Friday, 22nd November 2024

ANR National Awards 2024: ಸೂಪರ್‌ ಸ್ಟಾರ್‌ ಚಿರಂಜೀವಿಗೆ ANR ರಾಷ್ಟ್ರೀಯ ಪ್ರಶಸ್ತಿ ಪ್ರದಾನ

chinaranjeevi

ಹೈದರಾಬಾದ್‌: ದಕ್ಷಿಣ ಭಾರತದ ‍ಹಿರಿಯ ಸ್ಟಾರ್‌ ನಟ ಚಿರಂಜೀವಿ(Chiranjeevi) ಅವರಿಗೆ ಸೋಮವಾರ ಹೈದರಾಬಾದ್‌ನಲ್ಲಿ ಪ್ರತಿಷ್ಠಿತ ಅಕ್ಕಿನೇನಿ ನಾಗೇಶ್ವರ ರಾವ್ (ANR) ರಾಷ್ಟ್ರೀಯ ಪ್ರಶಸ್ತಿ(ANR National Awards 2024)ಯನ್ನು ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಯನ್ನು ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಸನ್ಮಾನಿಸಿದರು. ಅಕ್ಕಿನೇನಿ ಇಂಟರ್‌ನ್ಯಾಶನಲ್ ಫೌಂಡೇಶನ್ 2005 ರಲ್ಲಿ ಭಾರತೀಯ ಚಿತ್ರರಂಗಕ್ಕೆ ಅವರ ಅತ್ಯುತ್ತಮ ಕೊಡುಗೆಗಳಿಗಾಗಿ ಕಲಾವಿದರನ್ನು ಗುರುತಿಸಲು ಪ್ರಶಸ್ತಿಯನ್ನು ಸ್ಥಾಪಿಸಿತು.

ತೆಲುಗು ಚಿತ್ರರಂಗದ ದಂತಕಥೆ ಮತ್ತು ನಟ ನಾಗಾರ್ಜುನ ಅವರ ತಂದೆ ಅಕ್ಕಿನೇನಿ ನಾಗೇಶ್ವರ ರಾವ್ ಅವರ 100ನೇ ಜನ್ಮದಿನಾಚರಣೆ ಹಿನ್ನೆಲೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಕಾರ್ಯಕ್ರಮದ ವೀಡಿಯೊದಲ್ಲಿ ಅಮಿತಾಬ್ ಬಚ್ಚನ್ ಚಿರಂಜೀವಿಯವರಿಗೆ ಟ್ರೋಫಿ ಮತ್ತು ಶಾಲು ಹೊದಿಸಿ ಗೌರವಿಸಿದ್ದಾರೆ. ಗೌರವ ಸ್ವೀಕರಿಸುವ ವೇಳೆ ಭಾವುಕರಾದ ಚಿರಂಜೀವಿ ಅವರು ಅಮಿತಾಬ್‌ ಬಚ್ಚನ್‌ ಅವರ ಪಾದ ಮುಟ್ಟಿ ನಮಸ್ಕರಿಸಿದರು. ಪ್ರಶಸ್ತಿ ಸ್ವೀಕರಿಸಿದ ನಂತರ ಚಿರಂಜೀವಿ ಅವರು ನಾಗಾರ್ಜುನ ಅಕ್ಕಿನೇನಿ ಮತ್ತು ಅಮಿತಾಬ್ ಬಚ್ಚನ್ ಅವರೊಂದಿಗೆ ಫೋಟೋಗೆ ಪೋಸ್ ನೀಡಿದರು.

ನಾಗಾರ್ಜುನ ಅವರು ಆಯೋಜಿಸಿದ್ದ ಎಎನ್‌ಆರ್ ರಾಷ್ಟ್ರೀಯ ಪ್ರಶಸ್ತಿ ಸಮಾರಂಭದಲ್ಲಿ ತೆಲುಗು ಚಿತ್ರರಂಗದ ಹಲವಾರು ಪ್ರಮುಖರು ಭಾಗವಹಿಸಿದ್ದರು. ನಾನಿ, ಬ್ರಹ್ಮಾನಂದಂ, ರಾಮ್ ಚರಣ್, ಪ್ರಕಾಶ್ ರಾಜ್, ರಮ್ಯಾ ಕೃಷ್ಣನ್ ಮತ್ತು ಇನ್ನೂ ಅನೇಕ ನಟರು ANR ಅವರ 100 ನೇ ಜನ್ಮ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಇನ್ನು ನಾಗ ಚೈತನ್ಯ ಮತ್ತು ಅವರ ಭಾವಿ ಪತ್ನಿ ಶೋಭಿತಾ ಧೂಳಿಪಾಲ ಕೂಡ ಉಪಸ್ಥಿತರಿದ್ದರು.

