Friday, 22nd November 2024

Deepavali Nail Art 2024: ದೀಪಾವಳಿ ಹಬ್ಬಕ್ಕೆ ಟ್ರೆಂಡಿಯಾಗಿದೆ ವೈವಿಧ್ಯಮಯ ನೇಲ್‌ ಆರ್ಟ್

Deepavali Nail Art 2024

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ದೀಪಾವಳಿ ಹಬ್ಬದ ಸೀಸನ್‌ನಲ್ಲಿ ನಾನಾ ಬಗೆಯ ನೇಲ್‌ ಆರ್ಟ್ ಡಿಸೈನ್‌ಗಳು (Deepavali Nail Art 2024) ಟ್ರೆಂಡಿಯಾಗಿದ್ದು, ಅವುಗಳಲ್ಲಿ ಹಣತೆ, ಹಾಗೂ ಪಟಾಕಿಗಳ ಚಿತ್ರಗಳು ಟ್ರೆಂಡಿಯಾಗಿವೆ. ಅಂದಹಾಗೆ, ಫೆಸ್ಟಿವ್‌ ಸೀಸನ್‌ನಲ್ಲಿ ಹಬ್ಬದ ಥೀಮ್‌ಗೆ ತಕ್ಕಂತೆ ನೇಲ್‌ ಆರ್ಟ್ ಡಿಸೈನ್‌ಗಳು ಬದಲಾಗಿವೆ. ಸದ್ಯಕ್ಕೆ ಪಟಾಕಿ ಹಾಗೂ ಬಗೆಬಗೆಯ ದೀಪದ ನೇಲ್‌ ಆರ್ಟ್‌ ಡಿಸೈನ್‌ಗಳು ಟ್ರೆಂಡಿಯಾಗಿವೆ. ವೈವಿಧ್ಯಮಯ ದೀಪಗಳ ಚಿತ್ರಗಳು ಮನಸೆಳೆಯುತ್ತಿವೆ.

ಚಿತ್ರಗಳು: ಇನ್ಸ್ಟಾಗ್ರಾಮ್‌

ನೇಲ್‌ ಆರ್ಟ್‌ನಲ್ಲಿ ಪಟಾಕಿಗಳ ಕಲರ್‌ಫುಲ್‌ ಚಿತ್ರ

ನೇಲ್‌ ಆರ್ಟ್ ಡಿಸೈನ್‌ನಲ್ಲಿ ಇದೀಗ ಹೂವಿನ ಕುಂಡ, ಭೂ ಚಕ್ರ, ಸುರ್‌ಸುರ್‌ ಬತ್ತಿ, ರಾಕೆಟ್‌, ಬಿಜಿಲಿ ಪಟಾಕಿ, ಸರ ಪಟಾಕಿ, ಆಟಂ ಬಾಂಬ್‌ ಮುಂತಾದ ಪಟಾಕಿಗಳ ಚಿತ್ರಗಳು ಕಾಣಿಸಿಕೊಂಡಿವೆ.

ಆಕಾಶದಲ್ಲಿ ಹೂವಿನ ಚಿತ್ತಾರ ಮೂಡಿಸುವ ಕಲರ್‌ಫುಲ್‌ ಪಟಾಕಿ ಚಿತ್ರವಂತೂ ಯುವತಿಯರ ಕೈ ಬೆರಳುಗಳನ್ನು ಸಿಂಗರಿಸುತ್ತಿವೆ.

