Wednesday, 30th October 2024

Deepavali 2024: ನರಕ ಚತುರ್ದಶಿಯ ಮಹತ್ವವೇನು, ಆಚರಣೆ ಹೇಗೆ?

Deepavali 2024

ಬೆಳಕಿನ ಹಬ್ಬ ದೀಪಾವಳಿಯ (Deepavali 2024) ಆಚರಣೆಗೆ ವಿಶ್ವವೇ ಈಗ ಸಜ್ಜಾಗಿದೆ. ಮನೆಮನೆಯಲ್ಲೂ ವಿದ್ಯುತ್ ದೀಪಗಳ ಅಲಂಕಾರ, ಸ್ನೇಹಿತರು, ಬಂಧುಗಳೊಂದಿಗೆ ವಿನಿಮಯ ಮಾಡಿಕೊಳ್ಳಲು ಉಡುಗೊರೆ, ಸಿಹಿ ತಿನಿಸುಗಳ ಖರೀದಿ, ಪಟಾಕಿ, ಪೂಜಾ ಸಾಮಗ್ರಿ, ಅಡುಗೆಗೆ ಬೇಕಾದ ವಸ್ತುಗಳೆಲ್ಲದರ ಖರೀದಿಯೂ ಆಗಿಹೋಗಿದೆ. ಇನ್ನೇನು ಹಬ್ಬದ ಕೊನೆಯ ತಯಾರಿಯಷ್ಟೇ ನಡೆಯಬೇಕಿದೆ. ನಯನಮನೋಹರ ದೀಪಗಳ ಬೆಳಕಿನಲ್ಲಿ ವಿಶ್ವವನ್ನೇ ಮುಳುಗೇಳಿಸುವ ದೀಪಾವಳಿ ಹಿಂದೂಗಳಿಗೆ ಅತ್ಯಂತ ಪ್ರಮುಖ ದಿನವೆಂದು ಪರಿಗಣಿಸಲಾಗಿದೆ. ವಿಶ್ವದಾದ್ಯಂತ ಈ ವರ್ಷ ದೀಪಾವಳಿಯನ್ನು ಅಕ್ಟೋಬರ್ 31ರಂದು ಆಚರಿಸಲಾಗುತ್ತದೆ.

ಐದು ದಿನಗಳ ಹಬ್ಬವಾದ ದೀಪಾವಳಿ ಆಚರಣೆಗಳು ಧನ್ತೇರಸ್‌ನಿಂದ ಪ್ರಾರಂಭವಾಗುತ್ತದೆ. ದೀಪಾವಳಿಯ ಒಂದು ದಿನ ಮುಂಚಿತವಾಗಿ ಭಾರತದ ಅನೇಕ ಭಾಗಗಳಲ್ಲಿ ಜನರು ಚೋಟಿ ದೀಪಾವಳಿಯನ್ನು ಆಚರಿಸುತ್ತಾರೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಕಿರು ದೀಪಾವಳಿಯನ್ನು ಕೃಷ್ಣ ಪಕ್ಷ ಕಾರ್ತಿಕ ಮಾಸದ ಕರಾಳ 14ನೇ ದಿನ ಅಥವಾ ಚತುರ್ದಶಿ ತಿಥಿಯಂದು ಆಚರಿಸಲಾಗುತ್ತದೆ. ಮರುದಿನ ದೀಪಾವಳಿ ಅಮವಾಸ್ಯೆಯನ್ನು ಆಚರಿಸಲಾಗುತ್ತದೆ.

ಕಿರು ದೀಪಾವಳಿ ಎಂದರೇನು?

ಕಿರು ದೀಪಾವಳಿಯು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಸೂಚಿಸುತ್ತದೆ. ಭಾರತದಾದ್ಯಂತ ಬಹಳ ಉತ್ಸಾಹದಿಂದ ಇದನ್ನು ಆಚರಿಸಲಾಗುತ್ತದೆ. ಹಿಂದೂ ಪುರಾಣಗಳ ಪ್ರಕಾರ ನರಕಾಸುರನು ಸುಮಾರು 16,000 ಮಹಿಳೆಯರನ್ನು ಅಪಹರಿಸುತ್ತಾನೆ. ಈ ದಿನ ಶ್ರೀಕೃಷ್ಣನು ತನ್ನ ಪತ್ನಿ ಸತ್ಯಭಾಮೆಯ ಸಹಾಯದಿಂದ ರಾಕ್ಷಸ ರಾಜನನ್ನು ಸೋಲಿಸಿ ಅವನ ಸೆರೆಯಿಂದ ಮಹಿಳೆಯರನ್ನು ರಕ್ಷಿಸುತ್ತಾನೆ. ಈ ವಿಜಯವನ್ನು ಗುರುತಿಸಲು ಮತ್ತು ಶ್ರೀಕೃಷ್ಣನ ಆಶೀರ್ವಾದ ಪಡೆಯಲು ನರಕ ಚತುರ್ದಶಿಯನ್ನು ಆಚರಿಸಲಾಗುತ್ತದೆ. ಇದನ್ನು ನರಕ ಚೌದಾಸ್ ಮತ್ತು ನರಕ ನಿವಾರಣ್ ಚತುರ್ದಶಿ ಎಂದು ಕರೆಯಲಾಗುತ್ತದೆ. ಈ ದಿನ ಅನೇಕ ರಾಜ್ಯಗಳಲ್ಲಿ ಶ್ರೀ ಕೃಷ್ಣ ಮತ್ತು ಸತ್ಯಭಾಮೆಯನ್ನು ಪೂಜಿಸಲಾಗುತ್ತದೆ.