ಈ ತಿಂಗಳ ಆರಂಭದಲ್ಲಿ, ನಾಗಾರ್ಜುನ ಅವರು X (ಹಿಂದೆ ಟ್ವಿಟರ್) ನಲ್ಲಿ ವಾರ್ಷಿಕ ANR ರಾಷ್ಟ್ರೀಯ ಪ್ರಶಸ್ತಿ ಕಾರ್ಯಕ್ರಮವನ್ನು ಘೋಷಿಸಿದರು. “ನಾವು ನನ್ನ ತಂದೆ ANR ಅವರ 100 ನೇ ಜನ್ಮ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಈ ವರ್ಷವು ವಿಶೇಷವಾಗಿದೆ! ಈ ಮೈಲಿಗಲ್ಲು ಗುರುತಿಸಲು ANR ಪ್ರಶಸ್ತಿ 2024 ಪ್ರದಾನ ಕಾರ್ಯಕ್ರಮಕ್ಕೆ ಅಮಿತಾಬ್‌ ಬಚ್ಚನ್ ಮತ್ತು ಮೆಗಾಸ್ಟಾರ್‌ ಚಿರಂಜೀವಿ ಅವರನ್ನು ಆಹ್ವಾನಿಸಲು ಗೌರವವಾಗಿದೆ! ಈ ಪ್ರಶಸ್ತಿ ಸಮಾರಂಭವನ್ನು ಮರೆಯಲಾಗದಂತೆ ಮಾಡೋಣ.

ANR ರಾಷ್ಟ್ರೀಯ ಪ್ರಶಸ್ತಿಗಳನ್ನು ಕೊನೆಯ ಬಾರಿಗೆ ಶ್ರೀದೇವಿ ಮತ್ತು ರೇಖಾ ಅವರಿಗೆ ನವೆಂಬರ್ 2019 ರಲ್ಲಿ ನಡೆದ ಸಮಾರಂಭದಲ್ಲಿ ನೀಡಿ ಗೌರವಿಸಲಾಯಿತು. ಅದಕ್ಕೂ ಮೊದಲು, ಅಮಿತಾಬ್ ಬಚ್ಚನ್, ಲತಾ ಮಂಗೇಶ್ಕರ್, SS ರಾಜಮೌಳಿ, ಹೇಮಾ ಮಾಲಿನಿ, ಶ್ಯಾಮ್ ಬೆನಗಲ್, ಶ್ರೀದೇವಿ ಬಿ ಕಪೂರ್, ಶಬಾನಾ ಅಜ್ಮಿ, ಅಂಜಲಿ ದೇವಿ , ವೈಜಯಂತಿಮಾಲಾ ಬಾಲಿ ಮತ್ತು ಕೆ ಬಾಲಚಂದರ್ ಅವರಿಗೂ ಈ ಪ್ರಶಸ್ತಿ ಲಭಿಸಿದೆ. ದಿವಂಗತ ಬಾಲಿವುಡ್ ನಟ-ಚಲನಚಿತ್ರ ನಿರ್ಮಾಪಕ ದೇವ್ ಆನಂದ್ ಅವರು ANR ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದ ಮೊದಲ ವ್ಯಕ್ತಿ.

ಈ ಸುದ್ದಿಯನ್ನೂ ಓದಿ: Mirzapur The Film: ಸಿನಿಮಾವಾಗಿ ತೆರೆಗೆ ಬರಲು ʼಮಿರ್ಜಾಪುರʼ ಸೀರಿಸ್‌ ರೆಡಿ; ಯಾವಾಗ ರಿಲೀಸ್‌?