ಕ್ಯಾನ್ಬೆರಾ: ಸುಮಾರು ಹತ್ತು ವರ್ಷಗಳ ಹಿಂದೆ ಕರ್ನಾಟಕ ಮೂಲದ ಸಾಫ್ಟ್ ವೇರ್ ಎಂಜಿನಿಯರ್ ಪ್ರಭ ಅರುಣ್ ಕುಮಾರ್ ಅವರ ಹತ್ಯೆಯ(Techie Murder Case)ಪ್ರಕರಣ ಬಗೆಹರಿಯದ ಹಿನ್ನೆಲೆ ಹಂತಕನ ಸುಳಿವು ನೀಡಿದರೆ 1 ಮಿಲಿಯನ್ ಡಾಲರ್(8.40ಕೋಟಿ ರೂ.) ಬಹುಮಾನ ನೀಡುವುದಾಗಿ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ಸರ್ಕಾರ ಘೋಷಣೆ ಮಾಡಿದೆ. ಈ ದುರ್ಘಟನೆ ಸಂಭವಿಸಿ ಒಂದು ದಶಕಗಳೇ ಕಳೆದಿದ್ದು, ಇನ್ನು ಕೂಡ ಪ್ರಕರಣ ಬಗೆಹರಿಯದ ಹಿನ್ನಲೆ ಹಂತಕನ ಪತ್ತೆ ಸಹಾಯ ಮಾಡುವ ವ್ಯಕ್ತಿಗೆ ಬಹುಮಾನ ನೀಡುವುದಾಗಿ ಸರ್ಕಾರ ಘೋಷಿಸಿದೆ.
ಏನಿದು ಘಟನೆ?
2015 ಮಾರ್ಚ್ 7 ರಂದು ಪ್ರಭಾ (41) ಅವರು ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ವೇಳೆ ಸಿಡ್ನಿಯ ಪಶ್ಚಿಮದಲ್ಲಿನ ಪರಮಟ್ಟ ಪಾರ್ಕ್ನಲ್ಲಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಘಟನೆಯಾಗಿ 10 ವರ್ಷಗಳೇ ಕಳೆಯುತ್ತಾ ಬಂದರೂ, ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೇ ಒಂದು ಸುಳಿವು ಸಿಕ್ಕಿಲ್ಲ. ಪ್ರಕರಣವನ್ನು ಭೇದಿಸಲು ಆಸ್ಟ್ರೇಲಿಯಾ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಈ ಪ್ರಕರಣದ ತನಿಖೆಗೆ ಪೊಲೀಸರು ವಿಶೇಷ ತಂಡವನ್ನು ರಚಿಸಲಾಗಿತ್ತು. ಅನೇಕ ರೀತಿಯಲ್ಲಿ ತನಿಖೆಯನ್ನು ನಡೆಸಲಾಗುತ್ತಿತ್ತು. ಜೊತೆಗೆ ತನಿಖೆಗೆ ಸಾರ್ವಜನಿಕರ ನೆರವನ್ನು ಕೂಡ ಕೋರಲಾಗಿತ್ತು. ಆದರೆ ಪ್ರಕರಣದಲ್ಲಿ ಯಾವುದೇ ಸುಳಿವು ಸಿಗದ ಹಿನ್ನಲೆ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಈ ಪ್ರಕರಣವನ್ನು ಬಗೆಹರಿಸಲು ಸಹಾಯ ಮಾಡುವ ವ್ಯಕ್ತಿಗೆ 1ಮಿಲಿಯನ್ ಡಾಲರ್ ಬಹುಮಾನವನ್ನು ನೀಡುವುದಾಗಿ ಆಸ್ಟ್ರೇಲಿಯಾ ಸರ್ಕಾರ ಘೋಷಿಸಿದೆ.
ಚಿತ್ರದುರ್ಗದಲ್ಲಿ ದಂಪತಿ ಹತ್ಯೆ; ಎಸ್ಕೇಪ್ ಆಗಿದ್ದ ಅಳಿಯ ತೆಲಂಗಾಣದಲ್ಲಿ ಸೆರೆ
ಚಿತ್ರದುರ್ಗದ (chitradurga news) ಬೊಮ್ಮಕ್ಕನಹಳ್ಳಿಯಲ್ಲಿ 38 ದಿನಗಳ ಹಿಂದೆ ನಡೆದಿದ್ದ ದಂಪತಿಯ ಹತ್ಯೆ (Double Murder Case) ಪ್ರಕರಣವನ್ನು ಭೇದಿಸಿರುವ ಪೊಲೀಸರು, ಪ್ರಮುಖ ಆರೋಪಿ, ದಂಪತಿಯ ಅಳಿಯ ಮಂಜುನಾಥ್ನನ್ನು ತೆಲಂಗಾಣದಲ್ಲಿ ಬಂಧಿಸಿದ್ದಾರೆ. ಈತ, ಪೊಲೀಸರು ತನ್ನ ಟ್ರ್ಯಾಕ್ ಹಿಡಿಯಬಾರದು ಎಂದು ಮೊಬೈಲ್ ಎಸೆದು ಪರಾರಿಯಾಗಿದ್ದ.