ಕಿರು ದೀಪಾವಳಿಯ ಮಹತ್ವ

ಕಿರು ದೀಪಾವಳಿಯು ಆಧ್ಯಾತ್ಮಿಕ ಮತ್ತು ಧಾರ್ಮಿಕ ಮಹತ್ವವನ್ನು ಹೊಂದಿದೆ. ಈ ದಿನ ಜನರು ತಮ್ಮ ಮನೆಗಳನ್ನು ದೀಪ, ಹೂವು, ಮೇಣದಬತ್ತಿಗಳಿಂದ ಅಲಂಕರಿಸುತ್ತಾರೆ. ಸಂಪತ್ತು ಮತ್ತು ಸಮೃದ್ಧಿ ದೇವತೆಯಾದ ಲಕ್ಷ್ಮಿ ದೇವಿಯು ಈ ದಿನ ತನ್ನ ಭಕ್ತರ ಮನೆಗಳಿಗೆ ಭೇಟಿ ನೀಡುತ್ತಾಳೆ ಎನ್ನುವ ನಂಬಿಕೆಯಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ.

ಆಚರಣೆಗಳು ಏನೇನು?

ಮುಂಜಾನೆ ಸ್ನಾನ

ಈ ದಿನ ಬೆಳಗ್ಗೆ ಬೇಗ ಎದ್ದು ಜನರು ಅಭ್ಯಂಗ ಸ್ನಾನ ಮಾಡುತ್ತಾರೆ. ಇದು ಜೀವನದಲ್ಲಿ ನಕಾರಾತ್ಮಕ ಅಂಶಗಳು ಅಥವಾ ಶಕ್ತಿಯನ್ನು ತೆಗೆದುಹಾಕಿ ಸಕಾರಾತ್ಮಕತೆ, ಭರವಸೆ ಮತ್ತು ಸಮೃದ್ಧಿಯ ಹೊಸ ಆರಂಭವನ್ನು ಸೂಚಿಸುತ್ತದೆ.

ದೀಪ ಬೆಳಗಿ ರಂಗೋಲಿ ಇಡುವುದು

ಲಕ್ಷ್ಮಿ ದೇವಿಯನ್ನು ಸ್ವಾಗತಿಸಲು ಮನೆ ಬಾಗಿಲಿನಲ್ಲಿ ಮಣ್ಣಿನ ದೀಪಗಳನ್ನು ಬೆಳಗಿಸಲಾಗುತ್ತದೆ, ವರ್ಣರಂಜಿತ ರಂಗೋಲಿಗಳನ್ನು ರಚಿಸಲಾಗುತ್ತದೆ.

Deepavali 2024

ಪೂಜೆ ವಿಧಿ

ಸಂಪತ್ತು ಮತ್ತು ಸಮೃದ್ಧಿಗಾಗಿ ಭಗವಾನ್ ಕೃಷ್ಣ ಮತ್ತು ಲಕ್ಷ್ಮಿ ದೇವಿಯನ್ನು ಈ ದಿನ ಪೂಜಿಸಲಾಗುತ್ತದೆ.
ಪೂಜೆ ಮಾಡುವ ಮೊದಲು ಮನೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ಹೂವು ಮತ್ತು ರಂಗೋಲಿಗಳಿಂದ ಅಲಂಕರಿಸಿ. ಬಳಿಕ ಅಭ್ಯಂಗ ಸ್ನಾನ ಮಾಡಿ. ಪೂಜೆ ಮಾಡುವಾಗ ಈಶಾನ್ಯಕ್ಕೆ ಮುಖ ಮಾಡಿ ಕುಳಿತುಕೊಳ್ಳಿ.

