Friday, 22nd November 2024

Bengaluru News: ಬೆಂಗಳೂರಿನಲ್ಲಿ ‘ಕ್ರೊಮ್ಯಾಟಿಕ್ ರಿದಮ್ಸ್’ ವರ್ಣಚಿತ್ರಗಳ ಪ್ರದರ್ಶನ

Bengaluru News

ಬೆಂಗಳೂರು: ಖ್ಯಾತ ಅಬ್‌ಸ್ಟ್ರಾಕ್ಟ್‌ ಕಲಾವಿದ ಪ್ರಭಾಕರ್ ಕೋಲ್ತೆ ಅವರ ವರ್ಣಚಿತ್ರಗಳ ಏಕವ್ಯಕ್ತಿ ಪ್ರದರ್ಶನ ‘ಕ್ರೊಮ್ಯಾಟಿಕ್ ರಿದಮ್ಸ್’ ನಗರದ (Bengaluru News) ‘ಗ್ಯಾಲರಿ ಜಿ’ ಯಲ್ಲಿ ಸಂದೀಪ್ ಮತ್ತು ಗೀತಾಂಜಲಿ ಮೈನಿ ಫೌಂಡೇಶನ್ ಮತ್ತು ಟ್ರೆಷರ್ ಆರ್ಟ್ ಗ್ಯಾಲರಿ ಅವರ ಸಹಯೋಗದಲ್ಲಿ ಆಯೋಜಿಸಲಾಗಿದೆ. ಈ ಪ್ರದರ್ಶನವು ನವೆಂಬರ್‌ 22 ರವರೆಗೆ ನಡೆಯಲಿದೆ.

ಇದು ಬೆಂಗಳೂರಿನಲ್ಲಿ ಪ್ರಭಾಕರ್ ಕೋಲ್ತೆಯವರ ಮೊಟ್ಟ ಮೊದಲ ಪ್ರದರ್ಶನವಾಗಿದ್ದು, ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ರವರೆಗೆ ನಡೆಯಲಿದೆ. ಪ್ರಭಾಕರ್ ಕೋಲ್ತೆ ಅವರನ್ನು “ಭಾರತದ ಪಾಲ್ ಕ್ಲೀ” ಎಂದೇ ಕರೆಯುತ್ತಾರೆ. ಅವರು ಅಷ್ಟರ ಮಟ್ಟಿಗೆ ಅಬ್‌ಸ್ಟ್ರಾಕ್ಷನ್‌ನಲ್ಲಿ ನೈಪುಣ್ಯತೆ ಹೊಂದಿದ್ದಾರೆ. ಅವರ ಕೃತಿಗಳು ಬಣ್ಣ ಮತ್ತು ವಿನ್ಯಾಸದ ರೋಮಾಂಚಕ, ಲಯಬದ್ಧ ಪದರಗಳ ಮೂಲಕ ಮಾತನಾಡುತ್ತವೆ. ಅವರ ರಚನೆಗಳು ಪ್ರಾತಿನಿಧ್ಯದ ಸೀಮೆಯನ್ನು ಮೀರುವಂಥದ್ದು ಮತ್ತು ವೀಕ್ಷಕರನ್ನು ಚಿಂತನಶೀಲ ಪ್ರಯಾಣಕ್ಕೆ ಕೊಂಡೊಯ್ಯುವಂಥದ್ದು. ಕೋಲ್ತೆ ಅವರ ವರ್ಣಚಿತ್ರಗಳಲ್ಲಿ, ಬಣ್ಣವನ್ನು ಕೇವಲ ಕ್ಯಾನ್‌ವಾಸ್‌ಗೆ ನೀಡಿಲ್ಲ. ಅವುಗಳನ್ನು ಭಾವನೆಗಳಿಂದ ತುಂಬಲಾಗಿದೆ. ಅದು ಮನಸ್ಸಿನ ನಿರಂತರ ಬದಲಾವಣೆಗಳ ಪ್ರತೀಕವಾಗಿರುತ್ತದೆ. ಬ್ರಷ್‌ನಿಂದ ಮೂಡಿಸಿದ ಪ್ರತಿಯೊಂದು ಗೆರೆಯೂ ಒಂದು ಕವಿತೆ ಅಥವಾ ಸಂಗೀತ ಸಂಯೋಜನೆಯಂತಹ ಲಯ ಹೊಂದಿರುತ್ತದೆ ಮತ್ತು ಬದಲಾಗುತ್ತಿರುವ ಮನಸ್ಥಿತಿ ಮತ್ತು ಬಣ್ಣಗಳ ದ್ಯೋತಕವಾಗಿದೆ.