ನೀವೂ ನೇಲ್‌ ಆರ್ಟ್ ಡಿಸೈನರ್‌ ಆಗಬಹುದು

ದೀಪಾವಳಿ ನೇಲ್‌ ಆರ್ಟ್‌ ಡಿಸೈನ್‌ಗಳನ್ನು ನೀವೇ ಮನೆಯಲ್ಲೆ ಕುಳಿತು ಉಗುರುಗಳ ಮೇಲೆ ಮೂಡಿಸಬಹುದು. ಆಪ್ತರ ಸಹಾಯ ಪಡೆದು ಕ್ರಿಯೇಟಿವ್‌ ಥೀಮ್‌ನೊಂದಿಗೆ ಆಕರ್ಷಕವಾಗಿ ಸುಂದರವಾಗಿ ಚಿತ್ರಿಸಬಹುದು. ಇದಕ್ಕೆ ಅಗತ್ಯವಾದ ನೇಲ್‌ ಕಿಟ್‌ ಸಾಮಗ್ರಿಗಳನ್ನು ಹೊಂದಿರಬೇಕಷ್ಟೇ! ಎನ್ನುತ್ತಾರೆ ನೇಲ್‌ ಆರ್ಟ್‌ ಡಿಸೈನರ್‌ ರೀನಾ. ಚಿತ್ರಗಳನ್ನು ಬಿಡಿಸಲು ಮೊದಲೇ ಪ್ಲಾನ್‌ ಮಾಡಿಕೊಂಡು, ಯೂಟ್ಯೂಬ್‌ ಅಥವಾ ಅಂತರ್ಜಾಲದಲ್ಲಿ ನೇಲ್‌ ಡಿಸೈನ್‌ಗಳ ಚಿತ್ರಗಳನ್ನು ನೋಡಿಕೊಂಡು ಕಾಪಿ ಮಾಡಬಹುದು. ಅದರಂತೆ ಬಿಡಿಸಬಹುದು ಎನ್ನುತ್ತಾರೆ ಅವರು.

ವೈವಿಧ್ಯಮಯ ಹಣತೆಯ ನೇಲ್‌ ಆರ್ಟ್

ಈ ದೀಪಾವಳಿಯ ನೇಲ್‌ ಆರ್ಟ್‌ನಲ್ಲಿ ಸಾಲು ದೀಪ, ತೂಗು ದೀಪ ಸೇರಿದಂತೆ ವೈವಿಧ್ಯಮಯ ದೀಪಗಳ ಡಿಸೈನ್‌ಗಳು ಸೇರಿವೆ. ಇವು ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತವೆ ಎನ್ನುತ್ತಾರೆ ನೇಲ್‌ ಡಿಸೈನರ್‌ ದೀಪಾ.

ಈ ಸುದ್ದಿಯನ್ನೂ ಓದಿ | Deepavali Fashion 2024: ದೀಪಾವಳಿ ಹಬ್ಬದ ವೈವಿಧ್ಯಮಯ ಲೆಹೆಂಗಾ ಸ್ಟೈಲಿಂಗ್‌‌‌ಗೆ ಇಲ್ಲಿದೆ 5 ಸಿಂಪಲ್‌ ಐಡಿಯಾ

ದೀಪಾವಳಿ ನೇಲ್‌ ಆರ್ಟ್ ಪ್ರಿಯರಿಗೆ ಸಿಂಪಲ್‌ ಟಿಪ್ಸ್

  • ಮೊದಲೇ ಯಾವ ಬಗೆಯ ನೇಲ್‌ ಆರ್ಟ್ ಉಗುರುಗಳ ಮೂಡಿಸಬೇಕೆಂಬುದನ್ನು ಪ್ಲಾನ್‌ ಮಾಡಿ.
  • ನೇಲ್‌ ಆರ್ಟ್‌ ಡಿಸೈನ್‌ ಮಾಡುವುದಾದಲ್ಲಿ ನೇಲ್‌ ಡಿಸೈನ್‌ ಕಿಟ್‌ ಬಳಿಯಿರಲಿ.
  • ನೇಲ್‌ ಆರ್ಟ್‌ಗೆ ಮೂರಕ್ಕಿಂತ ಹೆಚ್ಚು ಬಣ್ಣ ಬಳಕೆ ಮಾಡಬೇಕು.
  • ಲೈಟ್‌ ಮತ್ತು ಡಾರ್ಕ್‌ ಬಣ್ಣಗಳ ಕಾಂಟ್ರಾಸ್ಟ್ ಇರಲಿ.
  • ನೇಲ್‌ ಆರ್ಟ್ ಡಿಸೈನ್‌ನಲ್ಲಿ, ಗ್ಲಿಟರ್‌ ಕಲರ್‌ ಹಚ್ಚಿದಲ್ಲಿ, ಗ್ರ್ಯಾಂಡ್‌ ಲುಕ್‌ ಪಡೆಯಬಹುದು.
  • ರೆಡಿ ಪ್ರೆಸ್‌ ಆನ್‌ ನೇಲ್‌ ಸಹಿತ ಬಳಸಬಹುದು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)