ದೇಶಾದ್ಯಂತ ದೀಪಾವಳಿ (Deepavali 2024) ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಐದು ದಿನಗಳ ಕಾಲ ಆಚರಿಸಲಾಗುತ್ತದೆ. ಸ್ನೇಹಿತರು, ಬಂಧುಗಳು, ಕುಟುಂಬ ಸದಸ್ಯರೆಲ್ಲ ಸೇರಿ ಆಚರಿಸುವ ಈ ಹಬ್ಬದ ವೇಳೆ ಮನೆಯನ್ನು ದೀಪಗಳಿಂದ ಬೆಳಗಿಸಲಾಗುತ್ತದೆ, ರಂಗೋಲಿ, ಹೂವಿನ ಅಲಂಕಾರವನ್ನು ನಡೆಸಲಾಗುತ್ತದೆ.
ದೀಪಾವಳಿಯ ಮಹತ್ವದ ಅಂಶವೆಂದರೆ ಉಡುಗೊರೆ ನೀಡುವ ಸಂಪ್ರದಾಯ. ಸಿಹಿ ತಿಂಡಿ, ಒಣ ಹಣ್ಣುಗಳನ್ನು ನೀಡುವುದು ಸಾಮಾನ್ಯ ಅಭ್ಯಾಸವಾಗಿದ್ದರೂ ನಾವು ನಮ್ಮ ಪ್ರೀತಿ ಪಾತ್ರರಿಗೆ ಏನಾದರೂ ವಿಶೇಷವಾಗಿರುವುದನ್ನು ಕೊಡಬೇಕು ಎಂದೇ ಯೋಚಿಸುತ್ತವೆ.
ದೀಪಾವಳಿ ಹಬ್ಬದ ಊಡುಗೊರೆಗಳನ್ನು ಆಯ್ಕೆ ಮಾಡುವುದು ಹೆಚ್ಚು ಕಷ್ಟದ ಕೆಲಸ. ಯಾಕೆಂದರೆ ನಾವು ನೀಡುವ ಉಡುಗೊರೆಗಳು ಅದನ್ನು ಸ್ವೀಕರಿಸುವವರಿಗೆ ಇಷ್ಟವಾಗುತ್ತದೋ ಇಲ್ಲವೋ, ಪ್ರತಿ ವರ್ಷವೂ ಬರುವ ಹಬ್ಬಕ್ಕೆ ಈ ಬಾರಿ ವಿಶೇಷವಾಗಿ ಏನು ಕೊಡುವುದು ಎನ್ನುವ ಚಿಂತೆ ಕಾಡುವುದು ಸಹಜ. ಈಗ ಈ ಚಿಂತೆ ಬಿಡಿ. ಯಾಕೆಂದರೆ ಇಲ್ಲಿದೆ ಕೆಲವು ಉಪಾಯಗಳು.
ಕಲಾತ್ಮಕತೆಯನ್ನು ಇಷ್ಟಪಡುವವರಿಗೆ ವಿವಿಧ ರೀತಿಯ ಸೃಜನಶೀಲ ವಸ್ತುಗಳನ್ನು ಉಡುಗೊರೆಯಾಗಿ ನೀಡಬಹುದು. ಇದಕ್ಕಾಗಿ ಕ್ಯಾಂಡಲ್ ಅಥವಾ ಹಣತೆ ಕಿಟ್‌ಗಳು, ರಂಗೋಲಿ ವಿನ್ಯಾಸಗಳು, ತೇಲುವ ಕ್ಯಾಂಡಲ್ ಕಿಟ್‌ಗಳನ್ನು ನೀಡಬಹುದು.
ಕಲೆಯನ್ನು ಮೆಚ್ಚುವ ಮಹಿಳೆಯರಿಗೆ ಕಸೂತಿ ಮಾಡಿದ ರೇಷ್ಮೆ ಶಿರೋವಸ್ತ್ರಗಳು, ಕರಕುಶಲ ದುಪಟ್ಟಾಗಳು, ಕೈಯಿಂದ ಚಿತ್ರಿಸಿದ ಮೊಜಾರಿಗಳು ಅಥವಾ ಮಣಿಗಳ ಪೊಟ್ಲಿ ಚೀಲಗಳನ್ನು ಉಡುಗೊರೆಯಾಗಿ ನೀಡಬಹುದು. ಇಂತಹ ಉಡುಗೊರೆಗಳು ಅವರ ಕಲಾತ್ಮಕ ಅಭಿರುಚಿಯನ್ನು ಗೌರವಿಸುತ್ತದೆ. ಇದು ಅವರಿಗೆ ಹೆಚ್ಚು ಸಂತೋಷಕೊಡುತ್ತದೆ.
ಗೃಹಾಲಂಕಾರ ಪ್ರಿಯರಿಗಾಗಿ ಮನೆಯ ಅಲಂಕಾರಕ್ಕೆ ಬಳಸುವ ಸಾಮಗ್ರಿಗಳನ್ನು ಉಡುಗೊರೆಯಾಗಿ ನೀಡಬಹುದು. ಇದರಲ್ಲಿ ಸೌಂದರ್ಯ ದೀಪಗಳು, ಆರೊಮ್ಯಾಟಿಕ್ ಕ್ಯಾಂಡಲ್‌ಗಳು, ಅಲಂಕಾರಿಕ ಮಡಕೆಗಳಲ್ಲಿನ ವಿಶೇಷ ಸಸ್ಯಗಳನ್ನು ಸೇರಿಸಬಹುದು.
ಉತ್ತಮ ಆಹಾರವನ್ನು ಇಷ್ಟಪಡುವ ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಗಾಗಿ ಸಿಹಿ ಮತ್ತು ಖಾರ ಮಿಶ್ರಿತ ಉಡುಗೊರೆ ಪ್ಯಾಕ್ ಗಳನ್ನು ನೀಡಬಹುದು. ಇದರಲ್ಲಿ ಆರೋಗ್ಯಕರ ತಿಂಡಿಗಳನ್ನು ಆಯ್ಕೆ ಮಾಡಿ. ಚಾಕೊಲೇಟ್, ಆರೋಗ್ಯಕರ ಪಾನೀಯಗಳನ್ನು ಸೇರಿಸಿ.
Sunita Williams : ಬಾಹ್ಯಾಕಾಶ ಕೇಂದ್ರದಲ್ಲಿ ದೀಪಾವಳಿ ಆಚರಿಸಿ, ಶುಭಾಶಯ ತಿಳಿಸಿದ ಸುನೀತಾ ವಿಲಿಯಮ್ಸ್
ಸಂಗೀತವನ್ನು ಇಷ್ಟ ಪಡುವವರಿಗೆ ಪೋರ್ಟಬಲ್ ಮ್ಯೂಸಿಕ್ ಪ್ಲೇಯರ್ ಅಥವಾ ಸಂಗೀತ ವಾದ್ಯವನ್ನು ಉಡುಗೊರೆಯಾಗಿ ನೀಡಬಹುದು. ಗಿಟಾರ್, ಕೊಳಲು ಅಥವಾ ಡ್ರಮ್ ಹೀಗೆ ಅವರವರ ಆಸಕ್ತಿಗೆ ಅನುಗುಣವಾಗಿ ಆಟಿಕೆ ಮಾಡಿ. ಇದು ಖಂಡಿತ ಸಂಗೀತ ಪ್ರಿಯರಿಗೆ ಇಷ್ಟವಾಗುತ್ತದೆ.