ಪ್ರದರ್ಶನಕ್ಕೆ ನೀಡಲಾಗಿರುವ ‘ಕ್ರೊಮ್ಯಾಟಿಕ್ ರಿದಮ್ಸ್’ ಎಂಬ ಶೀರ್ಷಿಕೆಯು ಕಲಾಕೃತಿಗಳ ಸಾರವನ್ನು ಎತ್ತಿ ಹಿಡಿದಿದೆ . ಕೋಲ್ತೆಯವರು ನಾಜೂಕಾಗಿ ಆಯ್ಕೆ ಮಾಡಿದ ಬಣ್ಣದ ಪ್ಯಾಲೆಟ್, ಹೆಚ್ಚಾಗಿ ನೈಸರ್ಗಿಕ ಪ್ರಪಂಚದಿಂದ ಪ್ರೇರಿತವಾದದು. ಇದು ಶಕ್ತಿ ಮತ್ತು ಚಲನೆಯಿಂದ ಕೂಡಿದೆ. ಕ್ಯಾನ್‌ವಾಸ್‌ಗಳು ಕಲಾವಿದನ ಆಂತರಿಕ ಪ್ರಪಂಚದ ಧ್ಯಾನಾತ್ಮಕ ಪ್ರತಿಬಿಂಬವಾಗಿದ್ದು, ಕವಿತೆಯಂತೆ ನಿಧಾನವಾಗಿ ಬಹಿರಂಗಗೊಳ್ಳುತ್ತದೆ. ಅವರ ಅಬ್‌ಸ್ಟ್ರಾಕ್ಟ್‌ಗಳು ಚೈಕೋವ್‌ಸ್ಕಿಯ ಸೂಕ್ಷ್ಮ ಪಿಯಾನೋ ಸಂಯೋಜನೆಗಳಿಗೆ ಹೋಲುತ್ತದೆ ಹಾಗೂ ಬದಲಾಗುತ್ತಿರುವ ಋತುಗಳು ಮತ್ತು ಪ್ರಕೃತಿಯ ವಿಶಾಲತೆಯನ್ನು ಪ್ರತಿಬಿಂಬಿಸುತ್ತದೆ.

ಈ ಸುದ್ದಿಯನ್ನೂ ಓದಿ | Deepavali Fashion 2024: ದೀಪಾವಳಿ ಹಬ್ಬದ ವೈವಿಧ್ಯಮಯ ಲೆಹೆಂಗಾ ಸ್ಟೈಲಿಂಗ್‌‌‌ಗೆ ಇಲ್ಲಿದೆ 5 ಸಿಂಪಲ್‌ ಐಡಿಯಾ

ಅವರ ಅಬ್‌ಸ್ಟ್ರಾಕ್ಟ್‌ ಕೃತಿಗಳು ಆಳವಾದ ಧ್ಯಾನದ ಪ್ರಜ್ಞೆಯನ್ನು ಬಹಿರಂಗಪಡಿಸುತ್ತವೆ ಮತ್ತು ಪ್ರಕೃತಿಯ ಅನಂತ ಧ್ಯಾನಗಳನ್ನು ಕಿಟಕಿಯ ಮೂಲಕ ನೋಡುವಂತೆ ಭಾಸವಾಗುತ್ತದೆ. ದಪ್ಪ ಮತ್ತು ವಿನ್ಯಾಸದ ಬಣ್ಣದ ಪದರಗಳ ಮೂಲಕ, ಕೋಲ್ತೆಯವರು ಆಂತರಿಕ ಶಾಂತಿ ಮತ್ತು ಜೀವನದ ಕೋಲಾಹಲದ ಸಂಕೀರ್ಣತೆಗಳನ್ನು ಅನ್ವೇಷಣೆ ಮಾಡಿದ್ದಾರೆ. ಅವರು ಏಕಕಾಲದಲ್ಲಿ ಹಿತ ಮತ್ತು ಕ್ರಿಯಾತ್ಮಕ ಕೃತಿಗಳನ್ನು ರಚಿಸುತ್ತಾರೆ.