Friday, 22nd November 2024

BBK 11: ತ್ರಿವಿಕ್ರಮ್ ಎಲ್ಲ ಸ್ಪರ್ಧಿಗಳ ಇನ್​ಸ್ಟಾ ಅಕೌಂಟ್ ನೋಡಿ ಬಂದಿದ್ದರು: ಬಿಗ್ ಬಾಸ್ ಮನೆಯೊಳಗೆ ಶಾಕಿಂಗ್ ಸ್ಟೇಟ್ಮೆಂಟ್

Trivikram and Mokshitha

ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ (Bigg Boss Kannada 11) ಈವರೆಗೆ ಸೈಲೆಂಟ್ ಆಗಿದ್ದ ಸ್ಪರ್ಧಿ ಎಂದರೆ ಅದು ಮೋಕ್ಷಿತಾ ಪೈ: ತಾವಾಯಿತು, ತಮ್ಮ ಕೆಲಸ ಆಯಿತು ಎಂದು ತಮ್ಮದೇ ಝೋನ್​ನಲ್ಲಿದ್ದ ಮೋಕ್ಷಿತಾ ಕಳೆದ ವಾರ ನಾಮಿನೇಟ್ ಆಗಿ ಮನೆಯಿಂದ ಹೊರ ಹೋಗುವುದರಿಂದ ಸ್ವಲ್ಪದರಲ್ಲೇ ಪಾರಾದರು. ಸೇಫ್ ಆಗಿ ಮನೆಯೊಳಗೆ ಬಂದ ತಕ್ಷಣ ಮೋಕ್ಷಿತಾ ಅವರ ಮತ್ತೊಂದು ಮುಖ ಅನಾವರಣಗೊಂಡಿದೆ. ಈ ವರೆಗೆ ಸೈಲೆಂಡ್ ಆಗಿದ್ದ ಮೋಕ್ಷಿತಾ ಇದೀಗ ವೈಲೆಂಟ್ ಆಗಿದ್ದಾರೆ. ಇದಕ್ಕೆಲ್ಲ ಕಾರಣವಾಗಿದ್ದು ತ್ರಿವಿಕ್ರಮ್ ನೀಡಿದ ಸ್ಟೇಟ್ಮೆಂಟ್.

ಇವರೆಲ್ಲ 10 ವಾರ ಮಾತ್ರ ಇರೋದು ಎಂದು ಹೇಳಿದ್ದ ತ್ರಿವಿಕ್ರಮ್​ಗೆ ಮೋಕ್ಷಿತಾ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ಗಲಾಟೆಯ ಮಧ್ಯೆ ಬೇರೆ ವಿಷಯಗಳು ಕೂಡ ಬಹಿರಂಗ ಆಗಿವೆ. ಮೋಕ್ಷಿತಾ ಪೈ 10 ವಾರ ಇರ್ತಾರೆ ಅಷ್ಟೇ ಎಂದು ಉಗ್ರಂ ಮಂಜು ಬಳಿ ತ್ರಿವಿಕ್ರಮ್ ಹೇಳಿದ್ದರು. ಅದನ್ನ ಮೋಕ್ಷಿತಾ ಪೈ ಹಾಗೂ ಗೌತಮಿ ಜಾಧವ್ ಬಳಿ ಮಂಜು ಹೇಳಿಬಿಟ್ಟಿದ್ದಾರೆ. ಇಲ್ಲಿಂದ ಬೆಂಕಿ ಹತ್ತಿಕೊಂಡಿದೆ.

