Wednesday, 30th October 2024

BBK 11: ನಾನು ಕೆಲವೊಂದು ಚಟಗಳಿಗೆ ಬಿದ್ದಿದ್ದೆ: ಬಿಗ್ ಬಾಸ್ ಮುಂದೆ ಎಲ್ಲವನ್ನೂ ಹೇಳಿದ ಉಗ್ರಂ ಮಂಜು

Ugramm Manju

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಐದನೇ ವಾರಕ್ಕೆ ಕಾಲಿಟ್ಟಿದೆ. ಹಿಂದಿನ ನಾಲ್ಕೂ ವಾರಗಳಲ್ಲಿ ಮನೆ ನಗು-ಅಳುವಿಗಿಂತ ಹೆಚ್ಚು ಜಗಳಗಳನ್ನೇ ಕಂಡಿದೆ. ಪ್ರತಿ ದಿನ ಮನೆಯಲ್ಲಿ ಒಂದಲ್ಲ ಒಂದು ವಿಚಾರಕ್ಕೆ ಜಗಳ ನಡೆಯುತ್ತಲೇ ಇತ್ತು. ಕಳೆದ ವಾರ ಸಿಂಗರ್ ಹನುಮಂತ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಬಳಿಕ ಮನೆ ಮಂದಿ ಕೊಂಚ ನಗುತ್ತಿದ್ದಾರೆ. ಆದರೆ, ಈ ವಾರ ಮನೆ ಕೊಂಚ ಎಮೋಷನಲ್ ಆದಂತಿದೆ. ಇದಕ್ಕೆ ಬಿಗ್ ಬಾಸ್ ನೀಡಿದ ಒಂದು ಚಟುವಟಿಕೆ ಕಾರಣ.

ಇಷ್ಟು ದಿನ ಜೋರು ಗಲಾಟೆಯಿಂದ ಕೂಗಾಡುತ್ತಿದ್ದ ಸ್ಪರ್ಧಿಗಳಿಗೆ ಮನಸ್ಸಿನ ಭಾರವನ್ನು ಇಳಿಸಲು ಬಿಗ್ ಬಾಸ್ ಒಂದು ಅವಕಾಶ ನೀಡಿದ್ದರು. ಎಲ್ಲ ಸ್ಪರ್ಧಿಗಳು ಕನ್ಫೆಷನ್ ರೂಮ್ ಒಳಗೆ ತೆರಳಿ ತಮ್ಮ ಜೀವನದಲ್ಲಿ ಆದ ಕಷ್ಟಗಳ ಬಗ್ಗೆ ಮನಬಿಚ್ಚಿ ಮಾತನಾಡಲು ಬಿಗ್ ಬಾಸ್ ಹೇಳಿದ್ದರು. ಅದರಂತೆ ಉಗ್ರಂ ಮಂಜು ಮಾತನಾಡುವಾಗ ತುಂಬಾ ಬಾವುಕರಾಗಿದ್ದಾರೆ.

ಮಂಜು ಅವರು ನಿಮ್ಮ ಜೀವನದಲ್ಲಿ ಆದ ಕಹಿ ಘಟನೆ ಬಗ್ಗೆ, ಅದರಲ್ಲೂ ಯಾರ ಮುಂದಿಯೂ ಇಲ್ಲಿಯವರೆಗೆ ಹಂಚಿಕೊಳ್ಳದ ಒಂದು ವಿಚಾರವನ್ನು ಹೇಳಿದ್ದಾರೆ. ನಾನು ಊಟ ಮಾಡಿದೀಯಾ, ಚೆನ್ನಾಗಿದ್ದೀಯಾ ಅಂತ ಹೇಳೋರು, ಕೇಳುವವರು ಯಾರು ಇರಲಿಲ್ಲ. ಇಲ್ಲಿಗೆ ಬರುವ ಮುನ್ನ ಕೆಲವು ಚಟಗಳಿಗೆ ಬಿದ್ದಿದ್ದೆ. ಆದರೆ, ಈಗ ನಾನು ಬದಲಾಗಿದ್ದೀನಿ. ನನ್ನ ತಂಗಿಯರು, ಅಪ್ಪ-ಅಮ್ಮನನ್ನು ಇನ್ನುಂದೆ ಚೆನ್ನಾಗಿ ನೋಡಿಕೊಳ್ಳುತ್ತೇನೆ. ಇದು ಬಿಗ್ ಬಾಸ್​ ಮುಂದೆ ನಾನು ಮಾಡುತ್ತಿರುವ ಪ್ರಾಮಿಸ್ ಎಂದು ಹೇಳಿದ್ದಾರೆ.

ಇನ್ನು ಚೈತ್ರಾ ಕುಂದಾಪುರ ಅವರು, ನಾನು ಒಂದು ವರ್ಷ ಯಾರದ್ದೋ ಮನೆಯಲ್ಲಿ ಮುಸುರೆ ತಿಕ್ಕುತ್ತಿದ್ದೆ, ನಾನು ಬೇರೆಯವರ ಮನೆಯಲ್ಲಿ ಮನೆ ಕೆಲಸ ಮಾಡ್ತಾ ಇದ್ದೇ ಎಂದು ಹೇಳಿ ಅತ್ತಿದ್ದಾರೆ. ಐಶ್ವರ್ಯ ಅವರು ಅಳುತ್ತಾ, ನಮ್ಮ ತಾಯಿ ಹಾಸಿಗೆ ಹಿಡಿದಿದ್ದರು. ಆಗ ಸಂಬಂಧಿಕರು ನಮ್ಮ ಅಮ್ಮನ ತಲೆ ತುಂಬುತ್ತಿದ್ದರು. ನಾನು ಅಮ್ಮನ ಮೇಲೆ ತುಂಬ ಕಿರುಚಾಡಿದೆ. ಮಾತನಾಡಿಸಿ ಕೆಲವು ದಿನ ಆದ ಮೇಲೆ ಅವರು ನನ್ನ ಜೊತೆ ಇರಲ್ಲ ಎಂದು ಅತ್ತಿದ್ದಾರೆ.

BBK 11: ಆ ಒಂದು ಮಾತು ಹೇಳಿ ಸಂಕಷ್ಟಕ್ಕೆ ಸಿಲುಕಿಕೊಂಡ ತ್ರಿವಿಕ್ರಮ್: ವೀಕೆಂಡ್ ಕಿಚ್ಚನ ಕ್ಲಾಸ್ ಖಚಿತ