Thursday, 21st November 2024

Kalaburagi Breaking: ಚಿಮ್ಮಚೋಡ ಗ್ರಾಮದ ರೈತನ 40 ಸಾವಿರ ಮೌಲ್ಯದ ಕರೆಂಟ್ ಸೋಲಾರ ಕಳ್ಳತನ

ಚಿಂಚೋಳಿ: ತಾಲೂಕಿನ ಚಿಮ್ಮನಚೋಡ್ ಗ್ರಾಮದ ರಿಯಾಜ್ ದುಂಬಾಳ್ಳಿ ರೈತನ ಹೊಲದಲ್ಲಿ ಅಳವಡಿಸಿ ಕೊಂಡು ಹಾಕಿರುವ ಕರೆಂಟ್ ಸೋಲಾರ್ ಬ್ಯಾಟರಿ ಕಳವು ಮಾಡಲಾಗಿದೆ.

ಇದೇ ಗ್ರಾಮದಲ್ಲಿ ಹಿಂದೆ ಕೂಡ ರೈತರ ಪಂಪ್ ಸೆಟ್ ಮತ್ತು ರೈತರ ಇತರೆ ಕೃಷಿಗೆ ಸಂಬಂಧಿಸಿದ ಪರಿಕರಗಳು ಕಳತನವಾಗಿರುವ ಕುರಿತು ಚಿಂಚೋಳಿ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿ ಗಮನಕ್ಕೆ ತರಲಾಗಿತ್ತು. ಆದರೂ ಕೂಡ ಗ್ರಾಮದಲ್ಲಿ ಕಳ್ಳತ ಪ್ರಕಾರನಗಳು ನಿಲ್ಲುತ್ತಿಲ್ಲ. ಹೀಗಾಗಿ ಠಾಣೆಗೆ ಸಲ್ಲಿಸಿದ ಮನವಿಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮದ ಮುಖಂಡ ರಾಮರೆಡ್ಡಿ ಪಾಟೀಲ್ ತಿಳಿಸಿದರು.

ಈ ಕಳ್ಳತನ ಪ್ರಕಾರದಿಂದ ಚಿಮ್ಮನಚೋಡ್ ಗ್ರಾಮದಲ್ಲಿ ಸತತ ಐದನೇ ಸಲದಾಗಿದ್ದು, ಸಂಭಂದಪಟ್ಟ ಇಲಾಖೆ ಯವರು ಬಿಟ್ ಪೊಲೀಸ್ ಗಸ್ತು ಬಿಗಿಗೊಳಿಸಿ ಗ್ರಾಮದಲ್ಲಿ ಕಳ್ಳತನ ಮಾಡುತ್ತಿರುವ ವ್ಯಕ್ತಿಗಳನ್ನು ಹಿಡಿದು ಕ್ರಮ ಜರುಗಿಸಿ ಗ್ರಾಮಸ್ಥರ ಮತ್ತು ಕೃಷಿ ರೈತರು ನೇಮದಿಯಾಗಿರುವಂತೆ ಹಾಗೂ ಕಳ್ಳತನ ವಾಗಿದ್ದ ಸುಮಾರು 40 ಸಾವಿರ ಮೌಲ್ಯದ ಕರೆಂಟ್ ಸೋಲಾರ್ ಬ್ಯಾಟರಿ ಮತ್ತು ನೀರಾವರಿ ಪಂಪ್ ಸೈಟ್ ಗಳು ಪುನಹಃ ರೈತರಿಗೆ ಸೇರುವಂತೆ ಕ್ರಮವಹಿಸಬೇಕೆಂದು ಅವರು ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Kalaburagi News: ತಾಲೂಕ ಮಟ್ಟದ ಶಿಕ್ಷಕರ ದಿನಾಚರಣೆ ಆಚರಣೆ