ತುಪ್ಪದ ದೀಪವನ್ನು ಬೆಳಗಿಸಿ ಮತ್ತು ಅದನ್ನು ವಿಗ್ರಹಗಳ ಮುಂದೆ ಇರಿಸಿ. ಕೃಷ್ಣ, ಲಕ್ಷ್ಮಿ, ಯಮ ಮತ್ತು ಹನುಮಾನ್ ದೇವರನ್ನು ಪೂಜಿಸಿ. ದೇವರಿಗೆ ಹೂವು, ಎಣ್ಣೆ, ಹಣ್ಣು ಮತ್ತು ಸಿಹಿತಿಂಡಿಗಳನ್ನು ಅರ್ಪಿಸಲಾಗುತ್ತದೆ. ಎಳ್ಳು, ಅಕ್ಕಿ ಕಾಳು, ತುಪ್ಪ, ಬೆಲ್ಲ ಮತ್ತು ಸಕ್ಕರೆಯನ್ನು ಪ್ರಸಾದವಾಗಿ ಹಂಚಿ. ಪೂಜೆಯ ಅನಂತರ ಮನೆಯ ಬಾಗಿಲ ಬಳಿ ಯಮ ದೀಪವನ್ನು ಬೆಳಗಿಸಿ. ಯಮ ದೇವರಿಗೆ ಗೌರವ ಸಲ್ಲಿಸಿ.

ಪೂಜೆಗೆ ಶುಭ ಸಮಯ

ದೃಕ್ ಪಂಚಾಂಗದ ಪ್ರಕಾರ ಚತುರ್ದಶಿ ತಿಥಿಯು ಅಕ್ಟೋಬರ್ 30ರಂದು ಮಧ್ಯಾಹ್ನ 1.15ರಿಂದ ಅಕ್ಟೋಬರ್ 31 ರಂದು ಮಧ್ಯಾಹ್ನ 3.52 ರವರೆಗೆ ಇರುತ್ತದೆ. ಅಭ್ಯಂಗ ಸ್ನಾನ ಮುಹೂರ್ತವು ಬೆಳಗ್ಗೆ 5.20 ರಿಂದ 6.32 ರವರೆಗೆ ಇರುತ್ತದೆ.

ಕಿರು ದೀಪಾವಳಿ ಮತ್ತು ದೀಪಾವಳಿ

ಹಿಂದೂಗಳಿಗೆ ಕಿರು ದೀಪಾವಳಿ ಮತ್ತು ದೀಪಾವಳಿ ಮಹತ್ವದ ಹಬ್ಬಗಳಾಗಿವೆ. ಈ ದಿನದಂದು ಹಿಂದೂ ಸಾವಿನ ದೇವರು ಯಮ ದೇವರ ಹೆಸರಿನಲ್ಲಿ ದೀಪವನ್ನು ಬೆಳಗಿಸಲಾಗುತ್ತದೆ. ಈ ದಿನ ಯಮನನ್ನು ಪೂಜಿಸುವುದು ಎಲ್ಲಾ ಪಾಪಗಳಿಗೆ ಶಿಕ್ಷೆಯನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ದೀಪಾವಳಿಯನ್ನು ಕಾರ್ತಿಕ ಮಾಸದ ಅಮವಾಸ್ಯೆ ತಿಥಿಯಂದು ಆಚರಿಸಲಾಗುತ್ತದೆ. ಈ ದಿನ ಲಕ್ಷ್ಮಿ, ಗಣೇಶ ಮತ್ತು ಸರಸ್ವತಿ ದೇವಿಯನ್ನು ಆರಾಧಿಸಲಾಗುತ್ತದೆ. ಮನೆಗೆ ಬರುವ ಲಕ್ಷ್ಮಿ ದೇವಿಯನ್ನು ಸ್ವಾಗತಿಸಲು ದೀಪಗಳನ್ನು ಬೆಳಗಿಸಲಾಗುತ್ತದೆ. ರಂಗೋಲಿ, ಹೂವುಗಳಿಂದ ಮನೆಯನ್ನು ಅಲಂಕರಿಸಲಾಗುತ್ತದೆ. ಜನರು ಕೂಡ ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ.

Petrol Price: ದೀಪಾವಳಿ ಹಬ್ಬಕ್ಕೆ ಗಿಫ್ಟ್: ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಸಾಧ್ಯತೆ

14 ವರ್ಷಗಳ ವನವಾಸದ ಅನಂತರ ಭಗವಾನ್ ರಾಮನು ಅಯೋಧ್ಯೆಗೆ ಹಿಂದಿರುಗಿದ ದಿನವನ್ನು ಇದು ಸೂಚಿಸುತ್ತದೆ. ಪಶ್ಚಿಮ ಬಂಗಾಳದಲ್ಲಿ ಈ ದಿನ ಕಾಳಿ ದೇವಿಯನ್ನು ಪೂಜಿಸಲಾಗುತ್ತದೆ. ಈ ದಿನ ಹೊಸ ವ್ಯಾಪಾರ ಆರಂಭ, ವ್ಯವಹಾರಗಳಿಗಾಗಿ ಹೊಸ ಖಾತೆ ತೆರೆಯುವುದು ಸಂಪ್ರದಾಯವಾಗಿದೆ.