-ಶೀಲಾ ಸಿ. ಶೆಟ್ಟಿ, ಬೆಂಗಳೂರು
ತೀರಾ ಟ್ರೆಡಿಷನಲ್ ಲುಕ್ ಬೇಡ! ಹಬ್ಬದ (Deepavali Fashion) ಲುಕ್ ಬೇಕು! ಹೆಚ್ಚು ಮೇಕೋವರ್ ಇಲ್ಲದೇ ಅಂದವಾಗಿ ಕಾಣಿಸಬೇಕು ಎನ್ನುವ ಯುವತಿಯರು ಯಾವ್ಯಾವ ಬಗೆಯ ಸ್ಟೈಲಿಂಗ್ ಟಿಪ್ಸ್ ಫಾಲೋ ಮಾಡಬೇಕು? ಯಾವ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು? ಎಂಬುದರ ಬಗ್ಗೆ ಮಯ್ರಾ ಕಾಟರ್‌ನ ಸೆಲೆಬ್ರೆಟಿ ಫ್ಯಾಷನ್ ಡಿಸೈನರ್ & ಫ್ಯಾಷನ್ ಇನ್ಫ್ಲೂಯೆನ್ಸರ್ ರಜಿನಿ ಪದ್ಮಶಾಲಿ ತಿಳಿಸಿದ್ದಾರೆ.
ಟ್ರೆಂಡಿ ಡಿಸೈನರ್ವೇರ್ ಆಯ್ಕೆ ಮಾಡಿ
ಹಬ್ಬದಂದು ಧರಿಸಲು ಟ್ರೆಂಡಿ ಡಿಸೈನರ್ವೇರ್ ಆಯ್ಕೆ ಮಾಡಿ. ಅದು ಲೆಹಂಗಾ ಆಗಬಹುದು, ಲಂಗ-ದಾವಣಿ, ಶರಾರ, ಕ್ರಾಪ್ ಗಾಗ್ರಾ ಆಗಬಹುದು. ಡಿಸೈನರ್ ಗೌನ್ ಆಗಬಹುದು. ಚಾಲ್ತಿಯಲ್ಲಿರುವ ಡಿಸೈನ್ನದ್ದನ್ನು ನಿಮ್ಮ ಬಾಡಿಟೈಪ್ಗೆ ತಕ್ಕಂತೆ ಮ್ಯಾಚ್ ಮಾಡಿ. ಖರೀದಿಸಿ, ಧರಿಸಿ.
ಸ್ಕಿನ್ ಟೋನ್‌ಗೆ ತಕ್ಕಂತೆ ಮೇಕಪ್
ಮೇಕಪ್ ನೀವು ಧರಿಸುವ ಡಿಸೈನರ್‌ವೇರ್‌ಗೆ ಹೊಂದುವಂತಿರಬೇಕು. ಟ್ರೆಡಿಷನಲ್ ಆಗಿಯೇ ಇರಬೇಕೆಂದಿಲ್ಲ! ಸದ್ಯಕ್ಕೆ ಸ್ಮೋಕಿ ಐಸ್, ಗೋಲ್ಡನ್ ಐ ಮೇಕಪ್, ಪ್ಲಂಪ್-ಪೌಟ್ ಲಿಪ್ಸ್ ಲುಕ್ ಹಾಗೂ ವೈಲ್ಡ್ ಮೇಕಪ್ ಲುಕ್‌ಗಳನ್ನು ಮರೆತು ಬಿಡಿ. ಮುಖದ ಸೌಮ್ಯತನ ಹೆಚ್ಚಿಸುವಂತಹ ಮೇಕಪ್ ಲುಕ್ ಆಯ್ಕೆ ಮಾಡಿ. ಹಬ್ಬದ ಲುಕ್‌ಗಾಗಿ ಬೇಕಿದ್ದಲ್ಲಿ, ಕಣ್ಣಿಗೆ ಕಾಡಿಗೆ, ಐ ಲೈನರ್ ಹಾಗೂ ಐಬ್ರೋ ತೀಡಿ. ಸ್ಕಿನ್ ಟೋನ್‌ಗೆ ಹೊಂದುವ ಲಿಪ್ಸ್ಟಿಕ್ ಹಚ್ಚಿ. ಅಗತ್ಯವಿದ್ದಲ್ಲಿ, ಹಣೆಗೆ ಹೊಂದುವ ಬಿಂದಿ ಇರಿಸಿ. ಇದು ಇಡೀ ಲುಕ್ಕನ್ನು ಕಂಪ್ಲೀಟ್ ಮಾಡುವುದು.