ಈ ಗಲಾಟೆ ಮಧ್ಯೆ ಮೋಕ್ಷಿತಾ ಅವರು ಎಲ್ಲ ವಿಚಾರ ಬಾಯಿಬಿಟ್ಟಿದ್ದಾರೆ. ಈ ಶೋಗೆ ಬರುವ ಮುನ್ನವೇ ತ್ರಿವಿಕ್ರಮ್​ಗೆ ಬಿಗ್ ಬಾಸ್ ಮನೆಯೊಳಗೆ ಬರುವ ಸ್ಪರ್ಧಿಗಳ ಲಿಸ್ಟ್ ಸಿಕ್ಕಿತ್ತಂತೆ. ಅವರು ಎಲ್ಲ ಇನ್​ಸ್ಟಾಗ್ರಾಮ್ ಅಕೌಂಟ್ ನೋಡಿ, ಅವರಿಗೆ ಎಷ್ಟೆಲ್ಲ ಫಾಲೋವರ್ಸ್ ಇದ್ದಾರೆಂದು ತಿಳಿದು ಒಳಗೆ ಬಂದಿದ್ದಾರಂತೆ ಎಂದು ಮೋಕ್ಷಿತಾ ಹೇಳಿದ್ದಾರೆ. ಈ ವಿಚಾರ ಇದೀಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಕೆಲ ದಿನಗಳ ಹಿಂದೆ, ಈ ಬಾರಿ ಯಾರೆಲ್ಲ ಬಿಗ್ ಬಾಸ್​ಗೆ ಬರುತ್ತಾರೆ ಎಂಬುದು ಗೊತ್ತಾಗ ನಂತರವೇ ನಾನು ಇಲ್ಲಿಗೆ ಬರಲು ಒಪ್ಪಿದ್ದು ಎಂಬರ್ಥದಲ್ಲಿ ತ್ರಿವಿಕ್ರಮ್ ಮಾತನಾಡಿದ್ದರು. ಆಗ ಲಿಸ್ಟ್ ನಿಮಗೆ ಮೊದಲೇ ಗೊತ್ತಿತ್ತಾ ಎಂದು ಮೋಕ್ಷಿತಾ ಹಾಗೂ ಗೌತಮಿ ಅವರು ಮರುಪ್ರಶ್ನೆ ಮಾಡಿದ್ದರು. ನಾನು ತಿಳಿದುಕೊಂಡೇ ಬಂದಿದ್ದು ಎಂದು ತ್ರಿವಿಕ್ರಮ್ ಹೇಳಿದ್ದಾರೆ. ಹಾಗಾದ್ರೆ ಲಿಸ್ಟ್ ಮೊದಲೇ ಕೊಡ್ತೀರಾ ಬಿಗ್ ಬಾಸ್? ಎಂದು ಬಿಗ್ ಬಾಸ್​ಗೆ ಇನ್ನುಳಿದವರು ಪ್ರಶ್ನೆ ಮಾಡಿದ್ದಾರೆ.

ತ್ರಿವಿಕ್ರಮ್ ಆಡಿದ ಮಾತು ಇದೀಗ ಸಂಚಲನ ಮೂಡಿಸಿದೆ. ವೀಕೆಂಡ್​ನಲ್ಲಿ ಕಿಚ್ಚ ಸುದೀಪ್ ಈ ಬಗ್ಗೆ ಪ್ರಶ್ನೆ ಮಾಡುವುದು ಖಚಿತ. ಬಿಗ್ ಬಾಸ್ ಮೇಲೆ ಆರೋಪ ಬಂದಿರುವ ಕಾರಣ ಸುದೀಪ್ ಅವರು ಈ ಸೂಕ್ಷ್ಮ ವಿಚಾರವನ್ನು ಪರಿಶೀಲಿಸಿ ಸ್ಪಷ್ಟತೆ ಕೂಡ ನೀಡಬೇಕಾಗಿದೆ.

BBK 11: ಇನ್ಮೇಲೆ ನಮ್ಮ ಆಟ ಶುರು: ಬಿಗ್ ಬಾಸ್ ಮನೆಯಲ್ಲಿ ಭರ್ಜರಿ ಆಗಿ ನಡೆಯುತ್ತಿದೆ ಗೇಮ್ ಪ್ಲಾನ್