Sunday, 24th November 2024

Viral Video: ಎಂಜಲು ಸಿಡಿಸಿ ರೊಟ್ಟಿ ಮಾಡಿ ಬಡಿಸಿದ ಇರ್ಷಾದ್‌ ಬಂಧನ; ಹೋಟೆಲ್ ಬಂದ್‌!

Viral Video

ಉತ್ತರಪ್ರದೇಶ: ಪೇಟೆಗೆ ಹೋದಾಗ ಅಥವಾ ಅನಿವಾರ್ಯ ಪರಿಸ್ಥಿತಿಯಲ್ಲಿ ಹೋಟೆಲ್‌ನಲ್ಲಿ ಊಟ ತಿಂಡಿ ಮಾಡಬೇಕಾಗುತ್ತದೆ. ಆದರೆ ಕೆಲವು ಕಡೆ ಹೋಟೆಲ್‌ನಲ್ಲಿ ಕೆಲಸ ಮಾಡುವವರು ಮಾಡುವ ತಪ್ಪುಗಳಿಂದ ಎಲ್ಲಾ ಹೋಟೆಲ್‌ನಲ್ಲೂ ಅನುಮಾನಿಸುವ ಹಾಗೇ ಆಗುತ್ತದೆ. ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ಹೋಟೆಲ್‌ವೊಂದರಲ್ಲಿ ರೊಟ್ಟಿ ಬೇಯಿಸುವವನು ರೊಟ್ಟಿಯ ಮೇಲೆ ಎಂಜಲು ಉಗಿದ ವಿಡಿಯೊವೊಂದು ಎಲ್ಲೆಡೆ ವೈರಲ್‌(Viral Video) ಆಗಿದೆ.

ತಿನ್ನುವ ಆಹಾರಕ್ಕೆ ಎಂಜಲು ಉಗಿದ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಆ ಹೋಟೆಲ್ ಅನ್ನು ಮುಚ್ಚಲಾಗಿದೆ ಎಂದು ಪೊಲೀಸರು  ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, ರಾಮನಗರ ಪೊಲೀಸ್ ಠಾಣೆ ಪ್ರದೇಶದ ಸುಧಿಯಾಮೌ ಪಟ್ಟಣದ ಹೋಟೆಲ್‍ವೊಂದರ ವಿಡಿಯೊ ವೈರಲ್ ಆಗಿದ್ದು, ಅದರಲ್ಲಿ ವ್ಯಕ್ತಿಯು ತನ್ನ ಎಂಜಲನ್ನು ಹಚ್ಚಿ ರೊಟ್ಟಿಗಳನ್ನು ಬೇಯಿಸುತ್ತಿರುವುದು ಕಂಡುಬಂದಿದೆ. ಎಂಜಲು ಉಗಿದ ಆರೋಪಿಯ ಹೆಸರು ಇರ್ಷಾದ್ ಎಂದು ಗುರುತಿಸಲಾಗಿದ್ದು, ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಸದ್ಯಕ್ಕೆ ಈ ಹೋಟೆಲ್ ಅನ್ನು ಮುಚ್ಚಲಾಗಿದೆ. ತನಿಖೆಯ ಫಲಿತಾಂಶಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಇತ್ತೀಚೆಗೆ, ಸಹರಾನ್ಪುರ ಮತ್ತು ಬಾಗ್ಪತ್ ಸೇರಿದಂತೆ ಉತ್ತರ ಪ್ರದೇಶದ ಇತರ ಜಿಲ್ಲೆಗಳಲ್ಲಿ ಇದೇ ರೀತಿಯ ಘಟನೆಗಳು ವರದಿಯಾಗಿವೆ. ಇಂತಹ ಕ್ರಮಗಳನ್ನು ಜಾಮೀನು ರಹಿತ ಅಪರಾಧವ ಎಂದು ಕರೆದು ಕಠಿಣ ಶಿಕ್ಷೆ ವಿಧಿಸುವ ಕಾನೂನನ್ನು ರೂಪಿಸಲು ರಾಜ್ಯ ಸರ್ಕಾರ ಪ್ರಸ್ತಾಪಿಸಿದೆ ಎನ್ನಲಾಗಿದೆ.

ಇದನ್ನೂ ಓದಿ:ಮಗನ ಅಪಾಯಕಾರಿ ಸ್ಟಂಟ್‌ಗೆ ಸಿಟ್ಟಿಗೆದ್ದು ದೊಣ್ಣೆಯೇಟು ಕೊಟ್ಟ ಅಮ್ಮ!

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರವು ಆಹಾರದಲ್ಲಿ ಉಗುಳುವ ಅಥವಾ ಉಗುಳುವ ಆಹಾರವನ್ನು ಜನರಿಗೆ ಬಡಿಸುವ ಘಟನೆಗಳ ಬಗ್ಗೆ ಕಠಿಣ ಕ್ರಮವನ್ನು ತೆಗೆದುಕೊಳ್ಳಲು ಪ್ರಮುಖ ಸಭೆ ನಡೆಸಿತ್ತು.  ಸಿಎಂ ಯೋಗಿ ಸರ್ಕಾರವು ‘ಉಗುಳುವಿಕೆ ನಿಷೇಧ ಸುಗ್ರೀವಾಜ್ಞೆ 2024′ ಮತ್ತು ‘ಯುಪಿ ಆಹಾರದಲ್ಲಿ ಮಾಲಿನ್ಯ ತಡೆಗಟ್ಟುವಿಕೆ (ತಿಳಿದುಕೊಳ್ಳುವ ಗ್ರಾಹಕರ ಹಕ್ಕು) ಸುಗ್ರೀವಾಜ್ಞೆ 2024’ ಅನ್ನು ತರಲು ಸಜ್ಜಾಗಿದೆ. ಮುಖ್ಯಮಂತ್ರಿ ಯೋಗಿ ಅವರು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ದೀಪಕ್ ಕುಮಾರ್, ಗೃಹ ಇಲಾಖೆ ಆಶಿಶ್ ಸಿಂಗ್, ಗೃಹ ಕಾರ್ಯದರ್ಶಿ ಸಂಜೀವ್ ಗುಪ್ತಾ ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಈ ಬಗ್ಗೆ ಸಭೆ ನಡೆಸಿದ್ದಾರೆ ಎನ್ನಲಾಗಿದೆ.