ಹೇರ್ ಸ್ಟೈಲ್ ಹೀಗಿರಲಿ
ಹೇರ್ ಸ್ಟೈಲ್ ಕೂಡ ನೀವು ಧರಿಸುವ ಡಿಸೈನರ್‌ವೇರ್‌ಗೆ ಹೊಂದಬೇಕು. ಅದಕ್ಕೆ ತಕ್ಕಂತೆ ನೀವು ಬಗೆಬಗೆಯ ಹೇರ್ ಸ್ಟೈಲ್ ಮಾಡಿಕೊಳ್ಳಬಹುದು. ಮೆಸ್ಸಿ ಜಡೆ, ಮೆಸ್ಸಿ ಬನ್ ಇಲ್ಲವೇ ಹನ್ ಹೇರ್ ಸ್ಟೈಲ್ ಇಂಡೋ-ವೆಸ್ಟರ್ನ್ ಡಿಸೈನರ್‌ವೇರ್‌ಗಳಿಗೆ ಹೊಂದುತ್ತದೆ. ಫ್ರಿ ಹೇರ್ ಸ್ಟೈಲ್ ಕೂಡ ನ್ಯಾಚುರಲ್ ಆಗಿ ಕಾಣಿಸುತ್ತದೆ.
ಫ್ಯಾಷನ್ ಜ್ಯುವೆಲರಿ ಮ್ಯಾಚ್ ಮಾಡಿ
ನೀವು ಧರಿಸುವ ಡಿಸೈನರ್‌ವೇರ್‌ಗೆ ತಕ್ಕಂತೆ ಜ್ಯುವೆಲರಿ ಮ್ಯಾಚ್ ಮಾಡಿ. ಟ್ರೆಡಿಷನಲ್ ಡ್ರೆಸ್‌ಗಾದಲ್ಲಿ ಅದಕ್ಕೆ ಹೊಂದುವ ಆಂಟಿಕ್, ಟ್ರೆಡಿಷನಲ್ ಜ್ಯುವೆಲರಿ ಧರಿಸಿ. ಇಂಡೋ-ವೆಸ್ಟರ್ನ್ ಡ್ರೆಸ್‌ಗಾದಲ್ಲಿ ಫ್ಯಾಷನ್ ಜ್ಯುವೆಲರಿ ಧರಿಸಿ.
ಈ ಸುದ್ದಿಯನ್ನೂ ಓದಿ | Deepavali Nail Art 2024: ದೀಪಾವಳಿ ಹಬ್ಬಕ್ಕೆ ಟ್ರೆಂಡಿಯಾಗಿದೆ ವೈವಿಧ್ಯಮಯ ನೇಲ್ ಆರ್ಟ್
ಶಿಮ್ಮರ್ ಫುಟ್‌ವೇರ್ ಆಯ್ಕೆ
ಇನ್ನು, ಇಡೀ ಉಡುಗೆಗೆ ಹೊಂದುವಂತಹ ಕ್ರಿಸ್ಟಲ್ ಅಥವಾ ಶಿಮ್ಮರ್ ಇರುವಂತಹ ಗೋಲ್ಡ್ ಅಥವಾ ಸಿಲ್ವರ್ ಶೆಡ್ ಫುಟ್‌ವೇರ್ ಆಯ್ಕೆ ಮಾಡಿ, ಧರಿಸಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)