ನವದೆಹಲಿ: ಪ್ರಧಾನಿ ನರೇಂದ್ರ ಮೋದಿ(PM Narendra Modi) ನಿನ್ನೆ ವಡೋದರಾದಲ್ಲಿ ನಡೆದ ರೋಡ್‌ಶೋ(Road Show) ವೇಳೆ ವಿಶೇಷ ನಡೆ ಮೂಲಕ ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ವಡೋದರಾದಲ್ಲಿ ಅಕ್ಟೋಬರ್ 28, ಸೋಮವಾರ ನರೇಂದ್ರ ಮೋದಿ ಮತ್ತು ಸ್ಪೇನ್ ಪ್ರಧಾನಿ ಪೆಡ್ರೋ ಸಾಂಚೆಜ್ ರೋಡ್‌ಶೋ ನಡೆಸಿದರು. ಈ ವೇಳೆ ರಸ್ತೆಯ ಬದಿಯಲ್ಲಿ ವ್ಹೀಲ್ಚೇರ್ನಲ್ಲಿ ಕೂತಿದ್ದ ವಿಶೇಷ ಚೇತನ ಮಹಿಳೆಯೊಬ್ಬರನ್ನು ಕಂಡು ಮೋದಿ ಅವರು ಕಾರಿನಿಂದ ಕೆಳಗಿಳಿದು ಹೋಗಿ ಮಾತನಾಡಿಸಿದ ಘಟನೆ ನಡೆಯಿತು.
PM Modi Stops Convoy To Bless Specially-Abled Girl Who Gifted Him A Portrait #DNAVideos | #PMModi | #Viral pic.twitter.com/xt1vdVul9I
— DNA (@dna) October 28, 2024
ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಸರಳ ವ್ಯಕ್ತಿತ್ವಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಂದೆಡೆ ವ್ಹೀಲ್ಚೇರ್ನಲ್ಲಿ ಕೂತಿದ್ದ ವಿಶೇಷ ಚೇತನ ಮಹಿಳೆಯೊಬ್ಬರನ್ನು ಕಂಡ ಪ್ರಧಾನಿ ಮೋದಿ, ತಮ್ಮ ಮೆರವಣಿಗೆ ವಾಹನದಿಂದ ಕೆಳಗಿಳಿದು ಹೋಗಿ ಆ ಮಹಿಳೆಯನ್ನು ಮಾತನಾಡಿಸಿದ ಘಟನೆ ನಡೆಯಿತು. ಸ್ಪೇನ್ ಪ್ರಧಾನಿಯೂ ಕೆಳಗಿಳಿದು ಬಂದು ಮಹಿಳೆಯನ್ನು ಮಾತನಾಡಿಸಿದರು. ಈ ವೇಳೆ ಆ ಮಹಿಳೆ ಭಾವುಕರಾಗಿದ್ದು ಕಂಡು ಬಂದಿತು.
ಸ್ಪೇನ್ ಪ್ರಧಾನಿ ಪೆಡ್ರೋ ಸಾಂಚೆಜ್ ಅವರ ಜೊತೆ ನರೇಂದ್ರ ಮೋದಿ ಇಂದು ಸೋಮವಾರ ರೋಡ್‌ಶೋ ನಡೆಸಿದರು. ವಡೋದರಾ ಏರ್ಪೋರ್ಟ್ನಿಂದ ಆರಂಭವಾದ ರೋಡ್ ಶೋ ಟಾಟಾ ಏರ್ಕ್ರಾಫ್ಟ್ ಕಾಂಪ್ಲೆಕ್ಸ್ ಸ್ಥಳದವರೆಗೆ ಎರಡೂವರೆ ಕಿಮೀ ದೂರ ಸಾಗಿತು. ಮಾರ್ಗದುದ್ದಕ್ಕೂ ಸಾಕಷ್ಟು ಸಂಖ್ಯೆಯಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ನೆರೆದ ಜನರು ಪ್ರಧಾನಿಗೆ ಶುಭ ಹಾರೈಸಿದರು.
ಇದಕ್ಕೂ ಮೊದಲು ಗುಜರಾತ್ನ ವಡೋದರಾದಲ್ಲಿ ಭಾರತದ ಮೊದಲ ಖಾಸಗಿ ಯುದ್ಧ ವಿಮಾನ ತಯಾರಿಕೆಯ ಘಟಕಕ್ಕೆ ಸ್ಪೇನ್ ಪ್ರಧಾನಿ ಪೆಡ್ರೋ ಸಾಂಚೆಜ್ ಮತ್ತು ಭಾರತದ ನರೇಂದ್ರ ಮೋದಿ ಚಾಲನೆ ನೀಡಿದರು. ಟಾಟಾ ಏರ್ಕ್ರಾಫ್ಟ್ ಕಾಂಪ್ಲೆಕ್ಸ್ನಲ್ಲಿರುವ ಸಿ-295 ವಿಮಾನ ತಯಾರಿಕೆಯ ಘಟಕ ಇದಾಗಿದೆ. ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ನ ಕ್ಯಾಂಪಸ್ನಲ್ಲಿರುವ ಈ ಘಟಕದಲ್ಲಿ ಸ್ಪೇನ್ ಮೂಲದ ವಿಮಾನ ತಯಾರಿಕೆಯ ಸಂಸ್ಥೆ ಏರ್‌ಬಸ್ ಸಹಯೋಗದಲ್ಲಿ ಸಿ-295 ಮಿಲಿಟರಿ ವಿಮಾನಗಳನ್ನು ತಯಾರಿಸಲಾಗುತ್ತದೆ. ಈ ಯೋಜನೆಯಲ್ಲಿ 56 ವಿಮಾನಗಳ ತಯಾರಿಕೆಗೆ ಒಪ್ಪಂದವಾಗಿದೆ. ವಡೋದರಾದಲ್ಲಿ ಒಟ್ಟು 40 ಮಿಲಿಟರಿ ವಿಮಾನಗಳನ್ನು ನಿರ್ಮಿಸಿದರೆ, ಏರ್‌ಬಸ್ 16 ವಿಮಾನಗಳನ್ನು ನೇರವಾಗಿ ತಲುಪಿಸಲಿದೆ ಎಂದು ಮೂಲಗಳು ತಿಳಿಸಿವೆ.
ಈ ಸುದ್ದಿಯನ್ನೂ ಓದಿ: Narendra Modi: ಇಂದು ಜಗತ್ತೇ ಭಾರತದ ಮಾತನ್ನು ಅಲಿಸುತ್ತಿದೆ; ಪ್ರಧಾನಿ ಮೋದಿ ಬಣ್ಣನೆ