, ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯ-1, ನೆಲಮಂಗಲ ಪೊಲೀಸ್ ಠಾಣೆಯ-1 ಮತ್ತು ಬೆಂಗಳೂರು ರೈಲ್ವೆ ಪೊಲೀಸ್ ಠಾಣೆಯ-1 ಮತ್ತು ಇತರೆ ಪ್ರಕರಣಗಳು ದಾಖಲಾಗಿವೆ. 21,60,511 ರೂ. ಬೆಲೆ ಬಾಳುವ 42 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.