Wednesday, 30th October 2024

Special Trains: ದೀಪಾವಳಿ ಹಬ್ಬಕ್ಕೆ ಈ ಊರಿಗೆ ವಿಶೇಷ ರೈಲು ಸಂಚಾರ

Indian Railways

ಉಡುಪಿ: ದೀಪಾವಳಿ (Deepavali 2024) ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಅ. 30ರಂದು ಬೆಂಗಳೂರು-ಕಾರವಾರ ವಿಶೇಷ ರೈಲು ಸಂಚಾರವನ್ನು ಈಗಾಗಲೇ ಘೋಷಿಸಿದ್ದ ಕೊಂಕಣ ರೈಲ್ವೇ ಇದೀಗ ನ. 3ರಂದು ಇನ್ನೊಂದು ವಿಶೇಷ ರೈಲು (Special Trains) ಬಿಡಲಿದೆ.

ನ. 3ರಂದು ಕಾರವಾರದಿಂದ ರೈಲು (01686) ಮಧ್ಯಾಹ್ನ 12ಕ್ಕೆ ಹೊರಟು ಮಾರನೆ ದಿನ ಬೆಳಗ್ಗೆ 4ಕ್ಕೆ ಬೆಂಗಳೂರು (Bengaluru news) ತಲುಪಲಿದೆ. ಈ ರೈಲಿಗೆ ಚಿಕ್ಕಬಾಣಾವರ, ಕುಣಿಗಲ್‌, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್‌, ಕಬಕ ಪುತ್ತೂರು, ಬಂಟ್ವಾಳ, ಸುರತ್ಕಲ್‌, ಮೂಲ್ಕಿ, ಉಡುಪಿ, ಬಾರಕೂರು, ಕುಂದಾಪುರ,ಮೂಕಾಂಬಿಕಾ (ಬೈಂದೂರು), ಭಟ್ಕಳ, ಮುರುಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್‌ ಹಾಗೂ ಅಂಕೋಲಾ ಸ್ಟೇಷನ್‌ನಲ್ಲಿ ನಿಲುಗಡೆ ಇರಲಿದೆ.

ಬೆಂಗಳೂರಿನ ಸರ್‌ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ನ. 4ರ ಬೆಳಗ್ಗೆ 6ಕ್ಕೆ ರೈಲು (01685) ಮಡಗಾಂವ್‌ಗೆ ಹುಬ್ಬಳ್ಳಿ ಧಾರವಾಡ ಮಾರ್ಗವಾಗಿ ರೈಲು ಸಂಚರಿಸಲಿದೆ ಎಂದು ಕೊಂಕಣ ರೈಲ್ವೇ ಪ್ರಕಟನೆ ತಿಳಿಸಿದೆ.

ಇದನ್ನೂ ಓದಿ: Deepavali Special Trains : ಪ್ರಯಾಣಿಕರೇ ಗಮನಿಸಿ, ದೀಪಾವಳಿ ಹಿನ್ನೆಲೆಯಲ್ಲಿ ಸಂಚರಿಸುವ ವಿಶೇಷ ರೈಲುಗಳ ವಿವರ ಇಲ್ಲಿದೆ