ಹನುಮಂತಪ್ಪ ಮತ್ತು ತಿಪ್ಪಮ್ಮ ಕೊಲೆಯಾದ ದಂಪತಿ. ದಂಪತಿಯ ಕೊಲೆಯಾಗಿ ಬರೋಬ್ಬರಿ 38 ದಿನಗಳೇ ಕಳೆದಿವೆ. ತುರುವನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಸೆ.19ರ ಸಂಜೆ ಜಮೀನಿಗೆ ಹೋಗಿದ್ದ ಹನುಮಂತಪ್ಪ-ತಿಪ್ಪಮ್ಮ ದಂಪತಿಯನ್ನು ಭೀಕರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಆರಂಭದಲ್ಲಿ ಯಾವುದೋ ಕಾಡು ಪ್ರಾಣಿಯ ದಾಳಿ ಎಂದು ಅಂದಾಜಿಸಲಾಗಿತ್ತು. ಆದರೆ ತನಿಖೆಯ ವೇಳೆ, ಹನಮಂತಪ್ಪ -ತಿಪ್ಪಮ್ಮ ದಂಪತಿಯ ಪುತ್ರಿ ಹರ್ಷಿತಾಳ ಪತಿ ಮಂಜುನಾಥ್ ನಾಪತ್ತೆಯಾದುದು ಗೊತ್ತಾಯಿತು.
ಹರ್ಷಿತಾ ತನ್ನ ಪತಿಯ ಜತೆ ಜಗಳ ಮಾಡಿಕೊಂಡು ಬಂದು ತವರು ಸೇರಿದ್ದಳು. ಇದೇ ದ್ವೇಷದಿಂದ ಮಂಜುನಾಥ್ ಮತ್ತು ಇತರರು ಸೇರಿ ಹತ್ಯೆ ಮಾಡಿದ್ದುದು ಗೊತ್ತಾಗಿತ್ತು. ಕೊಲೆಯಲ್ಲಿ ಭಾಗಿಯಾಗಿದ್ದ ಮಂಜುನಾಥ್ನ ಸಹೋದರ ರಘು, ತಂದೆ ಚಂದ್ರಪ್ಪ, ಸಂಬಂಧಿ ಮಲ್ಲಿಕಾರ್ಜುನನನ್ನು ಪೊಲೀಸರು ಘಟನೆ ನಡೆದ ಮರುದಿನವೇ ಬಂಧಿಸಿದ್ದರು. ಆದರೆ ಚಾಲಾಕಿ ಮಂಜುನಾಥ್ ಮಾತ್ರ ನಾಪತ್ತೆ ಆಗಿದ್ದ.
ಏರ್ಟೆಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಮೊಬೈಲ್ ಟ್ರ್ಯಾಕಿಂಗ್ ಬಗ್ಗೆ ತಿಳಿದುಕೊಂಡಿದ್ದ. ಹೀಗಾಗಿ, ದೃಶ್ಯಂ ಫಿಲಂನಂತೆ ತನ್ನ ಮೊಬೈಲ್ ಎಸೆದು ತೆಲಂಗಾಣಕ್ಕೆ ಎಸ್ಕೇಪ್ ಆಗಿದ್ದ. ಹೀಗಾಗಿ ಪೊಲೀಸರಿಗೆ ಆರೋಪಿಯ ಪತ್ತೆ ಹಚ್ಚುವುದು ಸವಾಲಾಗಿ ಪರಿಣಮಿಸಿತ್ತು. ಎಸ್ಪಿ ರಂಜಿತ್ ಬಂಡಾರು ಮೂರು ತಂಡ ರಚಿಸಿ ಆರೋಪಿ ಬಂಧನಕ್ಕೆ ಬಲೆ ಬೀಸಿದ್ದರು.
ಈ ಸುದ್ದಿಯನ್ನೂ ಓದಿ: Ajekaru Murder Case: ವಿಷವುಣಿಸಿ ಗಂಡನ ಕೊಲೆ ಮಾಡಿದ ರೀಲ್ಸ್ ರಾಣಿಯ ಬಾಯಿ ಬಿಡಿಸಿತು ದೈವ!