Sunday, 24th November 2024

Elephant Dies: ಅಪರಿಚಿತ ವಾಹನ ಡಿಕ್ಕಿ; ನರಳುತ್ತಾ ಸ್ಥಳದಲ್ಲೇ ಪ್ರಾಣ ಬಿಟ್ಟ ಮರಿಯಾನೆ

Elephant Dies

ಬೆಂಗಳೂರು: ರಸ್ತೆ ದಾಟುತ್ತಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿಯಾಗಿ ಮರಿಯಾನೆಯೊಂದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ (Elephant Dies) ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಣಿ-ಹಾರೋಹಳ್ಳಿ ಮುಖ್ಯರಸ್ತೆಯಲ್ಲಿ ನಡೆದಿದೆ.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಸೇರಿದ ಕಾಡಿನ ಮಧ್ಯೆ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಈ ಭಾಗದಲ್ಲಿ ವನ್ಯ ಜೀವಿಗಳಿವೆ ನಿಧಾನವಾಗಿ ಚಲಿಸಿ ಎಂದು ಸೂಚನಾ ಫಲಕಗಳನ್ನೂ ಹಾಕಲಾಗಿದೆ. ಆದರೂ ವೇಗವಾಗಿ ಬಂದ ವಾಹನವೊಂದು ಡಿಕ್ಕಿ ಹೊಡೆದಿದ್ದರಿಂದ ಮರಿಯಾನೆ ನರಳಾಡುತ್ತಾ ರಸ್ತೆ ಬದಿಯೇ ಪ್ರಾಣಬಿಟ್ಟಿದೆ. ಘಟನಾ ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು, ಆನೇಕಲ್ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Food Poisoning: ರಸ್ತೆ ಬದಿಯಲ್ಲಿ ಮೊಮೊಸ್‌ ಸೇವಿಸಿ ಮಹಿಳೆ ಸಾವು; 15ಕ್ಕೂ ಹೆಚ್ಚು ಮಂದಿ ಸ್ಥಿತಿ ಗಂಭೀರ

ಕಾಸರಗೋಡು ದೇವಸ್ಥಾನದ ಉತ್ಸವದಲ್ಲಿ ಪಟಾಕಿ ಅವಘಡ, 150 ಮಂದಿಗೆ ಗಾಯ

crackers accident

ಮಂಗಳೂರು: ಕೇರಳ- ಕರ್ನಾಟಕ ಗಡಿಭಾಗದ ಕಾಸರಗೋಡಿನಲ್ಲಿರುವ (Kasaragod) ದೇವಸ್ಥಾನವೊಂದರ ಉತ್ಸವದ (Temple Festival) ವೇಳೆ ನಡೆದ ಪಟಾಕಿ ಅವಘಡದಲ್ಲಿ(crackers accident) 150 ಮಂದಿಗೆ ಗಾಯವಾಗಿದ್ದು, 8 ಮಂದಿ ಗಂಭೀರವಾಗಿದ್ದಾರೆ ಎಂಬುದು ತಿಳಿದುಬಂದಿದೆ.

ನೀಲೇಶ್ವರಂನ ಅಂಜೂಟ್ಟಂಬಳಂ ವೀರರ್ ಕಾವು ತೆಯ್ಯಂ ಕಟ್ಟೆ ಮಹೋತ್ಸವದ ವೇಳೆ ಪಟಾಕಿ ಸಂಗ್ರಹ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡು 150 ಮಂದಿಗೆ ಗಾಯವಾಗಿದ್ದು, 8 ಮಂದಿ ಗಂಭೀರವಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಮೂವಳಂಕುಳಿ ಚಾಮುಂಡಿ ತೆಯ್ಯಂನ ಕುಳಿಚು ತೊಟ್ಟಂ ಆಚರಣೆಯ ವೇಳೆ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ. ಬೆಂಕಿ ಕಿಡಿ ಪಟಾಕಿಗಳಿಗೆ ಸಿಡಿದು ಎಲ್ಲವೂ ಏಕಕಾಲಕ್ಕೆ ಹೊತ್ತಿ ಸ್ಪೋಟಗೊಂಡಿದೆ ಎಂಬುದು ತಿಳಿದುಬಂದಿದೆ. ಗಾಯಾಳುಗಳನ್ನು ಕಾಞಂಗಾಡ್ ಜಿಲ್ಲಾಸ್ಪತ್ರೆ ಹಾಗೂ ನೀಲೇಶ್ವರ ಮತ್ತು ಕಾಞಂಗಾಡ್‌ನ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಈ ಪೈಕಿ ಗಂಭೀರವಾಗಿ ಗಾಯಗೊಂಡ ಮೂವರನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲವು ಮಂದಿ ಮಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: Army Accident : ಜಮ್ಮು- ಕಾಶ್ಮೀರದಲ್ಲಿ ಸೇನಾ ವಾಹನ ಅಪಘಾತ; ಯೋಧ ಸಾವು, 13 ಮಂದಿಗೆ ಗಾಯ

ಕಾಸರಗೋಡು ಸಮೀಪದ ಈ ದೇವಸ್ಥಾನ ಪ್ರಖ್ಯಾತವಾಗಿದ್ದು, ಕರ್ನಾಟಕದಿಂದಲೂ ಇಲ್ಲಿಗೆ ಭಕ್ತಾದಿಗಳು ಆಗಮಿಸುತ್ತಾರೆ.